ಡೈಲಿ ವಾರ್ತೆ:20 ಜುಲೈ 2023
ವರದಿ: ವಿದ್ಯಾಧರ ಮೊರಬಾ
ಡಿವೈಎಸ್ಪಿ ಅರುಣ ನಾಯಕ ನಿಧನ: ಪೊಲೀಸ ಇಲಾಖೆಯಿಂದ ಅಂತಿಮ ನಮನ!
ಅಂಕೋಲಾ : ಅಂಕೋಲಾದ ನಿವಾಸಿ ಬಾಗಲಕೋಟ ಜಿಲ್ಲೆಯ ಲೋಕಾಯುಕ್ತ ಡಿವೈಎಸ್‍ಪಿ ಅರುಣ ಬಿ. ನಾಯಕ (58) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ವಿಜಯಪುರ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಇರುವ ಒಳಾಂಗಣ ಕ್ರೀಡಾಂಗಣದಲ್ಲಿ ಅರುಣ ನಾಯಕ ರಾತ್ರಿ 8.30ರ ಸುಮಾರಿಗೆ ಇವರ ಇಷ್ಟವಾದ ಬ್ಯಾಡ್ಮಿಂಟನ್ ಆಡುತ್ತಿದ್ದರು. ಆಡುತ್ತಾ ಸುಸ್ಥಾದಂತೆ ಕಂಡು ಬಂದುದ್ದರಿಂದ ಗೆಳೆಯರು ಆಸ್ಪತ್ರೆಗೆ ಕರೆದೊಯ್ದರು ಪ್ರಯೋಜನವಾಗಲಿಲ್ಲ.
ಪ್ರಾರ್ಥಿವ ಶರೀರವನ್ನು ಸ್ವಗ್ರಾಮ ಬೊಳೆಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಸಹಸ್ರಾರು ಪ್ರಮುಖರು, ಅಭಿಮಾನಿಗಳು, ಕುಟುಂಬಸ್ಥರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಪೋಲಿಸ್ ಇಲಾಖೆಯ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ವಿಜಯಪುರ ಲೋಕಾಯುಕ್ತ ಎಸ್‍ಪಿ ಅನಿತಾ ಹದ್ದಣ್ಣನವರ, ಕಾರವಾರ ಲೋಕಾಯುಕ್ತ ಎಸ್‍ಪಿ ಕುಮಾರಚಂದ್ರ, ಡಿವೈಎಸ್ಪಿ ವೆಲೆಂಟೈನ್ ಡಿಸೋಜಾ, ಸಿಪಿಐ ಸಂತೋಷ ಶೆಟ್ಟಿ, ಪಿಎಸ್‍ಐ ಉದ್ದಪ್ಪ ಅಶೋಕ ಧರೆಪ್ಪನವರ್ ಮತ್ತು ಪೋಲಿಸ್ ಸಿಬ್ಬಂದಿಗಳು ಗೌರವಾರ್ಪಣೆ ಸಲ್ಲಿಸಿದರು. ಮೃತರು ಪತ್ನಿ, ಓರ್ವ ಮಗ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಂತಾಪ ಸೂಚನೆ : ಶಾಸಕ ಸತೀಶ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ, ವಸಂತ ನಾಯಕ ಜಮ ಗೋಡ, ನಿವೃತ್ತ ಪ್ರೋ. ಕೆ.ವಿ.ನಾಯಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ, ಭಾಸ್ಕರ ನಾರ್ವೇಕರ, ವಂದಿಗೆ ಗ್ರಾಪಂ.ಅಧ್ಯಕ್ಷೆ ಪುಷ್ಪಲತಾ ನಾಯಕ, ಉಪಾಧ್ಯಕ್ಷ ಪುಟ್ಟು ಬೊಮ್ಮಿಗುಡಿ, ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ, ರಾಮು ಕೆಂಚನ ಹಿರೇಗುತ್ತಿ ಸೇರಿದಂತೆ ಹಲವು ಪ್ರಮುಖರು ಸಂತಾಪ ಸೂಚಿಸಿದ್ದಾರೆ.