ಮಹಮ್ಮದ ಸೈಯದ್ – ಶಶಿಕಾಂತ ಕೋಳೇಕರ

ಡೈಲಿ ವಾರ್ತೆ: 21 ಜುಲೈ 2023

ವರದಿ: ವಿದ್ಯಾಧರ ಮೊರಬಾ

ಲೋಕೋಪಯೋಗಿ ಇಲಾಖೆಯ ನೂತನ ಅಧಿಕಾರಿಯಾಗಿ ಮಹಮ್ಮದ ಸೈಯದ್

ಅಂಕೋಲಾ : ಇಲ್ಲಿಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದ ಶಶಿಕಾಂತ ಕೋಳೇಕರ ವರ್ಗಾವಣೆಗೊಂಡಿದ್ದಾರೆ. ಇವರ ಸ್ಥಾನಕ್ಕೆ ಕುಮಟಾದಲ್ಲಿ ಸಹಾಯಕ ಅಭಿಯಂತರಾಗಿ ನಿರ್ವಹಿಸುತ್ತಿದ್ದ ಮಹಮ್ಮದ ಇಸಾಕ ಸೈಯದ ಅವರು ಪದೋನ್ನತಿ ಪಡೆದು, ಅಂಕೋಲಾಕ್ಕೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾಗಿ ಸೋಮವಾರ ಅಧಿಕಾರ ವಹಿಸಿಕೊಂಡಿದ್ದಾರೆ.

ಮಹಮ್ಮದ ಇಸಾಕ ಸೈಯದ ಅವರು ಮೂಲತಃ ಕಾರವಾರದವರಾಗಿದ್ದು, ಇಲಾಖೆಯಲ್ಲಿ ಕಳೆದ 28 ವರ್ಷಗಳ ಕಾಲ ವಿವಿಧ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು. ಶಶಿಕಾಂತ ಕೋಳೇಕರ ಅವರ ತಮ್ಮ ಅವಧಿಯಲ್ಲಿ ತಾಲೂಕಿನಲ್ಲಿ 8 ಬೃಹತ್ ಸೇತುವೆ ಹಾಗೂ 49 ಕಿರು ಸೇತುವೆ, ಪಟ್ಟಣ ಮತ್ತು ಗ್ರಾಮೀಣ ಭಾಗ ಸೇರಿದಂತೆ ಗುಣಮಟ್ಟದ ರಸ್ತೆ ಅಭಿವೃದ್ಧಿ ಕೆಲಸ ನಿರ್ವಹಿಸಿದ್ದಾರೆ.