ಡೈಲಿ ವಾರ್ತೆ:22 ಜುಲೈ 2023

ಉಡುಪಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ:ಅಪಾಯದಲ್ಲಿ ಕುಂದಾಪುರ ಕೋಡಿ ಸೀ ವಾಕ್!

ಕುಂದಾಪುರ:ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ಕುಂದಾಪುರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೋಡಿ ಸೀವಾಕ್ ಗೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿದ್ದು, ಅಪಾಯ ಎದುರಾಗಿದೆ.

ಅಲೆಗಳು ತಡೆಗೋಡೆಗೆ ಅಪ್ಪಳಿಸಿ ಸೀ ವಾಕ್ ಒಳ ಆವರಣ ಪ್ರವೇಶಿಸುತ್ತಿದೆ. ಇದು ಸೀ ವಾಕ್ ಭದ್ರತೆಗೆ ಅಪಾಯ ತಂದೊಡ್ಡಿದ್ದು, ಅಲೆಯ ಅರಿವಿಲ್ಲದೆ ಸೀ ವಾಕ್ ನ ತುದಿಗೆ ಸಾಗುವ ಪ್ರವಾಸಿಗರು ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವುದರ ಜೊತೆಗೆ ದೂರದೂರಿನಿಂದ ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.