ಡೈಲಿ ವಾರ್ತೆ: 22 ಜುಲೈ 2023

ಸಾಲಿಗ್ರಾಮ – ಕೋಟ ಪಂಚವರ್ಣ ಸಂಸ್ಥೆಯಿಂದ ಚಿತ್ರಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಾಗಾರ:
ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಬೇಕು- ನರೇಂದ್ರ ಕುಮಾರ್ ಕೋಟ

ಕೋಟ: ಮಕ್ಕಳಲ್ಲಿ ಪರಿಸರ ಪ್ರಜ್ಞೆ ಹಾಗೂ ಅದನ್ನು ಪ್ರೀತಿಸುವ ಕಾರ್ಯಕ್ರಮ ಅಗತ್ಯವಾಗಿ ಹಮ್ಮಿಕೊಳ್ಳಬೇಕು ಆ ಮೂಲಕ ಮಕ್ಕಳ ಪರಿಸರ ಜಾಗೃತಿ ಮೂಡಿಸಲು ಸಾಧ್ಯ ಎಂದು ಸಾಹಿತಿ ಶಿಕ್ಷಕ ನರೇಂದ್ರ. ಕುಮಾರ್ ಕೋಟ ಹೇಳಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಪಾಡಿ ಇಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪಾಂಚಜನ್ಯ ಸಂಘ ಪಾರಂಪಳ್ಳಿ ಸಂಯೋಜನೆಯೊಂದಿಗೆ ಗೆಳೆಯರ ಬಳಗ ಕಾರ್ಕಡ ಸಹಯೋಗದೊಂದಿಗೆ ಹಮ್ಮಿಕೊಂಡ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪರಿಸರ ಜಾಗೃತಿ 8ರ ಮಾಲಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಮನಸ್ಸಿನ ಮಾಲಿನ್ಯವನ್ನು ತಡೆಗಟ್ಟುವ ಮೂಲಕ ಕಸವನ್ನು ನಿರ್ದಿಷ್ಟವಾಗಿ ವಿಲೇವಾರಿ ಮಾಡುವಂತೆ ಆರೋಗ್ಯಕ್ಕೆ ಉತ್ತಮವಾದ ಆಹಾರ ಸೇವನೆ, ಕುಲಾಂತರಿ ಹಣ್ಣುಗಳನ್ನು ಅತಿಯಾಗಿ ತಿನ್ನದಂತೆ ಅಜಿನ ಮೋಟೋ ಮತ್ತು ಟೇಸ್ಟಿಂಗ್ ಪೌಡರ್ ಗಳ ಅಪಾಯತೆಯನ್ನು
ಪ್ರಾತ್ಯಕ್ಷಿಕೆ ಮೂಲಕ ಮನಮುಟ್ಟುವಂತೆ ವಿವರಿಸಿದರು.

ಪರಿಸರದ ಮೇಲೆ ಅತಿಯಾದ ಪ್ರೀತಿ ಸೃಷ್ಟಿಸಿಕೊಳ್ಳಬೇಕು, ಮನೆ ತಿಂಡಿ ಉಪಯುಕ್ತ ಆಹಾರ ಸೇವನೆ ಮಾಡಬೇಕು , ಗಿಡನೆಡುವ ಮತ್ತು ಪ್ರೀತಿಸುವ ಸುತ್ತಲಿನ ಮಣ್ಣು, ಜಲ ಪ್ರಾಣ ಪಕ್ಷಿಗಳನ್ನು ಪ್ರೀತಿಸುವ ಚಿನ್ನದ ಕತ್ತರಿ ಮತ್ತು ಸೂಜಿಯ ಕಥೆಯ ಮುಖೇನ ಸಂಬಂಧಗಳನ್ನು ಜೋಡಿಸುವ ಸೂಜಿಯಾಗಿ
ಬದುಕನ್ನು ಪ್ರೀತಿ ಸುವಂತೆ ತಿಳಿಸಿದರು.

ಪ್ಲಾಸ್ಟಿಕ್ ಮುಕ್ತ ಸಮಾಜ ,ಹಸಿರು ಕ್ರಾಂತಿ ಪಸರಿಸಿ
ನಮ್ಮ ಪರಿಸರವನ್ನು ಶುಚಿಯಾಗಿರಿಸಲು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಗೊಳಿಸಿ ಕಸ ಎಲ್ಲದರಲ್ಲಿ ಎಸೆಯದಿರಿ,ಅತಿಯಾದ ಪ್ಲಾಸ್ಟಿಕ್ ಬಳಕೆ ಕುರಿತು ಹಾಗೂ ನಮ್ಮ ಪರಿಸರದಲ್ಲಿ ಹಸಿರು ವಾತಾವರಣ ಸೃಷ್ಠಿಸಲು ವಿದ್ಯಾರ್ಥಿಗಳಿಗೆ ಕರೆ ಇತ್ತರು.
ಕಾರ್ಯಕ್ರಮವನ್ನು ರೋಟರಿ ಕ್ಲಬ್ ಕೋಟ ಸಿ.ಟಿ ಅಧ್ಯಕ್ಷ ವೆಂಕಟೇಶ ಆಚಾರ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಶಾಲಾ ಅಕ್ಷರ ರಥ ಸಮಿತಿ ಅಧ್ಯಕ್ಷ ನಾಗರಾಜ್ ಗಾಣ ಗ ಸಾಲಿಗ್ರಾಮ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಶಂಕರ್ ದೇವಾಡಿಗ,ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ,ಪಾಂಚಜನ್ಯ ಸಂಘ ಪಾರಂಪಳ್ಳಿ ಹಂದಟ್ಟು ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಪಂಚವರ್ಣದ ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣ ಗ ಶೇವಧಿ,ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ವನಿತಾ ಉಪಾಧ್ಯ ಸ್ವಾಗತಿಸಿದರು.ಸದಸ್ಯೆ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಧ್ಯಕ್ಷ ರವೀಂದ್ರ ಕೋಟ ಪ್ರಾಸ್ತಾವನೆ ಸಲ್ಲಿಸಿ ಕಾರ್ಯಕ್ರಮ ಸಂಯೋಜಿಸಿದರು.