ಡೈಲಿ ವಾರ್ತೆ: 24 ಜುಲೈ 2023

ಸುರತ್ಕಲ್: ಗಾಳಿ-ಮಳೆಗೆ ಕುಸಿದು ಬಿದ್ದ ಟೋಲ್ ಗೇಟ್ ಕ್ಯಾಬಿನ್

ಸುರತ್ಕಲ್‌: ಭಾರೀ ಗಾಳಿ-ಮಳೆಗೆ ಟೋಲ್ ಗೇಟ್ ಕ್ಯಾಬಿನ್ ಹಾರಿ ಹೋಗಿದ್ದು, ಇದರಿಂದ ಸ್ಕೂಟರ್ ಸವಾರ ಕ್ಷಣ ಮಾತ್ರದ ಅಪಾಯದಿಂದ ಪಾರಾದ ಘಟನೆ

ಟೋಲ್ ಗೇಟ್ ರದ್ದುಗೊಳಿಸಿ ಹಲವು ತಿಂಗಳು ಕಳೆದರೂ ಇದುವರೆಗೆ ಟೋಲ್ ಕೇಂದ್ರವನ್ನು ತೆರವುಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ.
ಟೋಲ್ ಕೇಂದ್ರದ ಒಳಭಾಗದಲ್ಲಿ ಹೋಂಡಗುಂಡಿಗಳಾಗಿದ್ದು ವಾಹನ ಸವಾರರು ಎದ್ದು ಬಿದ್ದು ಹೋಗುವಂತಹ ಪರಿಸ್ಥಿತಿ ಇದ್ದು, ಇದೀಗ ಭಾರೀ ಗಾಳಿ ಮಳೆಗೆ ನಿರುಪಯುಕ್ತ ಕ್ಯಾಬಿನ್ ಒಂದು ರಸ್ತೆಯ ನಡುವೆ ಕುಸಿದು ಬಿದ್ದಿದೆ.