ಡೈಲಿ ವಾರ್ತೆ:25 ಜುಲೈ 2023

ಮಾನ್ಸೂನ್‌ನಲ್ಲಿ ಸೊಪ್ಪನ್ನು ತಿಂದರೆ ಸೋಂಕಿನ ಭಯವಿದೆಯೇ? ಹಾಗಾದರೆ ನಿಮಗಾಗಿ ಸರಳ ಸಲಹೆಗಳು

ಬೆಂಗಳೂರು: ಮಳೆಗಾಲದಲ್ಲಿ ಸೋಂಕಿನ ಭಯ ಇರುತ್ತದೆ. ವಿಶೇಷವಾಗಿ ಸೊಪ್ಪು ತಿನ್ನಲು ಹಲವರು ಹೆದರುತ್ತಾರೆ. ಆದರೆ ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಹಿನ್ನೆಲೆಯಲ್ಲಿ ಸೊಪ್ಪು ಸ್ವಚ್ಛಗೊಳಿಸುವ ಸಲಹೆಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಬನ್ನಿ ನಾವು ನಿಮಗೆ ಕೆಲವು ಆರೋಗ್ಯಕರವಾದ ಸಲಹೆ ನೀಡುತ್ತೇವೆ.

ಮಳೆಗಾಲದಲ್ಲಿ ಅನೇಕರು ಸೊಪ್ಪು ತಿನ್ನಲು ಹೆದರುತ್ತಾರೆ. ಕಾರಣ ಮಳೆಗಾಲದಲ್ಲಿ ಗದ್ದೆಯಲ್ಲಿನ ಹಸಿರೆಲೆಯಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವ ಭೀತಿ. ಹೊಲಗಳ ಜತೆಗೆ ಎಲ್ಲೆಂದರಲ್ಲಿ ಕೆಸರು ನೀರು ಸಂಗ್ರಹವಾಗಿರುತ್ತದೆ. ಇದರಿಂದಾಗಿ ಅಲ್ಲಿ ಬೆಳೆಯುವ ಸಸ್ಯಗಳಲ್ಲಿ ಸೂಕ್ಷ್ಮಾಣುಗಳು ಮತ್ತು ಬ್ಯಾಕ್ಟೀರಿಯಾಗಳು ಹುಟ್ಟುತ್ತವೆ. ಎಲೆಗಳಿಗೆ ಸೋಂಕು ತಗುಲದಿದ್ದರೂ ಮಳೆಗಾಲದಲ್ಲಿ ರೋಗ ಬರುವ ಸಾಧ್ಯತೆ ಹೆಚ್ಚು. ಈ ಋತುವಿನಲ್ಲಿ, ಜನರು ಶೀತ, ಕೆಮ್ಮು, ಕಾಮಾಲೆ, ಭೇದಿ ಇತ್ಯಾದಿಗಳ ಭಯ ಇರುತ್ತದೆ.

ಮಾನ್ಸೂನ್ ರೋಗಗಳ ಅಪಾಯವನ್ನು ಕಡಿಮೆ ಮಾಡಲು, ಎಲ್ಲರೂ ಸೊಪ್ಪುಗಳನ್ನು ಸರಿಯಾಗಿ ತಿನ್ನಬೇಕು. ಆದ್ದರಿಂದ ನಿಮ್ಮ ಆಹಾರದಿಂದ ಸೊಪ್ಪುಗಳನ್ನು ಹೊರಗಿಡಬೇಡಿ.
ಸೊಪ್ಪುಗಳನ್ನು ಚೆನ್ನಾಗಿ ತೊಳೆಯುವುದು ಮತ್ತು ಅವುಗಳನ್ನು ಬೇಯಿಸುವುದು ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸೊಪ್ಪುಳನ್ನು ಸ್ವಚ್ಛಗೊಳಿಸಲು ಸರಿಯಾದ ಮಾರ್ಗ ಯಾವುದು ಎನ್ನವ ಪ್ರಶ್ನೆ ಇರುತ್ತದೆ.

ಸೊಪ್ಪು,ತರಕಾರಿ ಖರೀದಿಸುವುದರಿಂದ ಹಿಡಿದು ಅಡುಗೆ ಮಾಡುವವರೆಗೆ ಸರಳ ಸಲಹೆಗಳು ಆರೋಗ್ಯಕ್ಕೆ ಒಳ್ಳೆಯದು.
ಮಾರುಕಟ್ಟೆಯಿಂದ ತಾಜಾ ಸೊಪ್ಪುಗಳನ್ನು ಖರೀದಿಸುವ ಮುನ್ನ ಅವುಗಳ ಕಾಂಡವನ್ನು ಪರೀಕ್ಷಿಸಿ.. ಹಳದಿ ಬಣ್ಣಕ್ಕೆ ತಿರುಗಿದರೆ.. ಹುಳುಗಳಿದ್ದರೆ ಖರೀದಿಸಬೇಡಿ. ಎಚ್ಚರಿಕೆಯಿಂದ ಖರೀದಿಸಿ. ಮಾರುಕಟ್ಟೆಯಿಂದ ತಂದ ಸೊಪ್ಪುಗಳನ್ನು ಚೆನ್ನಾಗಿ ತೊಳೆಯಬೇಕು. ಸೊಪ್ಪುಗಳನ್ನು ತೊಳೆಯಲು ನೀರಿಗೆ ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಮತ್ತು ಅವುಗಳನ್ನು ಎರಡು ಅಥವಾ ಮೂರು ಬಾರಿ ಚೆನ್ನಾಗಿ ತೊಳೆಯಿರಿ.
ಸೊಪ್ಪುಗಳನ್ನು ಸ್ವಲ್ಪ ಸಮಯದವರೆಗೆ ಐಸ್ ನೀರಿನಲ್ಲಿ ನೆನೆಸಿ. ಹೀಗೆ ಮಾಡುವುದರಿಂದ ಸೊಪ್ಪು ತಾಜಾ ವಾಗಿರುತ್ತವೆ.

ಸ್ವಚ್ಛಗೊಳಿಸಿದ ನಂತರ ಸೊಪ್ಪುಗಳನ್ನು ನೇರವಾಗಿ ಬೇಯಿಸಬಾರದು. ಚೆನ್ನಾಗಿ ತೊಳೆದ ನಂತರವೂ ಸೂಕ್ಷ್ಮಜೀವಿಗಳನ್ನು ಹೊಂದಿರುತ್ತವೆ. ನೀರಿನಲ್ಲಿ ಕುದಿಸಿ ಬಳಕೆ ಮಾಡಿ. ಮಾರುಕಟ್ಟೆಯಿಂದ ಸೊಪ್ಪು ತೆಗೆದುಕೊಂಡು ಬಂದರೆ ಚೆನ್ನಾಗಿ ತೊಳೆದು ಬಟ್ಟೆಯಿಂದ ಸ್ವಚ್ಚವಾಗಿಸಿಕೊಳ್ಳಿ.