ಡೈಲಿ ವಾರ್ತೆ:29 ಜುಲೈ 2023

ಅರೋಗ್ಯ: ಕಿತ್ತಳೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಏನೇನು ಪ್ರಯೋಜನಗಳಿವೆ ಗೊತ್ತಾ.?

ಬಹಳಷ್ಟು ಜನರಿಗೆ ಇಷ್ಟವಾಗುವ ಹಣ್ಣುಗಳಲ್ಲಿ ಕಿತ್ತಳೆ ಹಣ್ಣು ಕೂಡ ಒಂದು.
ಕಿತ್ತಳೆ ರುಚಿಯಲ್ಲಿ ಉತ್ತಮವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.

ಕಿತ್ತಳೆಯಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಕೆಲಸ ಮಾಡುತ್ತದೆ. ಕಿತ್ತಳೆ ಹಣ್ಣನ್ನು ನೇರವಾಗಿಯೂ ಸೇವಿಸಬಹುದು ಅಥವಾ ಅದನ್ನು ರಸವಾಗಿಯೂ ಸೇವಿಸಬಹುದು. ಹಾಗಾದರೆ ಕಿತ್ತಳೆ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಪ್ರಯೋಜನಗಳೇನು ತಿಳಿಯೋಣ ಬನ್ನಿ.

* ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ, * ದೇಹದಲ್ಲಿ ಅಲ್ಸರ್ ಸಮಸ್ಯೆಯಿದ್ದರೆ ಅದನ್ನು ತಡೆಯುತ್ತದೆ.

* ಕಿತ್ತಳೆ ಹಣ್ಣನ್ನು ನಿಯಮಿತವಾಗಿ ಸೇವಿಸಿದರೆ, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

* ಹೃದಯ ಸಂಬಂಧಿ ಯಾವುದೇ ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ.

* ಕಿತ್ತಳೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಿದ್ದು, ಇದು ಮಲಬದ್ಧತೆಯ ಸಮಸ್ಯೆಯನ್ನು ತಡೆಯುತ್ತದೆ.

* ಚರ್ಮ ಮತ್ತು ಕೂದಲನ್ನು ಉತ್ತಮವಾಗಿ ಸಂರಕ್ಷಣೆ ಮಾಡುವುದು ಕೂಡ ಕಿತ್ತಳೆ ಹಣ್ಣಿನ ಚಮತ್ಕಾರ.

* ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ, ಎ ಹಾಗೂ ಪೊಟ್ಯಾಶಿಯಂನಂತಹ ಅಂಶಗಳು ಇರುವುದರಿಂದ, ಕಿತ್ತಳೆ ಹಣ್ಣು ಕಣ್ಣಿನ ಆರೋಗವನ್ನು ವೃದ್ಧಿಸುತ್ತದೆ.

* ಕಿತ್ತಳೆ ಹಣ್ಣನ್ನು ಗರ್ಭಿಣಿಯರು ಆರು ತಿಂಗಳ ಬಳಿಕ ನಿತ್ಯ ಸೇವನೆ ಮಾಡಿದರೆ, ಹೆರಿಕೆ ಸಮಯದಲ್ಲಿ, ಹೆಚ್ಚು ಅನುಕೂಲವಾಗುವುದರ ಜತೆಗೆ ಆರೋಗ್ಯವನ್ನು ವೃದ್ಧಿಸುತ್ತದೆ.

* ಕಿತ್ತಳೆ ಹಣ್ಣಿನಲ್ಲಿ ಫೋಲಿಕ್ ಹಾಗೂ ಫೋಲೇಟ್ ಆಮ್ಲದ ಅಂಶ ಇರುವುದರಿಂದ ಇವು ಮೆದುಳಿನ ಬೆಳವಣಿಗೆಗೆ ಸಹಕಾರಿ ಆಗುತ್ತದೆ.

* ಕಿತ್ತಳೆ ಹಣ್ಣು ಲಿಮೋನೆನ್ ಅಂಶವನ್ನು ಒಳಗೊಂಡಿದ್ದು, ಇದರ ಸೇವನೆಯಿಂದ ಅತಿಯಾದ ದೇಹದ ಕೊಬ್ಬು ನಿಯಂತ್ರಣವಾಗುತ್ತದೆ.

* ಕಿತ್ತಳೆ ಹಣ್ಣಿನಲ್ಲಿ ಡಿ-ಲಿಮೋನೆನ್ ಪೋಷಕಾಂಶ ಇರುವುದರಿಂದ ಇದು, ಸ್ತನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಚರ್ಮದ ಕ್ಯಾನ್ಸರ್ ನಂಥ ಭಯಾನಕ ರೋಗವನ್ನು ತಡೆಯುತ್ತದೆ ಎನ್ನುವುದು ಸಂಶೋಧನೆಗಳಿಂದ ಹೊರ ಬಂದ ಸತ್ಯ.

*ದೃಷ್ಟಿಯ ಚುರುಕುತನಕ್ಕೆ ಕಿತ್ತಳೆ ಹಣ್ಣು ಸೇವನೆ ಉತ್ತಮ.

*ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಉರಿಯೂತದಂಥ * ಸಮಸ್ಯೆಗಳು ಕಡಿಮೆ ಆಗುತ್ತದೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.