ಡೈಲಿ ವಾರ್ತೆ:29 ಜುಲೈ 2023
ಜು. 30 ರಂದು(ನಾಳೆ) ಸಾಸ್ತಾನ ಸೊಸೈಟಿ ಚುನಾವಣೆ: ಚುನಾವಣೆ ಪ್ರಕ್ರಿಯೆಲ್ಲಿ ಲೋಪ – ಚುನಾವಣೆ ಮುಂದೂಡುವಂತೆ ಅಗ್ರಹಿಸಿ ಬಿಜೆಪಿ ಬೆಂಬಲಿತರಿಂದ ಪ್ರತಿಭಟನೆ!
ಕೋಟ: ಸಾಸ್ತಾನ ಸಹಕಾರಿ ವ್ಯವಸಾಯಕ ಸಂಘ (ರಿ) ಇದರ ಚುನಾವಣೆ ಜು.30 ಭಾನುವಾರ ನಡೆಯಲಿದ್ದು ಚುನಾವಣಾ ಪ್ರಕ್ರಿಯೆಲ್ಲಿ ಲೋಪವೆಸಗಲಾಗಿದೆ ಚುನಾವಣೆ ಮುಂದೂಡುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತರು ಪ್ರತಿಭಟಿಸಿದ ಘಟನೆ ನಡೆದಿದೆ.
ಶನಿವಾರ ಬೆಳಿಗ್ಗೆ ಸಾಸ್ತಾನ ಸಿ.ಎ ಬ್ಯಾಂಕ್ ಎದುರುಗಡೆ ಬಿಜೆಪಿ ಬೆಂಬಲಿತರು ದಿಢೀರ್ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅಭ್ಯರ್ಥಿ ಪ್ರತಾಪ್ ಶೆಟ್ಟಿ ಸಾಸ್ತಾನ ಇವರು ಮಾತನಾಡಿ ಮತದಾನದ ಹಕ್ಕು ಪಡೆದವರು 2174 ಜನ ಆದರೆ ಚುನಾವಣೆಗೆ ಒಂದೆರಡು ದಿನಗಳಿರುವಾಗ 534 ಹೆಚ್ಚುವರಿ ಮತದಾರರ ಪಟ್ಟಿ ಸೇರ್ಪಡೆಗೊಳಿಸಿದ್ದಾರೆ. ಅದು ಸಹ ನಮ್ಮ ಕೈಗೆ ಸಿಕ್ಕಿಲ್ಲ ಮತದಾರರ ಪಟ್ಟಿಯನ್ನೆ ನಮ್ಮ ಅಭ್ಯರ್ಥಿಗಳಿಗೆ ಕೊಡದೆ ಕಾಂಗ್ರೆಸ್ ಬೆಂಬಲಿತರು ಪಟ್ಟಿ ಹಿಡಿದು ಮತಪ್ರಚಾರದಲ್ಲಿ ನಿರತರಾಗಿದ್ದಾರೆ ಹಾಗಾದರೆ ಇದು ಸಹಕಾರ ಕಾಯ್ದೆ ಉಲ್ಲಂಘನೆ ಅಲ್ಲವೆ, ಕಾಂಗ್ರೆಸ್ ಬೆಂಬಲಿತರು ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ಹವಣಿಸಿ ಈ ತಂತ್ರ ರೂಪಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ ಸಂವಿಧಾನ ರೂಪಿಸಿದ ಅಂಬೇಡ್ಕರ್ ರವರಿಗೆ ಮಾಡಿದ ಅವಮಾನ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರಹಾಕಿದರು. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು.
ನಂತರ ಒಂದು ಗಂಟೆ ತಡವಾಗಿ ಪ್ರತಿಭಟನಾ ಸ್ಥಳಕ್ಕೆ ಬಂದ ಚುನಾವಣೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ನೀವು ಕೋರ್ಟ್ ಆದೇಶದ ಅನುಸಾರ 534 ಜನರಿಗೆ ಅಥವಾ ಇನ್ನೆರಡು ಪಟ್ಟಿ ನೀಡಿದರೂ ಅವಕಾಶ ನೀಡಿ ಅದಕ್ಕೆ ನಮ್ಮದೆನು ತಕರಾರು ಇಲ್ಲ ಆದರೆ ಚುನಾವಣಾ ಪ್ರಕ್ರಿಯೆ ನಾಲ್ಕು ದಿನ ಮುಂದೂಡಿ ನಮ್ಮಗೂ ಮತದಾರರ ಬಳಿ ತೆರಳಿ ಮತಯಾಚಿಸಲು ಅವಕಾಶ ನೀಡಿ ಎಂದು ಆಗ್ರಹಿಸಿದರು.
ಇದಕ್ಕೆ ಚುನಾವಣಾ ಅಧಿಕಾರಿ ರೋಹಿತ್ ತಳ್ಳಿಹಾಕಿ ನಿಗದಿಯಂತೆ ಚುನಾವಣಾ ನಡೆಯಲಿದೆ ಇದರಲ್ಲಿ ನಾವೆನು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಾಗ ಪ್ರತಿಭಟನಾಕಾರರು ನೀವು ಆಳುವ ಸರಕಾರದ ಪರ ಕೆಲಸ ಮಾಡಬೇಡಿ ಸಂವಿಧಾನದ ಪ್ರಕಾರವೇ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಿ ನಿಮ್ಮ ಅಧಿಕಾರ ದುರ್ಬಳಕೆ ಸಲ್ಲ ಎಂದು ಅಕ್ರೋಶ ಹೊರಹಾಕಿ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಮುಖಂಡರಾದ ಐರೋಡಿ ವಿಠ್ಠಲ ಪೂಜಾರಿ, ಶಂಕರ್ ಅಂಕದಕಟ್ಟೆ, ಸುರೇಶ್ ಕುಂದರ್, ರಾಜು ಪೂಜಾರಿ ಕಾರ್ಕಡ, ಮತ್ತಿತರರು ಇದ್ದರು. ಕೋಟ ಠಾಣಾಧಿಕಾರಿ ಶಂಭುಲಿಂಗಯ್ಯ ಸ್ಥಳದಲ್ಲಿದ್ದು ಮುಂಜಾಗ್ರತಕ್ರಮ ವಹಿಸಿದ್ದರು.
ಹೈಕೋರ್ಟ್ ಅದೇಶದ ಅನುಸಾರ ಮತದಾರರ ಪಟ್ಟಿಗೆ ಅವಕಾಶ ಕಲ್ಪಿಸಬೇಕಾದ್ದು ನಮ್ಮ ಆದ್ಯ ಕರ್ತವ್ಯ ಇದರಲ್ಲಿ ಅಧಿಕಾರಿಗಳಾಗಿ ನಾವೇನು ಮಾಡಲು ಸಾಧ್ಯವಿಲ್ಲ ನಿಗದಿಯಂತೆ ಚುನಾವಣೆ ನಡೆಯಲಿದೆ.
ರೋಹಿತ್ ಚುನಾವಣಾಧಿಕಾರಿ