ಡೈಲಿ ವಾರ್ತೆ: 29 ಜುಲೈ 2023
ವರದಿ: ವಿದ್ಯಾಧರ ಮೊರಬಾ
ಬಿಸಿಎಂ. ಹೆಣ್ಣುಮಕ್ಕಳ ವಸತಿ ನಿಲಯದಲ್ಲಿ ನಡೆದ ಕಾರ್ಯಕ್ರಮ ಮಾನವ ಕಳ್ಳ ಸಾಗಣೆ ತಡೆಯಲು ಸದಾ ಜಾಗೃತರಾಗಬೇಕು : ನ್ಯಾ.ಮನೋಹರ ಎಂ.
ಅಂಕೋಲಾ : ಇಂದಿನ ದಿನಗಳಲ್ಲಿ ಆಮಿಷಗಳಿಗೆ ಬಲಿಯಾಗಿ ದೌರ್ಜನ್ಯಕ್ಕೀಡಾಗುವದಕ್ಕಿಂತ ಸದಾ ಜಾಗೃ ತರಾಗಿರಬೇಕು. ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳನ್ನು ಸದಾ ಜಾಗೃತ ಸ್ಥಿತಿಯಲ್ಲಿರುವಂತೆ ಕಾಳಜಿ ವಹಿಸುವ ಜತೆ ಕಾನೂನಿನ ಅರಿವು ಮತ್ತು ಜಾಗೃತಿ ಮೂಡಿಸಿದರೆ ಮಾನವ ಕಳ್ಳಸಾಗಣೆಯ ಪಿಡುಗನ್ನು ತಡೆಯಲು ಸಾಧ್ಯ ಎಂದು ಇಲ್ಲಿಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮನೋಹರ ಎಂ. ಹೇಳಿದರು.
ತಾಲೂಕು ಕಾನೂನು ಸಮಿತಿ, ವಕೀಲರ ಸಂಘ, ರೋಟರಿ ಕ್ಲಬ್ ಆಫ್ ಅಂಕೋಲಾ ಮತ್ತು ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ಶನಿವಾರ ಹಮ್ಮಿಕೊಂಡ ಮಾನವ ಕಳ್ಳ ಸಾಗಾಣ ಕೆ ತಡೆ ದಿನಾಚರಣೆ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.
ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ, ಮಹಿಳೆಯರಲ್ಲಿ ಅರಿವು ಮತ್ತು ಪ್ರತಿಭಟಿಸುವ ಗುಣ ಇರಬೇಕು. ವ್ಯವಸ್ಥೆ ಯನ್ನು ದೂರುವದಕ್ಕಿಂತ ನಮ್ಮ ಜವಾಬ್ದಾರಿಯನ್ನೂ ಅರಿಯಬೇಕು. ತಪ್ಪುಗಳನ್ನು ವಿರೋಧಿಸಿ ಮಾನವ ಮೌಲ್ಯಗಳಗಳನ್ನು ಉಳಿಸಬೇಕು. ಸಂವಿಧಾನದಲ್ಲಿ ಎಲ್ಲರಿಗೂ ರಕ್ಷಣೆ ಇದೆ ಎಂದರು.
ಜೆ.ಎಂ.ಎಫ್.ಸಿ.ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಮಾತನಾಡಿ, ಕಾನೂನು ಸೇವಾ ಸಮಿತಿ ಅಡಿಯ ಲ್ಲಿ ಉಚಿತ ಕಾನೂನು ನೆರವನ್ನು ಪಡೆಯಬಹುದು. ಇತ್ತೀಚೆಗೆ ವ್ಯಾಜ್ಯಗಳನ್ನು ನ್ಯಾಯಾಲಯದಲ್ಲಿ ಬೇರೆ ಬೇರೆ ವಿಧಾನಗಳ ಮೂಲಕ ಬಗೆಹರಿಸಿಕೊಳ್ಳುತ್ತಿರುವುದು ಹೆಚ್ಚುತ್ತಿರುವ ಕುರಿತು ಖೇದ ವ್ಯಕ್ತಪಡಿಸಿದರು.
ಹಿರಿಯ ವಕೀಲಯರಾದ ಉಮೇಶ ಎನ್.ನಾಯ್ಕ ಮಾನವ ಕಳ್ಳಸಾಗಣೆ ತಡೆ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಅಪರಿಚಿತ ಮೇಲಿನ ಅತಿಯಾದ ನಂಬಿಕೆ ದೌರ್ಜನ್ಯಗಳಿಗೆ ದಾರಿಯಾಗುತ್ತದೆ. ಧಿಡೀರ ಶ್ರೀಮಂತರಾಗಲೂ ಅಡ್ಡದಾರಿ ಹಿಡಿದು ಮಾನವ ಕಳ್ಳಸಾಗಣೆದಾರರ ಬಲೆಗೆ ಬೀಳುತ್ತಿದ್ದಾರೆ. ಮಾನವ ಕಳ್ಳಸಾಗಣೆಯ ಉದ್ದೇಶವೆಂದರೆ ಜೀತಕ್ಕಾಗಿ ಬಳಸುವುದು, ಕಾರ್ಮಿಕರ ಬಳಕೆ, ಮಕ್ಕಳಿಲ್ಲದವರಿಗೆ ಮಾರುವುದು ಹೀಗೆ ಅನೇಕ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಅಂಕಿ ಅಂಶದ ಪ್ರಕಾರ ದೇಶದಲ್ಲಿ 4 ಲಕ್ಷ ಕ್ಕೂ ಅಧಿಕ ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ ಎಂದರು.
ಸಿಡಿಪಿಓ ಸವಿತಾ ಶಾಸ್ತ್ರೀಮಠ ಮಾತನಾಡಿ, ಹೆಣ್ಣು ಮಕ್ಕಳಿಗೆ ನೌಕರಿಯ ಆಮಿಷಯೊಡ್ಡಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಅವರು ಸದಾ ಜಾಗೃತ ಸ್ಥಿತಿಯಲ್ಲಿರಬೇಕು. ಮಕ್ಕಳನ್ನು ಕದ್ದು ಭಿಕ್ಷಾಟನೆಗೆ ಬಳಸುತ್ತಾರೆ. ಸಮಸ್ಯೆಗಳು ಎದುರಾದಾಗ ಕೂಡಲೇ ಸಹಾಯವಾಣ ಗೆ ಸಂಪರ್ಕಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಮೇಲೆ ನಡೆಯುವ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು, ಅತ್ಯಾಚಾರಗಳನ್ನು ಧೈರ್ಯ ದಿಂದ ಪೊಲೀಸ ಇಲಾಖೆಯ ಗಮನಕ್ಕೆ ತರುವ ಧೈರ್ಯ ಮಾಡಬೇಕು ಎಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ ಪಟಗಾರ, ಹಿಂದುಳಿದ ವರ್ಗಗಳ ಪ್ರಭಾರಿ ಕಲ್ಯಾಣಾಧಿಕಾರಿ ಸೀತಾ ಎಸ್.ಗೌಡ ಉಪಸ್ಥಿತರಿದ್ದರು. ಇದೇ ವೇಳೆ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ ವಿತರಿಸಲಾಯಿತು. ವಕೀಲರಾದ ಗಜಾನನ ನಾಯ್ಕ, ನಾಗಾನಂದ ಬಂಟ ನಿರ್ವಹಿಸದರು. ರೋಟರಿ ಕ್ಲಬ್‍ನ ಕಾರ್ಯದರ್ಶಿ ವಸಂತ ನಾಯ್ಕ, ಸದಸ್ಯರಾದ ಸತೀಶ ಮಹಾಲೆ, ಸಂಜಯ ಲೋಕ ಪಾಲ, ಬಿಸಿಎಂ. ವಸತಿ ನಿಲಯದ ಮೇಲ್ವೆಚಾರಕ ಶಿವಾನಂದ ನಾಯ್ಕ, ನ್ಯಾಯಾಲಯದ ಸಿಬ್ಬಂದಿ ಪ್ರಮೋದ ಗೌಡ, ಪಿಸಿ ಪರಮೇಶ, ವಸತಿ ನಿಲಯದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.