ಡೈಲಿ ವಾರ್ತೆ:30 ಜುಲೈ 2023
ಕ್ರೀಡಾ ಲೋಕದಲ್ಲಿ 25 ನೇ ವರ್ಷ ಪೂರೈಸಿದ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟು ಕುಂದಾಪುರ ಸತೀಶ್ ಖಾರ್ವಿಗೆ ಅಭಿನಂದನಾ ಸಮಾರಂಭ
ಕುಂದಾಪುರ:ಪವರ್ ಲಿಫ್ಟಿಂಗ್ 1998 ರಿಂದ 2023ರ ತನಕ ಸತತ ಕ್ರೀಡಾ ಲೋಕದಲ್ಲಿ 25ನೇ ವರ್ಷ ಪೂರೈಸಿ ಅಂದ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರಮಟ್ಟದ ಪವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಒಂದು ಚಿನ್ನ ಒಂದು ಬೆಳ್ಳಿ ಪದಕ ಹಾಗೂ 4ನೇ ಬಾರಿ ರಾಷ್ಟ್ರೀಯ ಡೆಡ್ ಲಿಫ್ಟ್ ನೂತನ ದಾಖಲೆ ನಿರ್ಮಿಸುವುದರೊಂದಿಗೆ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡ ಕುಂದಾಪುರದ ಹೆಮ್ಮೆಯ ಕುವರ ಸತೀಶ್ ಖಾರ್ವಿಯವರಿಗೆ ಅಭಿನಂದನಾ ಸಮಾರಂಭವು ಜು. 29 ರಂದು ಶನಿವಾರ ಸಂಜೆ ಕುಂದಾಪುರ ಹರ್ಕ್ಯುಲೆಸ್ ಜಿಮ್ಮಿನ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಕುಂದಾಪುರ ಶಾಸಕರಾದ ಕಿರಣ್ ಕೊಡ್ಗಿಯವರು ಸತೀಶ್ ಖಾರ್ವಿಯನ್ನು ಸನ್ಮಾನಿಸಿ. ಅವರು ಮಾತನಾಡಿ
ಸತೀಶ್ ಖಾರ್ವಿಯವರ ಸಾಧನೆಯು ದೇಶ ಹಾಗೂ ರಾಜ್ಯಕ್ಕೆ ಹೆಮ್ಮೆತಂದಿದೆ ಅಲ್ಲದೆ ನಮ್ಮ ಕುಂದಾಪುರ ತಾಲೂಕಿಗೆ ಒಂದು ಗೌರವ ತಂದುಕೊಟ್ಟಿದ್ದಾರೆ.
ಸತೀಶ್ ಖಾರ್ವಿಯವರ ಹರ್ಕ್ಯುಲಸ್ ಸಂಸ್ಥೆಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿಗಳಿಗೆ ಒಳ್ಳೆಯ ತರಬೇತಿ ನೀಡಿ ಒಂದು ಕ್ರೀಡಾಪಟುಗಳನ್ನಾಗಿ ತಯಾರು ಮಾಡುವ ಕೆಲಸ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇವರ ಮೂಲಕ ಒಳ್ಳೆಯ ಕ್ರೀಡಾಪಟುಗಳು ಬೆಳೆಯಲಿ ದೇಶಕ್ಕೆ ಒಳ್ಳೆಯ ಕೀರ್ತಿಯನ್ನು ತರಲಿ ಎಂದು ಹಾರೈಸಿದರು.
ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಇವರು ಮಾತನಾಡಿ ಸತೀಶ್ ಖಾರ್ವಿಯು 25 ವರ್ಷ ಕ್ರೀಡಾಲೋಕದಲ್ಲಿ ಬೆವರು ಮಾತ್ರ ಅಲ್ಲ ರಕ್ತ ಸುರಿಸಿ ಮೇಲೆ ಬಂದವರು. ಆದರೆ ಯಾರು ಕೂಡ ಒಂದು ಚಪ್ಪಾಳೆ ತಟ್ಟಿರ್ಲಿಕ್ಕಿಲ್ಲ, ಬೆನ್ನು ತಟ್ಟಿರ್ಲಿಕ್ಕಿಲ್ಲ, ಹರ್ಷೋದ್ಧಾರ ಹಾಕಿರಲಿಕ್ಕಿಲ್ಲ ಆದರೂ ಕೂಡ ಅವರ 25ವರ್ಷದ ಕ್ರೀಡಾ ಬೆಳವಣಿಗೆ ನೋಡುತ್ತಿದ್ದರೆ ಏಕಲವ್ಯನ ಏಕಾಗ್ರತೆ ಅವರದ್ದಾಗಿದೆ ಎಂದರು.
ಸತೀಶ್ ಅವರ ಪವರ್ ಲಿಫ್ಟಿಂಗ್ ನ್ನು ಯಾರೂ ಗುರುತಿಸದಿದ್ದರೂ ಕೂಡ ಅವರು ತನ್ನ ಕ್ರೀಡಾ ಕರ್ತವ್ಯದಿಂದ ಕುಗ್ಗದೆ ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೆ ಸತತವಾಗಿ ಇಂದು ಒಂದು ಹಂತಕ್ಕೆ ತಲುಪಿದ್ದಾರೆ. ಇವರಿಗೆ ಆ ಸಂದರ್ಭದಲ್ಲಿ ಯಾರು ಕೂಡ ಚಪ್ಪಾಳೆ ಹೊಡೆಯದಿದ್ದರೂ ಇಂದು ಕರ್ನಾಟಕದ ಗೃಹ ಸಚಿವರೇ ಮನೆಗೆ ಕರೆಸಿ ಅಭಿನಂದಿಸಿದ್ದಾರೆ ಎಂದು ನ್ಯಾಯವಾದಿ ರವಿಕಿರಣ್ ಮುರುಡೇಶ್ವರ ಹೇಳಿದರು.
ಈ ಸಂದರ್ಭದಲ್ಲಿ ಕಿಂಗ್ ಫಿಷರ್ ಸ್ಪೋರ್ಟ್ಸ್ ಕುಂದಾಪುರ ಇದರ ನೊಂದಾವಣೆ ಪತ್ರವನ್ನು ಮಾನ್ಯ ಶಾಸಕರಾದ ಕಿರಣ್ ಕೊಡ್ಗಿ ಅವರು ಬಿಡುಗಡೆಗೊಳಿಸಿದರು.
ಸತೀಶ್ ಖಾರ್ವಿಯವರ ಬೆಳ್ಳಿಹಬ್ಬದ ಸಂಭ್ರಮವನ್ನು ಹರ್ಕ್ಯುಲಸ್ ಜಿಮ್ ಸದಸ್ಯರು ಹಾಗೂ ಸಾರ್ವಜನಿಕರೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಿಸಲಾಯಿತು.
ಈ ಸಂದರ್ಭ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಪುರಸಭಾ ಸದಸ್ಯ ಬಿ ಪ್ರಭಾಕರ್, ವಸಂತ್ ಬೇಕರಿ ಮಾಲೀಕ ಶ್ರೀಯನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವೈಷ್ಣವಿ ಖಾರ್ವಿ ನಿರೂಪಿಸಿ ವಂದಿಸಿದರು.