ಡೈಲಿ ವಾರ್ತೆ: 31 ಜುಲೈ 2023
ವರದಿ: ವಿದ್ಯಾಧರ ಮೊರಬಾ
ಅಂಕೋಲಾ ಹಟ್ಟಿಕೇರಿಯ ಗುಳೆ ಗ್ರಾಮದಲ್ಲಿ ವಿದ್ಯುತ ಸಮಸ್ಯೆ ಬಗೆ ಹರಿಸುವಂತೆ ಮನವಿ
ಅಂಕೋಲಾ : ತಾಲೂಕಿನ ಹಟ್ಟಿಕೇರಿ ಗ್ರಾಮ ಪಂಚಾಯಿತ ವ್ಯಾಪ್ತಿಯ ಗುಳೆ ಗ್ರಾಮದಲ್ಲಿ ಕಳೆದ 2 ತಿಂಗ ಳಿಂದ ವಿದ್ಯುತ್ ಇಲ್ಲದೇ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದಲ್ಲದೇ ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡ ಲು ತೊಂದರೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಸೋಮವಾರ ತಹಸೀಲ್ದಾರ ಮತ್ತು ಹೆಸ್ಕಾಂ ಅಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯ ಮುಂದಾಳತ್ವದ ಪಡೆದ ರಾಘವೇಂದ್ರ ಜಿ. ನಾಯಕ ಮಾತನಾಡಿ, ಹಟ್ಟಿಕೇರಿ ವ್ಯಾಪ್ತಿಯ ಹುಳೆ ಗ್ರಾಮದಲ್ಲಿ ಸುಮಾರು 33 ಮನೆಗಳಿಗೆ ವಿದ್ಯುತ್ ಸಮಸ್ಯೆದಿಂದ ಬಳಲುತ್ತಿದ್ದು, ಈ ವಿಷಯ ಹೆಸ್ಕಾಂ ಶಾಖಾಧಿಕಾರಿ ವಿಶ್ವನಾಥ ನಾಯ್ಕ ಮತ್ತು ಲೈನ್‍ಮೆನ್ ಮಂಜುನಾಥ ಹಾಗೂ ದಿನಕರ ಅವರ ಗಮನಕ್ಕೆ ತಂದಿದ್ದೇವೆ. ಆದರೂ ಅದರ ಬಗ್ಗೆ ಗಮನ ನೀಡಿಲ್ಲಾ ಈ ಹಿನ್ನೆಲೆಯಲ್ಲಿ ಸ್ಥಳೀಯರು ಸೇರಿ ತಹಸೀಲ್ದಾರ್ ಮತ್ತು ಹೆಸ್ಕಾ ಕಚೇರಿಗೆ ಬಂದು ಪ್ರತಿಭಟಿಸಿ ಮನವಿ ನೀಡುವಂತಾಯಿತು ಎಂದರು.
ಸಾಮಾಜಿಕ ಕಾರ್ಯಕರ್ತ ಮತ್ತು ವಕೀಲರಾದ ಉಮೇಶ ಎನ್.ನಾಯ್ಕ ಅವರು ಹೆಸ್ಕಾಂ ಶಾಖಾಧಿಕಾರಿ ವಿಶ್ವನಾಥ ನಾಯ್ಕ ಅವರಿಗೆ ಪೋನ್ ಮೂಲಕ ಸಂಪರ್ಕಿಸಿ ಗುಳೆ ಜನರು ಕತ್ತಲೆಯಲ್ಲಿ ಸಂಕಷ್ಟ ಪಡೆಯು ತ್ತಿದ್ದಾರೆ ಇಂದೇ ಆ ಸ್ಥಳಕ್ಕೆ ಹೋಗಿ ವಿದ್ಯುತ್ ಸಂಪರ್ಕ ನೀಡುವಂತೆ ಎಚ್ಚರಿಸಿದರು.
ಮನವಿಯನ್ನು ತಹಸೀಲ್ದಾರ ಪರವಾಗಿ ಉಪ ತಹಸೀಲ್ದಾರ ಸುರೇಶ ಹರಿಕಂತ್ರ, ಹೆಸ್ಕಾಂ ಅಭಿಯಂತರ ಪ್ರವೀಣ ನಾಯ್ಕ ಪರವಾಗಿ ಹೆಸ್ಕಾಂ ಕಾಮಗಾರಿ ಘಟಕದ ಮೇಲ್ವೆಚಾರಕ ಸತೀಶ ಎಂ.ನಾಯ್ಕ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಂಡು ಓಮು ಗೌಡ, ಪಾಂಡುರಂಗ ಗೌಡ, ಸುರೇಶ ಓಮು ಗೌಡ, ರಾಜು ಮುಕುಂದ ಗೌಡ, ದಿಗಂಬರ ಬುದ್ದು ಗೌಡ, ಲೋಕು ಟಿ.ಗೌಡ, ಆನಂದು ಗೌಡ, ಸಂತು ನಾಗೇಶ ಗೌಡ, ನಾರಾಯಣ ನಾಗೇಶ ಗೌಡ, ರಂಜನಾ ಗೌಡ,ಇತರರಿದ್ದರು.
💢ಹಟ್ಟಿಕೇರಿ ಗುಳೆ ಪ್ರದೇಶವು ದಟ್ಟ ಅರಣ್ಯ ಪ್ರದೇಶವಾಗಿದ್ದರಿಂದ ಕಳೆದ ಒಂದು ವಾರದ ಹಿಂದೆ ಗಾಳಿ-ಮಳೆಗೆ ತಾಂತ್ರಿಕ ಕಾರಣದಿಂದ ವಿದ್ಯುತ್ ಸ್ಥಗಿತಗೊಂಡಿತ್ತು ಮತ್ತು ಪೋನ್ ನೆಟ್‍ವರ್ಕ ಲಭ್ಯವಾಗಿಲ್ಲ. ಆ ಪ್ರದೇಶದಲ್ಲಿ ಬೆತ್ತದ ಹಳ್ಳದಲ್ಲಿ ನೀರು ತುಂಬಿಕೊಂಡಿದ್ದರಿಂದ ಬೈಕ್ ಮತ್ತು ವಿದ್ಯುತ್ ಸಾಮಗ್ರಿಗಳನ್ನು ಸಾಗಿಸಲು ಅನಾನುಕೂಲವಾಗಿದ್ದ ಕಾರಣ ಅಲ್ಲಿಯ ಜನರಿಗೆ ವಿದ್ಯುತ್ ಸಮಸ್ಯೆ ಆಗಿದೆ. ಇಂದು ಸೋಮವಾರ ವಿದ್ಯುತ್ ಪರಿವರ್ತಕಗಳನ್ನು ಸರಿಪಡಿಸಿ ಎಲ್ಲಾ ಮನೆಗಳಿಗೆ ವಿದ್ಯುತ ಸಂಪರ್ಕ ನೀಡಿದ್ದೇವೆ.
ವಿಶ್ವನಾಥ ಓಮು ನಾಯ್ಕ ಹೆಸ್ಕಾಂ ಗ್ರಾಮೀಣ ಶಾಖಾಧಿಕಾರಿ ಹಟ್ಟಿಕೇರಿ💢