


ಡೈಲಿ ವಾರ್ತೆ:04 ಆಗಸ್ಟ್ 2023


ವರದಿ: ರವಿತೇಜ ಕಾರವಾರ
ಹತ್ತನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು
ದಾಂಡೇಲಿ: ಬಾಲಕಿಯೋರ್ವಳು ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಗಾಂಧಿನಗರದಲ್ಲಿ ಶುಕ್ರವಾರ ನಡೆದಿದೆ.
ನಗರದ ಜನತಾ ವಿದ್ಯಾಲಯದಲ್ಲಿ 10ನೇ ತರಗತಿ ಓದುತ್ತಿದ್ದ ಅಣ್ಣಮ್ಮ ಸ್ಯಾಮುವೆಲ್ ಡೊಕ್ಕಾ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ. ಬೆಳಿಗ್ಗೆ ಬಾಲಕಿ ನೇಣು ಬಿಗಿದುಕೊಂಡಿರುವ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ಸೇರಿ ಆಕೆಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಷ್ಟರಲ್ಲಿ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿದ್ಯಾರ್ಥಿನಿ ಅಣ್ಣಮ್ಮ ತನ್ನ ಸಹಪಾಠಿಗಳೊಂದಿಗೆ ತಾನು ಸರಿಯಾಗಿ ಓದಿಲ್ಲ ಎಂದು ಹೇಳುತ್ತಿದ್ದಳು. ಈಕೆಯ ಅಜ್ಜಿ 20 ದಿನಗಳ ಹಿಂದೆ ವಿಧಿವಶರಾಗಿದ್ದರು ಇವೆಲ್ಲವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸಾದ್ಯತೆ ಇದೆ ಎಂದು ನಗರ ಪೋಲಿಸ ಠಾಣೆಯ ಪಿಎಸೈ ಇನೂಸ್ ಗಡೇಕರ ತಿಳಿಸಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ದಾಂಡೇಲಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.