ಡೈಲಿ ವಾರ್ತೆ:09 ಆಗಸ್ಟ್ 2023

ಆ. 12, 13 ರಂದು ಬ್ರಹ್ಮಾವರ ನಿರ್ಮಲ ಪ್ರೌಢಶಾಲಾ ಆವರಣದಲ್ಲಿ ಬೃಹತ್ ಸಸ್ಯಮೇಳ ಮತ್ತು ಆಹಾರೋತ್ಸವ

ಬ್ರಹ್ಮಾವರ: ಅಂತರಾಷ್ಟ್ರೀಯ ಸಂಸ್ಥೆ ರೋಟರಿ ರಾಯಲ್ ಬ್ರಹ್ಮಾವರ, ಕೃಷಿ ಕೇಂದ್ರ ಬ್ರಹ್ಮಾವರ, ತೋಟಗಾರಿಕಾ ಇಲಾಖೆ, ಇಂಟರಾಕ್ಟ್ ಕ್ಲಬ್ ನಿರ್ಮಲ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಇವರ ಜಂಟಿ ಆಶ್ರಯದಲ್ಲಿ ಅಗಸ್ಟ್ ತಿಂಗಳ 12 ಮತ್ತು 13ರಂದು ನಿರ್ಮಲ ಪ್ರೌಢಶಾಲಾ ಆವರಣದಲ್ಲಿ ಬೃಹತ್ ಸಸ್ಯಮೇಳ ಮತ್ತು ಆಹಾರೋತ್ಸವವನ್ನು ಆಯೋಜಿಸಲಾಗಿದೆ.

ಹಸಿರು ಉಸಿರು, ಶುದ್ಧ ಪರಿಸರ, ಕೃಷಿ ಕ್ರಾಂತಿ ಎಂಬ ಧೋರಣೆ ಬರೀ ಭಾಷಣಕ್ಕೆ ಸೀಮಿತವಾಗಿರದೆ ಜನರ ನಡುವೆ ಪ್ರಾಮಾಣಿಕವಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ರೈತರ, ವಿದ್ಯಾವಂತರ, ವಿದ್ಯಾರ್ಥಿಗಳ, ಮತ್ತು ಜನಸಾಮಾನ್ಯರನ್ನು ಕೃಷಿ ಮತ್ತು ಸಸ್ಯಕ್ರಾಂತಿಯ ಬಗ್ಗೆ ವಿಶೇಷ ಅರಿವು ಮೂಡಿಸುವ ಒಂದು ಪುಯತ್ನ ಇದಾಗಿದೆ.

ಈ ಬೃಹತ್ ಮೇಳದಲ್ಲಿ ರಾಜ್ಯಾದ್ಯಂತದಿಂದ ಬರುವ ನೂರಾರು ಸಸ್ಯ ಮತ್ತು ಆಹಾರ ಉತ್ಪನ್ನ ಮಳಿಗೆಗಳು ವಿಶೇಷ ಆಕರ್ಷಣೆಯಾಗಿರುತ್ತದೆ. ಶನಿವಾರ ಪೂರ್ವಾಹ್ನ 9:30 ಸುಮಾರಿಗೆ ಉದ್ಘಾಟನೆಗೊಂಡು ಸಂಜೆ ಆರು ಗಂಟೆ ತನಕ ಮತ್ತು ಮರುದಿನ ಭಾನುವಾರವು ಪ್ರದರ್ಶನ ನಡೆಯಲಿದೆ.ಸಾರ್ವಜನಿಕರಿಗೆ ಮುಕ್ತ ಪ್ರವೇಶವಿರುವ ಈ ಕಾರ್ಯಕ್ರಮದಲ್ಲಿ ರೈತರು ಮತ್ತು ಆಸಕ್ತರಿಗೆ ಬ್ರಹ್ಮಾವರ ಕೃಷಿ ವಿಜ್ಞಾನಿ ಕೇಂದ್ರ ಮತ್ತು ತೋಟಗಾರಿಕಾ ಇಲಾಖೆಯ ವಿಶೇಷ ತಜ್ಞರಿಂದ ವೈಶಿಷ್ಟ್ಯ ಪೂರ್ಣ ಮಾಹಿತಿಯ ವಿಚಾರಗೋಷ್ಠಿ ನಡೆಯಲಿದೆ.
ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕಾಗಿ ವಿನಂತಿಸಲಾಗಿದೆ.

ಈ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ರೋಟರಿ ರಾಯಲ್ ಬ್ರಹ್ಮಾವರದ ಅಧ್ಯಕ್ಷ ಶ್ರೀ ಅಭಿರಾಮ್ ನಾಯಕ್, ಮಾಜಿ ರೋಟರಿ ಜಿಲ್ಲಾ ಗವರ್ನರ್ ಶ್ರೀ ಜ್ಞಾನ ವಸಂತ ಶೆಟ್ಟಿ, ಕಾರ್ಯದರ್ಶಿ ಶ್ರೀ ವಿಜಯೇಂದ್ರ ಶೆಟ್ಟಿ, ಸಂಯೋಜಕರಾದ ವಕೀಲ ಶ್ರೀ ಅಶೋಕ್ ಕುಮಾರ್ ಶೆಟ್ಟಿ, ಶ್ರೀ ಬಿ.ಎಸ್.ಭಟ್, ಶ್ರೀ ಜೈ ಕಿಶನ್, ಶ್ರೀ ಉದಯ್ ಕುಮಾರ್ ಶೆಟ್ಟಿ (bap,ವಿಶ್ವನ ಬಿ.ಎಸ್.ರಾಂ.ಶೆಟ್ಟಿ ಮತ್ತು ಶ್ರೀಕಾಂತ್ ಸಾಮಂತ್ ಹಾಗೂ ಬ್ರಹ್ಮಾವರ ಕೃಷಿ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಧನಂಜಯ ಬಿ ಉಪಸ್ಥಿತರಿದ್ದರು.