ಡೈಲಿ ವಾರ್ತೆ:10 ಆಗಸ್ಟ್ 2023
ವರದಿ: ವಿದ್ಯಾಧರ ಮೊರಬಾ
ಕೇಣಿ ಯಲ್ಲಿ ನಡೆದ ಕಗ್ಗೋತ್ಸವ ಕಾರ್ಯಕ್ರಮ:ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಗ್ಗ ಇಂದು ಕಣ್ಮರೆಯಾಗಿದೆ – ಡಾ. ಸುಭಾಶಚಂದ್ರನ್
ಅಂಕೋಲಾ : ಭತ್ತದ ತಳಿಗಳಲ್ಲೇ ಕಗ್ಗ ಭತ್ತ ವಿಶಿಷ್ಟವಾಗಿದೆ. ಇಂತಹ ವಿಶಿಷ್ಟವಾದ ಕಗ್ಗ ಭತ್ತದ ಬೆಳೆಯ ಕೃಷಿಯ ಕುರಿತು ನಿರ್ಲಕ್ಷ್ಯ ಬೇಡ. ಕಗ್ಗ ಭತ್ತದ ಅಕ್ಕಿಯ ಊಟ ಮನುಷ್ಯನ ಆರೋಗ್ಯಕ್ಕೂ ಇದು ಬಹಳ ಒಳ್ಳೆಯದು ಹೀಗಾಗಿ ರೈತರು ಕಗ್ಗ ಭತ್ತದ ಕೃಷಿಯನ್ನು ಮುಂದುವರೆಸಬೇಕು ಎಂದು ಪರಿಸರ ವಿಜ್ಞಾನಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ.ಸುಭಾಶಚಂದ್ರನ್ ಹೇಳಿದರು.
ಪಟ್ಟಣದ ಕೇಣಿ ಯ ಸರ್ಕಾರಿ ಪ್ರೌಢಶಾಲೆ ಹಾಗೂ ಜಗದೀಶಚಂದ್ರ ಭೋಸ್ ಇಕೋ ಕ್ಲಬ್ ಸಹಯೋಗದ ಲ್ಲಿ ಕೇಣಿ ಯ ಕೃಷ್ಣ ವಿಠೋಬ ನಾಯ್ಕ ಜಮೀನಿನಲ್ಲಿ ಗುರುವಾರ ಹಮ್ಮಿಕೊಂಡ ಕಗ್ಗೋತ್ಸವ ಮತ್ತು ಕೃಷಿ ಹಬ್ಬ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಕರಾವಳಿ ಪ್ರದೇಶದಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಗ್ಗ ಇಂದು ಕಣ್ಮರೆಯಾಗುತ್ತಿದೆ. ಕಗ್ಗದ ಜಾಗದಲ್ಲಿ ಸಿಗಡಿ ಕೃಷಿಗಳು ಆಗುತ್ತಿವೆ. ಕಗ್ಗ ಭತ್ತದಲ್ಲಿ ಅನೇಕ ಜೈವಿಕ ಅಂಶಗಳಿವೆ. ಗಜನಿ ಭೂಮಿ ಗಳಲ್ಲಿ, ಉಪ್ಪಿನ ಅಂಶವಿರುವ ಗದ್ದೆಗಳಲ್ಲಿ ಈ ಭತ್ತವನ್ನು ಮೀನುಗಾರಿಕೆಯ ಜತೆಯಲ್ಲಿ ಬೆಳೆಯಲಾಗು ತ್ತಿತ್ತು. ಕಗ್ಗ ಭತ್ತದ ಕೃಷಿಯಿಂದ ಭೂಮಿಯಲ್ಲಿ ಹೇರಳವಾಗಿ ಇಂಗಾಲದ ಶೇಖರಣೆಯು ಆಗುತ್ತದೆಂದು ಸಂಶೋಧನೆಯಿಂದ ತಿಳಿದು ಬಂದಿದೆ ಎಂದರು.
ಸಿಟಿಇ ಬೆಳಗಾವಿ ನಿವೃತ್ತ ಪ್ರವಾಚಕ ನಾಗರಾಜ ನಾಯಕ ಮಾತನಾಡಿ, ಇತ್ತೀಚೆಗೆ ಭತ್ತದ ಕೃಷಿ ಕಡಿಮೆ ಯಾಗುತ್ತಿದೆ. ಒಂದು ವೇಳೆ ಅಕ್ಕಿಯ ಅಭಾವ ಎದುರಾದರೆ ಟೊಮ್ಯಾಟೋ ರೀತಿಯಲ್ಲಿ ಅಧಿಕ ಬೆಲೆಗೆ ಖರೀದಿಸಬೇಕಾಗಬಹುದು. ಶಾಲೆಗಳಲ್ಲೂ ಕೂಡ ವಿದ್ಯಾರ್ಥಿಗಳಿಗೆ ಕೃಷಿಯ ಮಹತ್ವವನ್ನು ಕಲಿಸುವುದು ಹೆಚ್ಚು ಸೂಕ್ತ ಎಂದರು.
ಕುಮಟಾ ಡಯಟ್ ಪ್ರಾಚಾರ್ಯ ಎನ್.ಜಿ.ನಾಯಕ ಮಾತನಾಡಿ, ಉತ್ತಮ ಸ್ವಾಸ್ಥ್ಯಕ್ಕಾಗಿ ಸ್ಥಳೀಯ ಆಹಾರ ಪದ್ಧತಿಗಳನ್ನು ಉಪಯೋಗಿಸಲು ಸಾಂಪ್ರದಾಯಿಕ ಕೃಷಿ ಸೂಕ್ತ ಎಂದರು.
ಬೆಳಗಾರ ಸಮಿತಿಯ ಅಧ್ಯಕ್ಷ ನ್ಯಾಯವಾದಿ ನಾಗರಾಜ ನಾಯಕ ಮಾತನಾಡಿ, ಭತ್ತಕ್ಕೆ ಕೋಟ್ಯಾಂತರ ವರ್ಷಗಳ ಇತಿಹಾಸವಿದೆ. ಆದರೆ ಇಂದು ಸಾವಿರಾರು ಎಕರೆ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಿಂತು ಹೋಗಿದೆ. ಇದು ಹೀಗೆಯೇ ಮುಂದುವರೆದರೆ ಅಕ್ಕಿಯ ಕೊರತೆ ಕಂಡು ಬರಲಿದೆ. 140 ದೇಶ ಗಳಿಗೆ ಅಕ್ಕಿಯನ್ನು ರಫ್ತು ಮಾಡುತ್ತಿದ್ದ ಏಕೈಕ ದೇಶ ಭಾರತ ಮುಂದಾಲೋಚನೆಯಿಂದ ರಫ್ತನ್ನು ನಿಲ್ಲಿಸಿದೆ ಎಂದರು.
ಬಿಇಓ ಮಂಗಳಲಕ್ಷ್ಮೀ ಪಾಟೀಲ, ಆರ್‍ಎಫ್‍ಓ ಜಿ.ವಿನಾಯಕ, ಮರೈನ್ ಬಯಾಲಜಿ ಮಹಾವಿದ್ಯಾಲ ಯದ ನಿವೃತ್ತ ಪ್ರಾಧ್ಯಾಪಕ ವಿ.ಎನ್.ನಾಯಕ, ದಿನಕರ ವೇದಿಕೆಯ ಅಧ್ಯಕ್ಷ ನಿವೃತ್ತ ಪ್ರಾಚಾರ್ಯ ರವೀಂದ್ರ ಕೇಣ , ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಮಾತನಾಡಿದರು.
ಪುರಸಭೆ ಸದಸ್ಯೆ ಶೀಲಾ ಶೆಟ್ಟಿ, ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ, ನಾಡವರ ಸಂಘದ ಅಧ್ಯಕ್ಷ ಆರ್.ಟಿ.ಮಿರಾಶಿ, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಉರಗ ಸಂರಕ್ಷಕ ಮಹೇಶ ನಾಯ್ಕ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ನಿವೃತ್ತ ಉಪನ್ಯಾಸಕ ವಸಂತ ನಾಯಕ, ವೆಂಟು ಮಾಸ್ತರ, ದೇವರಾಯ ನಾಯಕ, ಎಸ್‍ಡಿಎಂಸಿ ಅಧ್ಯಕ್ಷ ಉಮೇಶ ಕೆ. ಬಂಟ, ಪ್ರಮು ಖರಾದ ನಾಗಾನಂದ ಬಂಟ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಶಿವಾನಿ ಸಂಗಡಿಗರು ರೈತಗೀತೆ ಪ್ರಸ್ತುತ ಪಡಿಸಿದರು. ಶಿಕ್ಷಕ ಸುಧೀರ ನಾಯಕ, ಚಂದ್ರಕಾಂತ ಗಾಂವಕರ, ರಾಜೇಶ ನಾಯಕ ನಿರ್ವಹಿ ಸಿದರು. ಇವರೆಲ್ಲರು ಸಾಮೂಹಿಕವಾಗಿ ಗದ್ದೆಗಿಳಿದು ಕಗ್ಗ ಭತ್ತದ ಸಸಿಗಳನ್ನು ನಾಟಿ ಮಾಡಿದರು.
ಸನ್ಮಾನ : ಪದ್ಮಶ್ರೀ ಡಾ.ತುಳಸೀ ಗೌಡ, ಪರಿಸರ ವಿಜ್ಞಾನಿ ಡಾ.ಎಂ.ಡಿ. ಸುಭಾಷಚಂದ್ರನ್, ಕೃಷಿಕರಾದ ಕುಮಟಾದ ಮಾದರಿ ಕೃಷಿಕ ನಾಗರಾಜ ಮೋಹನ ನಾಯ್ಕ, ಬೀದಿ ಗಾಂವಕರ, ಬೆಳ್ಯ ಗೌಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.