ಡೈಲಿ ವಾರ್ತೆ:12 ಆಗಸ್ಟ್ 2023
ಆ. 13 ರಂದು ಬಂಟ್ವಾಳ ಕಮ್ಯೂನಿಟಿ ಸೆಂಟರ್ ಲೋಕಾರ್ಪಣೆ
ಬಂಟ್ವಾಳ : ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ ಬಂಟ್ವಾಳ ಕಮ್ಯೂನಿಟಿ ಸೆಂಟರ್ ಆ.13ರಂದು ಸಂಜೆ 4 ಗಂಟೆಗೆ ಬಿ.ಸಿ.ರೋಡ್ ಕೈಕಂಬದ ಸುಲ್ತಾನ್ ಕಾಂಪ್ಲೆಕ್ಸ್ ನಲ್ಲಿ ಉದ್ಘಾಟನೆಗೊಳ್ಳಲಿದೆ.
ಈಗಾಗಲೇ ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ಪುತ್ತೂರು ಕಮ್ಯೂನಿಟಿ ಸೆಂಟರ್ ನ ಅಧೀನದಲ್ಲಿ ಬಂಟ್ವಾಳ ಕಮ್ಯೂನಿಟಿ ಸೆಂಟರ್ ಸ್ಥಾಪನೆಗೊಂಡಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೆ.ಎಂ.ಟಿ. ಜುಬೈಲ್ ಸಿಎಒ ಅಬ್ದುಲ್ ರಝಾಕ್, ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ, ಬರಕ ಶಿಕ್ಷಣ ಸಂಸ್ಥೆಯ ಸ್ಥಾಪಕ ಮುಹಮ್ಮದ್ ಅಶ್ರಫ್, ಸಿ.ಆರ್.ಡಿ.ಎಫ್. ಚೇರ್ ಮೆನ್ ಅಮ್ಜದ್ ಖಾನ್, ಶೈಕ್ಷಣಿಕ ತರಬೇತುದಾರ ರಫೀಕ್ ಮಾಸ್ಟರ್, ಇಖ್ವಾ ಫೆಡರೇಶನ್ ಮಾಣಿ ಇದರ ಅಧ್ಯಕ್ಷ ರಹೀಂ ಸುಲ್ತಾನ್, ಡೈಮಂಡ್ ಶಿಕ್ಷಣ ಸಂಸ್ಥೆಯ ಟ್ರಿಸ್ಟಿ ಸಲೀಂ ಅಲ್ತಾಫ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.