ಡೈಲಿ ವಾರ್ತೆ:12 ಆಗಸ್ಟ್ 2023
ವರದಿ: ವಿದ್ಯಾಧರ ಮೊರಬಾ
ಅಂಕೋಲಾದಲ್ಲಿ ಕಳ್ಳತನವಾದ ಬೈಕ್ ಉಡುಪಿಯಲ್ಲಿ ಪತ್ತೆ: ಆರೋಪಿ ಬೈಂದೂರು ರಂಜಿತ ಪೂಜಾರಿಯ ಬಂಧನ
ಅಂಕೋಲಾ : ತಾಲೂಕಿನ ರಾ.ಹೆ. 66ರ ವಂದಿಗೆಯಲ್ಲಿ ಜು.30 ರಂದು ಅಂಗಡಿಯೊಂದರ ಎದುರಿನಲ್ಲಿ ನಿಲ್ಲಿಸಿಟ್ಟ ಬೈಕ್ ಕಳ್ಳತನ ಮಾಡಿದ ಆರೋಪಿಯನ್ನು ಅಂಕೋಲಾ ಪೊಲೀಸರು ಉಡುಪಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾದರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಂಬದಕೋಣ ಬೋಳಂಬಳ್ಳಿ ನಿವಾಸಿ ರಂಜಿತ ರಾಮಚಂದ್ರ ಪೂಜಾರಿ (23) ಎಂಬಾತನೇ ಬೈಕ್ ಕದ್ದ ಆರೋಪಿ. ಈತನ ಜತೆಯಲ್ಲಿದ್ದ ಇನ್ನೋರ್ವ ಆರೋಪಿ ನಾಪತ್ತೆಯಾಗಿದ್ದಾನೆ. ಬೈಕ್ ಕಳ್ಳತನವಾಗಿರುವ ಕುರಿತು ವಂದಿಗೆಯ ರಾಜೇಶ ಶಿವಾನಂದ ಶೆಟ್ಟಿ ಪೊಲೀಸ ದೂರು ನೀಡಿದ್ದರು.
ಬೈಕ್ ಕಳ್ಳತನದ ದೃಶ್ಯಾವಳಿಗಳು ಅಲ್ಲಿನ ಸಿಸಿ ಕ್ಯಾಮರದಲ್ಲಿ ದಾಖಲಾಗಿತ್ತು ಎನ್ನಲಾಗಿದೆ. ಪ್ರಕರಣದ ಪತ್ತೆಗೆ ಉ.ಕ. ಎಸ್ಪಿ ವಿಷ್ಣುವರ್ಧನ ಅವರ ಮಾರ್ಗದರ್ಶದನಲ್ಲಿ ಎಎಸ್ಪಿ ಜಯಕುಮಾರ, ಡಿವೈಎಸ್ಪಿ ವೆಲಂಟನ್ ಡಿಸೋಜ ಮಾರ್ಗದರ್ಶನದಲ್ಲಿ ಪಿಐ ಸಂತೋಷ ಶೆಟ್ಟಿ ನೇತೃತ್ವದಲ್ಲಿ ಪಿಎಸ್‍ಐ ಉದ್ದಪ್ಪ ಧರೆಪ್ಪನವರ್, ಜಯಶ್ರೀ ಪ್ರಭಾಕರ ಸಿಬ್ಬಂದಿಗಳಾದ ಶ್ರೀಕಾಂತ ಕಟಬರ್, ಮನೋಜ ಡಿ., ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಅಂಕೋಲಾ ಪೊಲೀಸರ ಕಾರ್ಯಾಚರಣೆಗೆ ಎಸ್ಪಿ ವಿಷ್ಣುವರ್ಧನ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.