ಡೈಲಿ ವಾರ್ತೆ:12 ಆಗಸ್ಟ್ 2023
ಕೋಟ ಗ್ರಾ. ಪಂ. ಹಾಗೂ ಮೂಡುಗಿಳಿಯಾರು ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಗಿಳಿಯಾರು ಯುವಕ ಮಂಡಲ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ ಹಾಗೂ ಚಿತ್ರಕಲಾ ಸ್ಪರ್ಧೆ
ಕೋಟ: ಕೋಟ ಗ್ರಾಮ ಪಂಚಾಯತ್, ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಗ್ರಾಮ ಡಿ.ಜಿ. ವಿಕಸನ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಮೂಡುಗಿಳಿಯಾರು, ಗಿಳಿಯಾರು ಯುವಕ ಮಂಡಲ (ರಿ.) ಗಿಳಿಯಾರು. ಇವರ ಆಶ್ರಯದಲ್ಲಿ 76ನೇ ಸ್ವಾತಂತ್ರ್ಯ ಮಹೋತ್ಸವದ ಪ್ರಯುಕ್ತ ಶಾಲೆಯ ಮಕ್ಕಳಿಗೆ ದೇಶಭಕ್ತಿ ಗೀತೆ, ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಸ್ಪರ್ದೆಯಲ್ಲಿ ವಿಜೇತರಿಗೆ ಗಿಳಿಯಾರು ಯುವಕ ಮಂಡಲ (ರಿ.) ಗಿಳಿಯಾರು ನೀಡಿದ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕೋಟ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಅಜಿತ್ ದೇವಾಡಿಗ, ಸದಸ್ಯರಾದ ಯೋಗೇಂದ್ರ ಪೂಜಾರಿ, ಶೇಖರ ಜಿ., ಜ್ಯೋತಿ ಭರತ್ ಕುಮಾರ್ ಶೆಟ್ಟಿ, ಸುಚಿತ್ರ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯರಾದ ರಮೇಶ್ ನಕ್ಷತ್ರಿ, ಗ್ರಂಥಾಲಯ ಮೇಲ್ವಿಚಾರಕಿಯಾದ ಜ್ಯೋತಿ, ಗೆಳೆಯರು ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಸುರೇಶ್ ಗಿಳಿಯಾರು ಉಪಸ್ಥಿತರಿದ್ದರು.