ಡೈಲಿ ವಾರ್ತೆ:12 ಆಗಸ್ಟ್ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ ಪುರಸಭೆಯವರು ನಡೆಸಿದ ಕಾರ್ಯಕ್ರಮದಲ್ಲಿ ಗಿಡನೆಟ್ಟು ನೀರುಣಸುವ ಕಾರ್ಯಕ್ರಮಕ್ಕೆ ಭಾಸ್ಕರ ನಾರ್ವೇಕರಿಂದ ಚಾಲನೆ

ಅಂಕೋಲಾ : ಸ್ವಾತಂತ್ರ್ಯೋತ್ಸವದ ಪೂರ್ವ ಭಾವಿಯಾಗಿ ಸರ್ಕಾರದ ಆದೇಶದಂತೆ ಅಮೃತ ವಾಟಿಕ ಅಂಗವಾಗಿ ಪುರಸಭೆ ವತಿಯಿಂದ ಇಲ್ಲಿಯ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ಗಿಡನೆಟ್ಟು ನೀರುಣ ಸುವ ಕಾರ್ಯಕ್ರಮಕ್ಕೆ ಶನಿವಾರ ಮಾಜಿ ಅಧ್ಯಕ್ಷ ಭಾಸ್ಕರ ಕೆ. ನಾರ್ವೇಕರ ಚಾಲನೆ ನೀಡಿದರು.

ಬಳಿಕ ಅವರು ಮಾತನಾಡಿ, ಗಿಡಗಳು ನಮಗೆ ಒಳ್ಳೆಯ ವಾತಾವರಣವನ್ನು ನಿರ್ಮಿಸಿ, ಕಣ ್ಣಗೆ ಅಂದವನ್ನು ಕೊಡುವುದರ ಜತೆ ಹಸಿರು ಮನಸ್ಸಿಗೆ ಮುದ ನೀಡುತ್ತದೆ. ಗಿಡಮರಗಳನ್ನು ಬೆಳೆಸುವುದರಿಂದ ಪ್ರಕೃತಿಯ ಸಂರಕ್ಷಣೆ ಜತೆಯಲ್ಲಿ ಮಳೆ-ಬೆಳೆ ಸಮೃದ್ಧಿಯಾಗುತ್ತದೆ. ಇದರಿಂದ ಜೀವಿಗಳಿಗೆ ಬೇಕಾದ ಆಮ್ಲಜನಕವನ್ನು ಒದಗಿಸುತ್ತವೆ ಎಂದರು.

ಈ ಸಂದರ್ಭದಲ್ಲಿ ತಾಪಂ.ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಪುರಸಭೆ ಮಾಜಿ ಉಪಾಧ್ಯಕ್ಷೆ ರೇಖಾ ಗಾಂವಕರ, ಸದಸ್ಯರಾದ ಮಂಜುನಾಥ ನಾಯ್ಕ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಸಮೂದಾಯ ಸಂಘ ಟನಾಧಿಕಾರಿ ಡಿ.ಎಲ್.ರಾಠೋಡ, ಅಭಿಯಂತಕಿ ಶೇಲ್ಜಾ ನಾಯ್ಕ, ನೀರು ಸರಬರಾಜು ವ್ಯವಸ್ಥಾಪಕ ಆನಂದು ನಾಯ್ಕ, ಕಚೇರಿ ವ್ಯವಸ್ಥಾಪಕಿ ಸುರೇಖಾ ಪಾರ್ಸಿಕರ್, ವಿಷ್ಣು ಗೌಡ, ಸಿಬ್ಬಂದಿಗಳಾದ ಬೀರಣ್ಣ ನಾಯಕ, ಮಹೇಶ ಶೇಟ್, ಪುಷ್ಪಾ ಕೇಣ , ಅಮೃತ, ಮಾದೇವಿ, ರಮೇಶ ನಾಯ್ಕ, ಹರಿ ನಾಯ್ಕ ಸೇರಿ ದಂತೆ ಹಲವರು ಉಪಸ್ಥಿತರಿದ್ದರು.