ಡೈಲಿ ವಾರ್ತೆ:13 ಆಗಸ್ಟ್ 2023
ಕಾವಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾಗಿ ಉಲ್ಲಾಸ್ ಶೆಟ್ಟಿ ಆಯ್ಕೆ
ಕೋಟ: ಕಾವಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಕೆ. ಉಲ್ಲಾಸ್ ಕುಮಾರ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಅನಿಲ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಬಿ.ಕುಶಲ ಶೆಟ್ಟಿ, ಕೆ. ಭುಜಂಗ ಶೆಟ್ಟಿ, ಸತೀಶ್ ಪೂಜಾರಿ, ಅನುರಾಜ್ ಕುಲಾಲ್, ಲೀಲಾ ಕೆ.ಶೆಟ್ಟಿ, ಸುಧಾಕರ ಶೆಟ್ಟಿ, ಸರಸ್ವತಿ ಕುಲಾಲ್, ಗುರುವ ಪೂಜಾರಿ, ಗಿರಿಜಾ ಆಯ್ಕೆಯಾಗಿದ್ದರು.