ಡೈಲಿ ವಾರ್ತೆ:13 ಆಗಸ್ಟ್ 2023

ಉದ್ಯಮದಲ್ಲಿ ನಷ್ಟ: ಮನನೊಂದು ಆತ್ಮಹತ್ಯೆಗೆ ಶರಣಾದ ಉದ್ಯಮಿ.!

ಬೆಂಗಳೂರು: ಬ್ರಿಜೇಶ್ ರೆಡ್ಡಿ ಎಂಬ ಉದ್ಯಮಿ ತಾನು ಉದ್ಯಮದಲ್ಲಿ ವಿಪರೀತ ನಷ್ಟ ನೋಡಿದ ಕಾರಣ ಮನನೊಂದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನ ಹೊರವಲಯದ ಆನೇಕಲ್ ತಾಲ್ಲೂಕಿನ ಹುಲ್ಲಹಳ್ಳಿಯಲ್ಲಿ ವರದಿಯಾಗಿದೆ.

ಬನ್ನೇರುಘಟ್ಟ ಸಮೀಪದ ಹುಲ್ಲಹಳ್ಳಿಯ ಮ್ಯಾಂಗೋ ಎಕ್ರೆಸ್ ಲೇಔಟ್ನಲ್ಲಿ ಘಟನೆ ಸಂಭವಿಸಿದ್ದು, ಬ್ರೀಜೆಶ್ ರೆಡ್ಡಿ ಎಂಬ ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡುತ್ತಿದ್ದ ವ್ಯಕ್ತಿ, ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್ನಲ್ಲಿ ಮನೆ ಹಾಗೂ ಆಫೀಸ್ ಮಾಡಿಕೊಂಡಿದ್ದರು. ಇತ್ತೀಚೆಗೆ ಉದ್ಯಮದಲ್ಲಿ ಸಾಕಷ್ಟು ನಷ್ಟ ನೋಡಿದ ಕಾರಣ, ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನೇಣು ಬೀಗಿದುಕೊಂಡು ಸಾವನ್ನಪ್ಪಿದ್ದಾರೆ.

“ತಮ್ಮ ಹೆಚ್.ಎಸ್‌.ಆರ್ ಬಳಿಯ ನಿವಾಸವನ್ನು ಮಾರಾಟ ಮಾಡಿದ್ದ ಮೃತ ಬ್ರಿಜೇಶ್ ರೆಡ್ಡಿ, ಉದ್ಯಮದಲ್ಲಿ ನಷ್ಟ ಹೊಂದಿದ್ದ ಹಿನ್ನೆಲೆ ತೀವ್ರ ಮನನೊಂದಿದ್ದರು. ಹಾಗಾಗಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ಪೊಲೀಸರು ಹೇಳಿದ್ದಾರೆ. ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ ಬನ್ನೇರುಘಟ್ಟ ಪೋಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.