ಡೈಲಿ ವಾರ್ತೆ:13 ಆಗಸ್ಟ್ 2023

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ವ್ಯಕ್ತಿಗೆ ಕೋಟ ಜೀವನ್ ಮಿತ್ರ ತಂಡ ಹಾಗೂ ಯಡ್ತಾಡಿ ಯುವಕ ವಾಹಿನಿ ಮತ್ತು ಸಂಜೀವಿನಿ ಸೇವಾ ಫೌಂಡೇಶನ್ ವತಿಯಿಂದ ಸಹಾಯ ಹಸ್ತ

ಕೋಟ: ಹೃದಯ ಸಮಸ್ಯೆ ಮತ್ತು ಮೂತ್ರ ಪಿಂಡಗಳ ವೈಫಲ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಿ. ಕೆ. ಶ್ರೀನಿವಾಸ ಪೂಜಾರಿ ಎಂಬವರ ಚಿಕಿತ್ಸೆಗೆ ನೆರವು ನೀಡುವ ಉದ್ದೇಶದಿಂದ ಕೋಟದ ಸನ್ಮಿತ್ರರ ತಂಡ ಸಂಗ್ರಹಿಸಿದ ಹಣವನ್ನು ಭಾನುವಾರ ಅವರ ಮನೆಯವರಿಗೆ ಹಸ್ತಾಂತರಿಸಲಾಯಿತು.
ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಬಿ. ಕೆ. ಶ್ರೀನಿವಾಸ ಪೂಜಾರಿ ಕಳೆದ 2 ವರ್ಷಗಳಿಂದ ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರೂ. ಈಗ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದೀಗ ಹೃದಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ ಎಂದೂ ವೈದ್ಯರು ತಿಳಿಸಿರುತ್ತಾರೆ. ಇವರು ಈಗಾಗಲೇ ಚಿಕಿತ್ಸೆಗಾಗಿ 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣ ವ್ಯಯಿಸಿದ್ದು, ಮುಂದಿನ ಚಿಕಿತ್ಸೆಗಾಗಿ ಇನ್ನೂ 5 ರಿಂದ 6 ಲಕ್ಷದ ವರೆಗೆ ಹಣ ಬೇಕಾಗಬಹುದು ಎಂದು ಆಸ್ಪತ್ರೆಯವರು ತಿಳಿಸಿದ್ದಾರೆ. ಆದರೆ ಇಷ್ಟು ಮೊತ್ತವನ್ನು ಭರಿಸುವ ಚೈತನ್ಯವಿಲ್ಲದ ಪೂಜಾರಿ ಕುಟುಂಬ ತೊಂದರೆಯಲ್ಲಿರುವುದನ್ನು ಕೋಟದ ಮಿತ್ರರು ಮನಗಂಡು ಸಹಾಯ ಹಸ್ತ ಚಾಚಿದ್ದಾರೆ.

ಕೋಟ ಜೀವನ್ ಮಿತ್ರ ತಂಡ ಹಾಗೂ ಯಡ್ತಾಡಿ ಯುವಕ ವಾಹಿನಿಯವರು ಆ. 12 ರಂದು ಶನಿವಾರ ಸಾಸ್ತಾನ ಟೋಲ್ ಗೇಟ್ ಬಳಿ ಈ ಉದ್ದೇಶಕ್ಕಾಗಿ ಸಾರ್ವಜನಿಕವಾಗಿ ದಾನಿಗಳಿಂದ ಹಣ ಸಂಗ್ರಹಿಸಿದರು.

ಒಟ್ಟು ಸಂಗ್ರಹಿಸಿದ 57, 027 ರೂಪಾಯಿಗಳನ್ನು ಕೋಟ ಸಮೀಪದ ಕಾಜ್ರಳ್ಳಿಯ ಶ್ರೀ ವನದುರ್ಗಾಪರಮೇಶ್ವರೀ ದೇವಸ್ಥಾನದ ಮೊಕ್ತೇಸರ ಅಲ್ತಾರು ನಿರಂಜನ ಹೆಗ್ಡೆಯವರ ಸಮ್ಮುಖದಲ್ಲಿ ಬಿ. ಕೆ. ಶ್ರೀನಿವಾಸ ಪೂಜಾರಿಯವರ ಮನೆಯವರಿಗೆ ಭಾನುವಾರ ಹಸ್ತಾಂತರಿಸಿ, ಅವರು ಶೀಘ್ರ ಗುಣಮುಖರಾಗಲೆಂದು ಹಾರೈಸಲಾಯಿತು.

ಈ ಸಂದರ್ಭದಲ್ಲಿ ಜೀವನ್ ಮಿತ್ರ ನಾಗರಾಜ್ ಪುತ್ರನ್ ಕೋಟ, ಸಂಜೀವಿನಿ ಸೇವಾ ಫೌಂಡೇಶನ್ ಮಣಿಪಾಲ ಉಡುಪಿ ಇದರ ಸದಸ್ಯರು, ಸಂದೀಪ್ ಅಮೀನ್, ನಾಗರಾಜ್ ಕುಲಾಲ್, ಪ್ರಕಾಶ್ ಪೂಜಾರಿ ಸೈಬ್ರಕಟ್ಟೆ, ಮಹೇಶ್ ಪೂಜಾರಿ. ನಿತೀಶ್ ಮೊಗವೀರ. ಅರುಣ್, ಆಕಾಶ್, ಪವನ್ ಮೊದಲದವರು ಉಪಸ್ಥಿತರಿದ್ದರು. ಸಹಾಯ ಧನವನ್ನು ಸ್ವೀಕರಿಸಿದ ಪೂಜಾರಿ ಮನೆಯವರು ದಾನಿಗಳಿಗೆ ಮತ್ತು ಅವರ ನೆರವು ದೊರಕಿಸಿದ ಸೇವಾಸಕ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಶ್ರೀನಿವಾಸ ಪೂಜಾರಿಯವರ ಚಿಕಿತ್ಸೆಗಾಗಿ ಸಹೃದಯ ದಾನಿಗಳು ತಮ್ಮ ಕೈಲಾದಷ್ಟು ಸಹಾಯ ಮಾಡಿ ಈ ಬಡ ಕುಟುಂಬಕ್ಕೆ ನೆರವಾಗಬೇಕೆಂದು ಈ ಮೂಲಕ ವಿನಂತಿಸಲಾಗಿದೆ.