ಡೈಲಿ ವಾರ್ತೆ:13 ಆಗಸ್ಟ್ 2023
ವರದಿ: ವಿದ್ಯಾಧರ ಮೊರಬಾ
ಸ್ವಾತಂತ್ರ್ಸೋವ ಅಂಗವಾಗಿ ಹಮ್ಮಿಕೊಂಡ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿ ಕ್ರಿಕೆಟ್ ಭಾಂಧವ್ಯ ಬೆಸೆಯಲು ಸಹಕಾರಿ : ತಹಸೀಲ್ದಾರ್ ಅಶೋಕ ಭಟ್
ಅಂಕೋಲಾ : ನಾನಾ ಕಾರಣಗಳಿಂದ ಒತ್ತಡದಲ್ಲಿರುವ ವಿವಿಧ ಇಲಾಖೆ ಅಧಿಕಾರಿಗಳು, ಪತ್ರಕರ್ತರು, ನ್ಯಾಯವಾದಿಗಳು, ಜನಪತ್ರಿನಿಧಿಗಳು ಮತ್ತು ಇತರೇ ಸಂಘ ಸಂಸ್ಥೆಗಳು ಕ್ರಿಕೆಟ್ ಪಂದ್ಯಾವಳಿ ಮೂಲಕ ಸಾರ್ವಜನಿಕರೊಂದಿಗೆ ಮನರಂಜನೆ ಪಡೆಯಲು ಹಾಗೂ ಇನ್ನಷ್ಟು ಭಾಂಧವ್ಯ ಬೆಸೆಯಲು ಈ ಸ್ವಾತಂತ್ರ್ಯೋತ್ಸವ ಕಪ್ ಸಹಕಾರಿ ಎಂದು ತಹಸೀಲ್ದಾರ್ ಅಶೋಕ ಎನ್.ಭಟ್ ಹೇಳಿದರು.
ಸ್ವಾತಂತ್ರ್ಸೋವ ಅಂಗವಾಗಿ ಕಾರ್ಯನಿರತ ಪತ್ರಕರ್ತ ಸಂಘವು ಇಲ್ಲಿಯ ಜೈಹಿಂದ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಪಿಎಸ್‍ಐ ಉದ್ದಪ್ಪ ಧರೆಪ್ಪನವರ ಕ್ರೀಡಾಂಗಣವನ್ನು ಉದ್ಘಾಟಿಸಿ ಮಾತನಾಡಿ, ದೈಹಿಕ ಚಟುವಟಿಕೆಗಳು ಮತ್ತು ಕ್ರೀಡೆಗಳಲ್ಲಿ ಭಾಗವಹಿಸಿದರೆ ಆತ್ಮವಿಶ್ವಾಸ ಮತ್ತು ಕೌಶಲ್ಯ ಗುಣಗಳು ಬೆಳೆಸಲು ಸಾಧ್ಯವಾಗುತ್ತದೆ ಎಂದರು. ಕರಾವಳಿ ಕಾವಲು ಪಡೆಯ ಪಿಎಸ್‍ಐ ಪ್ರಿಯಾಂಕ, ನ್ಯಾಯವಾದಿ ಉಮೇಶ ಎನ್.ನಾಯ್ಕ ಮಾತನಾಡಿದರು. ಪತ್ರಕರ್ತ ಸಂಘದ ಅಧ್ಯಕ್ಷ ಅರುಣ ಶೆಟ್ಟಿ ಅಧ್ಯಕ್ಷತೆ ವಹಿಸ ಮಾತನಾಡಿದರು.
ಪತ್ರಕರ್ತ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಪ್ರಾಸ್ತವಿಕ ಮಾತನಲ್ಲಿ ಕಳೆದ 13 ವರ್ಷ ಹಿಂದೆ ಅಂದು ಅಂಕೋಲಾದಲ್ಲಿ ತಹಸೀಲ್ದಾರ್ ಆಗಿ ಕಾರ್ಯನಿರ್ವಹಿಸಿದ ಕಂದಾಯ ಇಲಾಖೆಯ ಬೆಂಗಳೂರು ಜಂಟಿ ಕಾರ್ಯದರ್ಶಿ ಡಾ.ಬಿ.ಉದಯಕುಮಾರ ಶೆಟ್ಟಿ, ಪಿಎಸ್‍ಐ ಆಗಿ ಕಾರ್ಯನಿರ್ವಹಿಸಿದ ಸಿಐಡಿ ಘಟ ಕದ ಇನ್ಸ್‍ಪೆಕ್ಟರ್ ಎಚ್.ಜಯರಾಜ್ ಅವರ ಮಾರ್ಗದರ್ಶನದಲ್ಲಿ ಈ ಸೌಹಾರ್ದಯುತ ಕ್ರಿಕೆಟ್ ಪಂದ್ಯಾ ವಳಿಯನ್ನು ಪ್ರಾರಂಭಿಸಿದರು ಎಂದರು.
ವೇದಿಕೆಯಲ್ಲಿ ಸಾರಿಗೆ ಇಲಾಖೆಯ ಸಹಾಯಕ ಅಧೀಕ್ಷಕ ಹರೀಶ ಖಾರ್ವಿ, ಜಲಮಂಡಳಿಯ ಅಧಿಕಾರಿ ಇಕ್ಬಾಲ್ ಖಾನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿದ್ಯಾಧರ ಮೊರಬಾ ಸ್ವಾಗತಿಸಿದರು. ದಿನಕರ ನಾಯ್ಕ ನಿರೂಪಿಸಿದರು, ಮಾರುತಿ ಹರಿಕಂತ್ರ ವಂದಿಸಿದರು.
ಜಯಗಳಿಸಿದ ತಂಡ : ಒಟ್ಟು 20 ತಂಡಗಳು ಹೆಸರು ನೋಂದಾಯಿಸಿಕೊಂಡಿದ್ದು, ಇವುಗಳಲ್ಲಿ ಇಂದು (ಭಾನುವಾರ)8 ತಂಡಗಳ ನಡುವೆ ಸ್ಪರ್ಧೆ ನಡೆದಿದ್ದು, ಅವುಗಳಲ್ಲಿ ಪ್ರಥಮವಾಗಿ ಹೆಸ್ಕಾಂ, ರಿಕ್ಷಾ ಯೂನಿಯನ್ ತಂಡ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಗೃಹರಕ್ಷಕ ದಳ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಟ್ಯಾಕ್ಸಿ ಯೂನಿಯನ್ನ ತಂಡವು ಜಯಗಳಿಸಿದೆ. ಇನ್ನುಳಿದ ತಂಡವು ಸೋಮವಾರ ಸ್ಪರ್ಧೆ ನಡೆಯಲಿದ್ದು, ಸ್ವಾತಂತ್ರ್ಯೋತ್ಸವ ದಿನವಾದ ಮಂಗಳವಾರ ಮುಂಜಾನೆ ಸೆಮಿ ಫೈನಲ್ ಮತ್ತು ಮಧ್ಯಾಹ್ನ ವೇಳೆಗೆ ಪೈನ ಲ್ ತಂಡದೊಂದಿಗೆ ಸ್ಪರ್ಧೆ ನಡೆಯಲಿದೆ.