ಡೈಲಿ ವಾರ್ತೆ:14 ಆಗಸ್ಟ್ 2023

ಕುಂದಾಪುರ ಖಾರ್ವಿ ಮೇಲ್ಕೇರಿ ಸರಕಾರಿ ಬಾವಿಕಟ್ಟೆ ಚರಂಡಿ ಬಳಿ ಇರುವ ಅಕ್ರಮ ಕಟ್ಟಡ ತೆರವಿಗೆ ಮಾನ್ಯ ತಹಸೀಲ್ದಾರ್ ರಿಂದ ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ!

ಕುಂದಾಪುರ: ಕುಂದಾಪುರ ತಾಲೂಕು ಕಸಬಾ ಗ್ರಾಮದ ಸ.ನಂ 85/6ಎ ರಲ್ಲಿ 0.04 ಎಕ್ರೆ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಸುವಂತೆ ಉಲ್ಲೇಖ(1) ರಂತೆ ಶ್ರೀ ಸತೀಶ ಖಾರ್ವಿರವರು ಉಡುಪಿ ಜಿಲ್ಲಾಧಿಕಾರಿ, ಕುಂದಾಪುರ ದಂಡಾಧಿಕಾರಿ ಹಾಗೂ ಕುಂದಾಪುರ ಪುರಸಭೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನವಿ ಸಲ್ಲಿಸಿರುತ್ತಾರೆ.

ಈ ಬಗ್ಗೆ ಉಲ್ಲೇಖ(2) ರಂತೆ ತಮ್ಮ ಕಛೇರಿಯಿಂದ ಮನವಿ ಸಲ್ಲಿಸಿರುವಂತೆ ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಸ.ನಂ 85/6ಎ ರಲ್ಲಿ 0.04 ಎಕ್ರೆ ಜಮೀನಿನ ಮೋಜಣಿ ಕಾರ್ಯ ನಡೆಸಿ ಮೋಜಣಿ ನಕ್ಷೆಯೊಂದಿಗೆ ಸರಕಾರಿ ಸ್ಥಳದಲ್ಲ 4.0+4.0 ಮೀ ಅಗಲದ ಕಟ್ಟಡ ಇರುವುದಾಗಿ ಈಗಾಗಲೇ ಉಲ್ಲೇಖ(3)ರಂತೆ ತಿಳಸಲಾಗಿರುತ್ತದೆ.

ಆದ್ದರಿಂದ, ಸದ್ರಿ ಜಮೀನು ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಬರುವುದರಿಂದ ಕುಂದಾಪುರ ಕಸಬಾ ಗ್ರಾಮದ ಸ.ನಂ 85/6ಎ ರಲ್ಲಿ 0,04 ಎಕ್ರೆ ಸರಕಾರಿ ಜಮೀನು ಒತ್ತುವರಿ ಮಾಡಿಕೊಂಡು ಆಕ್ರಮ ಕಟ್ಟಡ ನಿರ್ಮಾಣ ಮಾಡಿರುವುದನ್ನು ತೆರವುಗೊಳಿಸುವ ಬಗ್ಗೆ ನಿಯಮನುಸಾರ ಅಗತ್ಯ ಕ್ರಮವಹಿಸಲು ಮಾನ್ಯ ತಹಸೀಲ್ದಾರರು ಕುಂದಾಪುರ ಪುರಸಭೆ ಮುಖ್ಯಾಧಿಕಾರಿಗೆ ದಿನಾಂಕ 05/08/2023 ರಂದು ಸೂಚಿಸಿದ್ದಾರೆ.