ಡೈಲಿ ವಾರ್ತೆ:14 ಆಗಸ್ಟ್ 2023

ವರದಿ : ವಿದ್ಯಾಧರ ಮೊರಬಾ

ಡಿವೈಎಸ್ಪಿ ಅಂಜುಮಾಲಾ ನಾಯಕರಿಗೆ ರಾಷ್ಟ್ರಪತಿ ಪದಕ

ಅಂಕೋಲಾ : ತಾಲೂಕಿನ ಶಿರಗುಂಜಿ ಗ್ರಾಮದವರಾದ, ಬೆಂಗಳೂರು ಸಿಐಡಿ ಘಟಕದ ಡಿವೈಎಸ್ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಂಜುಮಾಲಾ ತಿಮ್ಮಣ್ಣ ನಾಯಕ ಅವರಿಗೆ 2023ನೇ ಸಾಲಿನ ಸ್ವಾತಂತ್ರೋತ್ಸವ ದಿನಾಚರಣೆ ರಾಷ್ಟ್ರಪತಿಯವರ ಪದಕ ವಿಶಿಷ್ಟ ಸೇವಾ ಪದಕ ಪುರಸ್ಕøತಕ್ಕೆ ಭಾಜನರಾಗಿದ್ದಾರೆ. ಇವರಿಗೆ ಈ ಹಿಂದೆ ಮುಖ್ಯಮಂತ್ರಿಗಳ ಪದಕ ಮತ್ತು ಕೆಂಪೆಗೌಡ ಪ್ರಶಸ್ತಿಗಳು ಪ್ರಧಾನಗೊಂಡಿದೆ.

ಅಂಜುಮಾಲಾ ಮೂಲತಃ ಅಂಕೋಲಾ ತಾಲೂಕಿನ ಶಿರಗುಂಜಿ ಗ್ರಾಮದ ತಿಮ್ಮಣ್ಣ ನಾಯಕ ಮತ್ತು ಶಾಂತಿ ನಾಯಕ ದಂಪತಿಗಳ ಮಗಳಾಗಿದ್ದಾಳೆ. ಇವರು ಬೆಳಗಾವಿಯ ಕಾಕತಿ ಪೊಲೀಸ ಠಾಣೆಯಲ್ಲಿ 2001 ರಲ್ಲಿ ಪಿಎಸ್‍ಐ ಆಗಿ ವೃತ್ತಿ ಪ್ರಾರಂಭಿಸಿದರು. 2008 ರಲ್ಲಿ ಸಿಪಿಐ ಆಗಿ ಬೆಂಗಳೂರು ಹಲಸೂರು ಗೇಟ್, ಜಾಲಹಳ್ಳಿ ಟ್ರಾಫಿಕ, ಮಲ್ಲೇಶ್ವರಂ ಪೊಲೀಸ್ ಠಾಣೆ ಮತ್ತು ಸಿಸಿಬಿ ಬೆಂಗಳೂರು ಇನ್ಸ್‍ಪೆಕ್ಟರ್ ಆಗಿ ಸೇವೆ ಸಲ್ಲಿಸಿದರು. 2022 ರಲ್ಲಿ ಡಿವೈಎಸ್ಪಿ ಆಗಿ ಪದೋನ್ನತಿ ಪಡೆದು ಈಗ ಅವರು ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅಂಜುಮಾಲಾ ಇವರು ಬೆಂಗಳೂರಿನ ಬಚಪನ ಸ್ಲೂಲನ ಮಾಲಕ ಮಂಜುನಾಥ ನಾಯಕ, ಅಂಕೋಲಾದಲ್ಲಿ ದಂತ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸಂಜು ಟಿ.ನಾಯಕ ಮತ್ತು ಕಾರವಾರ ದಲ್ಲಿ ದಂತ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ.ಸಮೀರ ಟಿ.ನಾಯಕ ಅವರ ಸಹೋದರಿಯಾಗಿ ದ್ದಾಳೆ. ಅವರ ಹಿಂದೆ ಪತಿ ಮಹೇಶ ಜಟಕನಮನೆ ದೇವರಬಾವಿ ಅವರ ಪ್ರೋತ್ಸಾಹ ಹಾಗೂ ಮಗಳು ಸ್ತುತಿ ಮತ್ತು ಮಗ ಗ್ರಹಿತ್ ಕ್ರೀಯಾಶೀಲ ಕರ್ತವ್ಯಕ್ಕೆ ಕಾರಣವಾಗಿದೆ.