ಡೈಲಿ ವಾರ್ತೆ:15 ಆಗಸ್ಟ್ 2023
ಶ್ರೀರಾಮ ನಗರ ಕಾಲೋನಿ: ವಿಜೃಂಬಣೆಯ ಸ್ವಾತಂತ್ರ್ಯ ದಿನಾಚರಣೆ: ದೇಶಾಭಿಮಾನ ಬೆಳಿಸಿಕೊಳ್ಳುವಂತೆ ಯುವಕರಿಗೆ ರವಿ ಕೊಟಬಾಗಿ ಕರೆ
ಬೆಳಗಾವಿ 15 : ಇವತ್ತಿನ ದಿನಗಳಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕøತಿಗೆ ಮಾರುಹೋಗುತ್ತಿದ್ದು ನಮ್ಮ ದೇಶದ ಸಂಸ್ಕøತಿ ಅಭಿಮಾನ ಮರೆಯುತ್ತಿರುವುದು ಕಳವಳಿಕರಿಯಾಗಿದೆ. ದೇಶದ ಭದ್ರ ಭುನಾಧಿಯಾಗಿರುವ ಯುವ ಜನಾಂಗ ನಮ್ಮ ದೇಶ-ನಮ್ಮ ಹೆಮ್ಮೆ ಎಂಬುದನ್ನು ಅರಿತು ದೇಶಾಭಿಮಾನ ಬೆಳಿಸಿಕೊಂಡಾಗ ಮಾತ್ರ ದೇಶದ ಸರ್ವೊತೋಮುಖ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರವಿ ಕೊಟಬಾಗಿ ಅಭಿಪ್ರಾಯ ಪಟ್ಟರು.
ಮುತಗಾ ಗ್ರಾಮದ ಬಡಾವಣೆಯಾದ ಶ್ರೀರಾಮನಗರ ಕಾಲೋನಿಯಲ್ಲಿ ಶ್ರೀರಾಮ ನಗರ ರಹವಾಸಿಗಳ ಸಂಘದಿಂದ ಆಯೋಜಿಸಲ್ಪಟ್ಟಿದ್ದ 77 ನೇ ಸ್ವಾತಂತ್ರೋತ್ರ್ಸವ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಹಿರಿಯ ನಾಗರೀಕ ಅಶೋಕ ಉಪಾದ್ಯೆ ತ್ರೀವರ್ಣ ದ್ವಾಜಾರೋಹಣ ನೆರವೇರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಹಿರಿಯ ಗಣ್ಯ ಸೂರ್ಯನಾರಾಯಣ ಭಟ್ ರವರು ದೇಶದ ಸ್ವಾತ್ರಂತ್ರ್ಯ ಪಡೆಯಲು ಅನೇಕರ ಬಲಿದಾನವಾಗಿದ್ದು ದೇಶದ ನಾಯಕರು ಕಂಡ ಕನಸು ನನಸಾಗಲು ಸ್ವಚ್ಚ ಭಾರತ ಅಭಿಯಾನದ ಕನಸು ಈಡೇರಿಸುವಲ್ಲಿ ಸರ್ವರೂ ಪ್ರಾಮಾಣಿಕತೆಯಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಿಟ್ಟುಕೊಂಡಾಗ ಮಾತ್ರ ಸಾದ್ಯವೆಂದು ಅಭಿಪ್ರಾಯಪಟ್ಟರು.
ಮಹಿಳಾ ಮಂಡಳದ ಸದಸ್ಯೆಯರು ಪೂಜೆ ಕಾರ್ಯಕ್ರಮವನ್ನು ನೇರವೆರಿಸದರು. ಕಾರ್ಯಕ್ರಮದಲ್ಲಿ ವಿ. ಬಿ. ಕೋಟಬಾಗಿ, ನಾಗರಾಜ ಪೋತದಾರ, ಶೀತಲ ಪಾಟೀಲ, ಎಂ.ಬಿ.ಪಾಟೀಲ, ಶಂಕರ ದಂಡೀನ, ಆಕಾಶ್ ಶೆಟ್ಟಿ, ಶೀವು ಪಾಟೀಲ, ಶ್ರೀನಾಥ ಪೂಜೇರಿ ಒಳಗೊಂಡಂತೆ ಅನೇಕರು ಉಪಸ್ಥಿತರಿದ್ದರು.
ಪೋಟೋ ಕ್ಯಾಪ್ಶನ್ : ಮುತಗಾ ಗ್ರಾಮದ ಬಡಾವಣೆಯಾದ ಶ್ರೀರಾಮನಗರ ಕಾಲೋನಿಯಲ್ಲಿ ಆಯೋಜಿಸಲ್ಪಟ್ಟಿದ್ದ 77 ನೇ ಸ್ವಾತಂತ್ರೋತ್ರ್ಸವ ಸಂಭ್ರಮಾಚರಣೆ. ರವಿ ಕೊಟಬಾಗಿ, ಅಶೋಕ ಉಪಾದ್ಯೆ, ಸೂರ್ಯನಾರಾಯಣ ಭಟ್, ವಿ. ಬಿ. ಕೋಟಬಾಗಿ, ನಾಗರಾಜ ಪೋತದಾರ, ಶೀತಲ ಪಾಟೀಲ, ಎಂ.ಬಿ.ಪಾಟೀಲ, ಶಂಕರ ದಂಡೀನ, ಆಕಾಶ್ ಶೆಟ್ಟಿ, ಶೀವು ಪಾಟೀಲ, ಶ್ರೀನಾಥ ಪೂಜೇರಿ ಮತ್ತು ಮಹಿಳಾ ಮಂಡಳದ ಸದಸ್ಯೆಯರನ್ನು ಕಾಣಬಹುದು.