ಡೈಲಿ ವಾರ್ತೆ:15 ಆಗಸ್ಟ್ 2023

ಮಂಗಳೂರು: ಎಸ್.ಡಿ.ಪಿ.ಐ ವತಿಯಿಂದ ಮೂಡಬಿದರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಸ್ವಾತಂತ್ರೋತ್ಸವ ಆಚರಣೆ

ಎಸ್.ಡಿ.ಪಿ.ಐ ಮೂಡಬಿದರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಫ್ಯಾಶಿಸ್ಟರ ಸಂಕೋಲೆಯಿಂದ ದೇಶದ ಸ್ವಾತಂತ್ರ್ಯವನ್ನು ರಕ್ಷಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಮೂಡಬಿದರೆ, ಬಜಪೆ, ಸೂರಿಂಜೆ, ಜೋಕಟ್ಟೆ, ಕಿನ್ನಿಗೋಳಿ ಹಾಗೂ ಹಳೆಯಂಗಡಿಗಳಲ್ಲಿ ಸಂಭ್ರಮದ ಸ್ವಾತಂತ್ರೋತ್ಸವದ ಅಂಗವಾಗಿ ಧ್ವಜಾರೋಹಣಗೈಯಲಾಯಿತು.

ಮೂಡಬಿದರೆಯಲ್ಲಿ ಎಸ್.ಡಿ.ಪಿ.ಐ. ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ನೇತ್ರತ್ವ ವಹಿಸಿ ಸಂದೇಶ ಭಾಷಣವನ್ನು ನೀಡಿದರು. ಮೂಡಬಿದರೆ ಬ್ಲಾಕ್ ನಾಯಕ ಇಸ್ಮಾಯಿಲ್, ಪುತ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತಾಹಿರಾ ಹಂಡೇಲು, ಇಬ್ರಾಹಿಂ, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಸಲೀಂ, ಕಿಲ್ಲಾ ಜಾಮಿಯ ಮಸೀದಿಯ ಸದಸ್ಯ ಶಾಹಿದ್, ಇಸ್ಮಾಯಿಲ್ ಗಂಟಾಲ್ ಕಟ್ಟೆ ಮುಂತಾದವರು ಭಾಗವಹಿಸಿದ್ದರು.

ಬಜಪೆಯಲ್ಲಿ ಎಸ್.ಡಿ.ಪಿ.ಐ ಪಟ್ಟಣ ಪಂಚಾಯತ್ ಅಧ್ಯಕ್ಷ ಇರ್ಷಾದ್ ಬಜ್ಪೆ ನೇತ್ರತ್ವ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಆಶ್ರಫ್ ಮಾಚಾರ್, ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಸಂದೇಶ ಭಾಷಣ ಮಾಡಿದರು. ಈ ಸಂಧರ್ಭದಲ್ಲಿ ಬಜಪೆ ಬ್ಲಾಕ್ ಅಧ್ಯಕ್ಷ ರಹೀಂ ಕಳವಾರು, ಅನ್ವರ್, ಸ್ಪೋರ್ಟಿಂಗ್ ಅಧ್ಯಕ್ಷ ರಿಯಾಝ್, ಹಿರಿಯರಾದ ಅಬೂಬಕ್ಕರ್ ಹಾಜಿ, ಸಲೀಲ್ ಭಾಗವಹಸಿದ್ದರು.

ಸೂರಿಂಜೆಯಲ್ಲಿ ಗ್ರಾಮ ಸಮಿತಿ ಅಧ್ಯಕ್ಷ ಮಾಲಿಕ್ ಸೂರಿಂಜೆ ನೇತ್ರತ್ವ ವಹಿಸಿದ್ದರು. ಎಸ್.ಎ ಕಲಂದರ್ ಸಂದೇಶ ಭಾಷಣ ಮಾಡಿದರು. ಮೂಡಬಿದರೆ ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿ ಅಯ್ಯೂಬ್, ಸದಸ್ಯರಾದ ಸಲಾಂ ಸೂರಿಂಜೆ, ಯಾಕುಬ್ ರವರು ಉಪಸ್ಥಿತರಿದ್ದರು.

ಜೋಕಟ್ಟೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಶಿಹಾಬ್ ಜೋಕಟ್ಟೆ ನೇತ್ರತ್ವ ವಹಿಸಿದ್ದರು ಹಾಗು ಶಾಹಿಲ್ ಜೋಕಟ್ಟೆ ಸಂದೇಶ ಭಾಷಣ ಮಾಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ಫರ್ವೀಝ್ ಅಲಿ, ಸಿದ್ದೀಕ್ ಈದ್ಗಾ, ಹಿರಿಯರಾದ ಬಾವಾಕ ನಳಿಕೆಮಾರ್, ಹಳೇ ಮಸೀದಿ ಅಧ್ಯಕ್ಷ ಎಂ.ಎಂ. ಹನೀಫ್ ಉಪಸ್ತರಿತರಿದ್ದರು.

ಕಿನ್ನಿಗೋಳಿಯಲ್ಲಿ ಎಸ್.ಡಿ.ಪಿ.ಐ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಜಲೀಲ್ ರವರು ನೇತ್ರತ್ವ ವಹಿಸಿದ್ದರು. ಭಾರತೀಯ ಸೇನೆಯ ಸೈನಿಕ ನಹೀಮ್ ಗುತ್ತಕಾಡುರವರು ಧ್ವಜಾರೋಹಣಗೈದರು ಹಾಗೂ ಮಸೀದಿಯ ಇಮಾಮರಾದ ನೌಫಲ್ ಸಖಾಫಿಯವರು ಸಂದೇಶ ಭಾಷಣ ಮಾಡಿದರು.

ಹಳೆಯಂಗಡಿಯಲ್ಲಿ ಮುಲ್ಕಿ ಬ್ಲಾಕ್ ಅಧ್ಯಕ್ಷ ಹಾರಿಸ್ ನವರಂಗ್ ನೇತ್ರತ್ವ ವಹಿಸಿದ್ದರು. ಶಮೀಮ್ ನವರಂಗ್, ಮಸೀದಿಯ ಸದರ್ ಮುಅಲ್ಲಿಂ ನಾಸಿರ್ ಉಸ್ತಾದ್, ರಿಲಾಯನ್ಸ್ ಅಧ್ಯಕ್ಷ ಕೌಶಿಕ್, ಇಕ್ಬಾಲ್ ಹಾಗೂ ಹನೀಫ್ ಸಂದೇಶ ಭಾಷಣ ಮಾಡಿದರು.