



ಡೈಲಿ ವಾರ್ತೆ:17 ಆಗಸ್ಟ್ 2023


ವರದಿ: ವಿದ್ಯಾಧರ ಮೊರಬಾ
ಅಂಕೋಲಾ ನಿವೃತ್ತ ಎಎಸ್ಐ ಚಂದ್ರಕಾಂತ ದೇವಣ್ಣ ನಾಯಕ್ ನಿಧನ

ಅಂಕೋಲಾ : ತಾಲೂಕಿನ ಅಡ್ಲೂರ ಗ್ರಾಮದ ನಿವೃತ್ತ ಎಎಸ್ಐ ಚಂದ್ರಕಾಂತ ದೇವಣ್ಣ ನಾಯಕ (67) ಗುರುವಾರ ಸ್ವಗೃಹದಲ್ಲಿ ನಿಧನರಾದರು.
ಇವರು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಆಗಿ ನಿವೃತ್ತಿ ಪಡೆಯುವ ಮೂಲಕ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದರು. ಇವರಿಗೆ ಓವ೯ಪುತ್ರ, ಪತ್ನಿ ಇದ್ದಾರೆ.
ಅಂತಿಮ ದರ್ಶನದಲ್ಲಿ ಚಂದ್ರಕಾಂತ ನಾಯಕರು ಪ್ರಾಥಿವ ಶರೀರಕ್ಕೆ ಅಂಕೋಲಾ ಪಿಎಸ್ಐ ಸುನೀಲ್ ಹುಲ್ಲೋಂಳ್ಳಿ ನಮನ ಸಲ್ಲಿಸಿದರು.
ಇದೇ ವೇಳೆ ಅಗಸೂರು ಗ್ರಾಪಂ.ನೂತನ ಅಧ್ಯಕ್ಷೆ ನಿಮಾ೯ಲಾ ಆರ್.ನಾಯಕ, ಮಾಜಿ ಅಧ್ಯಕ್ಷ ರಾಮಚಂದ್ರ ಡಿ.ನಾಯ್ಕ, ತಾಲೂಕು ಯುವ ಒಕ್ಕೂಟದ ಅಧ್ಯಕ್ಷ ಹಾಗೂ ಗ್ರಾಪಂ.ಮಾಜಿ ಸದಸ್ಯ ಗೋಪು ನಾಯಕ ಅಡ್ಲೂರು, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ, ಬೀರಣ್ಣ ಮಾಸ್ತರ, ದೇವಾನಂದ ಗಾಂವಕರ, ಪೊಲೀಸ್ ಸಿಬ್ಬಂದಿ ಸತೀಶ ಅಂಬಿಗ,ಸ್ಥಳೀಯರು ಸೇರಿದಂತೆ ಹಲವಾರು ಅಂತಿಮ ದರ್ಶನದಲ್ಲಿ ಪಾಲ್ಗೊಂಡರು.