ಡೈಲಿ ವಾರ್ತೆ: 17/09/2023

ಮೆಲ್ಕಾರ್ ಪದವಿ ಕಾಲೇಜು ಪದವಿ ಪ್ರದಾನ ಕಾರ್ಯಕ್ರಮ

ಬಂಟ್ವಾಳ : ಸೆ.17, ಮಾರ್ನಬೈಲ್ ಇಲ್ಲಿನ ಮೆಲ್ಕಾರ್ ಪದವಿ ಕಾಲೇಜಿನ ಒಂಭತ್ತನೇ ವಾರ್ಷಿಕ ಪದವಿ ಪ್ರದಾನ ಕಾರ್ಯಕ್ರಮವು ಶನಿವಾರ ಕಾಲೇಜಿನಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ. ಎ.ಎಂ ಖಾನ್ ಮಾತನಾಡಿ , ಪದವಿ ಎಂಬುದು ಕಲಿಕೆಯ ಅಂತ್ಯವಲ್ಲ, ಅದೊಂದು ಹಂತ, ಪ್ರತಿಯೊಬ್ಬರು ತಮ್ಮ ಜ್ಞಾನವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಪುಸ್ತಕಗಳನ್ನು ಓದುವುದರೊಂದಿಗೆ, ಪತ್ರಿಕೆಗಳು, ವಾರ್ತೆಗಳು, ಇತರೆ
ಮಾಹಿತಿಗಳನ್ನು ತೆಗೆದುಕೊಂಡು ತಮ್ಮ ಮಸ್ತಕವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಲೋಕಾನುಭವದೊಂದಿಗೆ
ವೈಜ್ಞಾನಿಕ, ವೈಚಾರಿಕ, ಚಿಂತನಾಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಸ್. ಎಂ. ರಶೀದ್ ಹಾಜಿ ಮಾತನಾಡಿ,
ಕಲಿಕೆಯೊಂದಿಗೆ ಶಿಸ್ತು, ದೇಶಾಭಿಮಾನ, ಸಾಮರಸ್ಯದ ಬದುಕು, ರೂಡಿಸಿಕೊಂಡು ವ್ಯಕ್ತಿತ್ವ ವಿಕಸನವನ್ನು ಮಾಡಿಕೊಂಡು, ಸಮಾಜದಲ್ಲಿ ಗಣ್ಯ ಮಾನ್ಯ ವ್ಯಕ್ತಿಯಾಗಿ ಬದುಕಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ
ಬಿ.ಕೆ. ಅಬ್ದುಲ್ ಲತೀಫ್ ಉಪಸ್ಥಿತರಿದ್ದರು.
ಇದೇ ವೇಳೆ ಪದವಿ ತರಗತಿಗಳಲ್ಲಿ ಹೆಚ್ಚು ಅಂಕಗಳಿಸಿದ ಬಿ.ಕಾಂ. ನ ರಶೀನಾ ಹಾಗೂ ಬಿ.ಎ. ತರಗತಿಯ ಫಾತಿಮಾ ಫರ್ವೀನಾ ಇವರನ್ನು ಗೌರವಿಸಲಾಯಿತು.
64 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು.
ಎಲ್ಲಾ ಉಪನ್ಯಾಸಕ ವೃಂದದವರು, ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿ ನಝ್ಮಿಯಾ ಜಾಸ್ಮಿನ್ ಸ್ವಾಗತಿಸಿ, ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ನುಸೈಬ ಬಾನು ವಂದಿಸಿದರು, ಅಂತಿಮ ಬಿ.ಎ ವಿದ್ಯಾರ್ಥಿನಿ ಪಿ. ಝುಬೈದಾ ಸಲ್ಹಾ ಕಾರ್ಯಕ್ರಮ ನಿರೂಪಿಸಿದರು.