ಡೈಲಿ ವಾರ್ತೆ:17 ಸೆಪ್ಟೆಂಬರ್ 2023
ವರದಿ : ವಿದ್ಯಾಧರ ಮೊರಬಾ
ಹರಿಹರ ಹರಿಕಂತ್ರ ಅವರ ನೇತೃತ್ವದಲ್ಲಿ ನಡೆದ ಇಂಜಿನಿಯರ್ಸ್ ಡೇ – ಭವಿಷ್ಯದ ಇಂಜಿನಿಯರುಗಳಿಗೆ ವಿಶ್ವೇಶ್ವರಯ್ಯನವರ ಪ್ರೇರಣೆ ಮಾದರಿಯಾಗಲಿ: ಡಾ.ಬಿ.ಮಂಜ ನಾಯ್ಕ
ಅಂಕೋಲಾ : ಇಂದಿನ ದಿನಗಳಲ್ಲಿ ವಿವಿಧ ಸೌಕರ್ಯ ಯೋಜನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂಜಿಯರ್‍ಗಳ ಪಾತ್ರ ಬಹಳ ದೊಡ್ಡದಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಇಂಜಿನಿಯರುಗಳಿಗೆ ವಿಶ್ವೇಶ್ವರಯ್ಯ ನವರ ಪ್ರೇರಣೆ ಮುಂದುವರೆಯವ ಮೂಲಕ ಮಾದರಿಯಾಗಲಿ ಎಂದು ಮಂಗಳೂರು ಮೀನುಗಾರಿಕೆ ಕಾಲೇಜಿನ ತಾಂತ್ರಿಕ ವಿಭಾಗದ ಪ್ರಾಧ್ಯಾಪಕ ಡಾ.ಬಿ.ಮಂಜ ನಾಯ್ಕ ಹೇಳಿದರು.
ಅಸೋಷಿಯೇಶನ್ ಆಫ್ ಇಂಜಿನಿಯರ್ಸ್ ಉ.ಕ.ಅಂಕೋಲಾ ಮತ್ತು ನಾಗರಿಕ ವೇದಿಕೆಯ ಸಂಯುಕ್ತಾಶ್ರ ಯದಲ್ಲಿ ಪಟ್ಟಣದ ಪಿ.ಎಂ.ಹೈಸ್ಕೂಲ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ ಜಿಲ್ಲಾಮಟ್ಟದ ಇಂಜಿನಿಯರ್ಸ್ ಡೇ ಆಚರಣೆಯ ದಶಮಾನೋತ್ಸವ ಸಮಾರಂಭ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರ ಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಪ್ರತಿಭಾ ಅಕಾಡೆಮೆ ಸಂಚಾಲಕ ಮತ್ತು ಧಾರವಾಡ ಉಚ್ಛ ನ್ಯಾಯಾಲಯದ ವಕೀಲರಾದ ಹೇಮಾಂತ ಸಹದೇವಪ್ಪ ಕರ್ಜಗಿ ಮಾತನಾಡಿ, ಕರಾವಳಿ ಜನರು ಕಷ್ಟದ ವೇಳೆಯಲ್ಲಿ ಮಾನವೀಯತೆ ತೋರಿಸುವಲ್ಲಿ ಏತ್ತಿದ್ದಕೈ ಆದರೆ ಉತ್ತರ ಕರ್ನಾಟಕದಲ್ಲಿ ಜನ ಆಗಿಲ್ಲಾ. ಇಂದಿನ ದಿನಗಳಲ್ಲಿ ಆಧುನಿಕ ಮತ್ತು ಅಭಿವೃದ್ಧಿಗೆ ಹೊಂದಿದ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಲು ಶ್ರಮಿಸುತ್ತಿರುವ ಎಲ್ಲಾ ಇಂಜಿ ನಿಯರ್‍ಗಳನ್ನು ಗೌರವಿಸಲು ಮತ್ತು ಗುರುತಿಸಲು ಇಂಜಿನಿಯರ್ಸ್ ಡೇ ಒಂದು ಅರ್ಥಪೂರ್ಣ ಕಾರ್ಯ ಕ್ರಮ ಎಂದರು.
ಅಸೋಷಿಯೇಶನ್ ಆಫ್ ಇಂಜಿನಿಯರ್ಸ್ ಉ.ಕ.ಅಂಕೋಲಾ ಅಧ್ಯಕ್ಷ ಹರಿಹರ ಹರಿಕಂತ್ರ ಹಿಲ್ಲೂರು ಅಧ್ಯ ಕ್ಷತೆವಹಿಸಿ ಮಾತನಾಡಿ, ಸಂಘಟನೆ ಮಾಡಲು ಅತಿಯಾದ ಪರಿಶ್ರಮ ಅಗತ್ಯ. ನಮ್ಮೆಲ್ಲಾ ಹಿರಿಯ ಮತ್ತು ಕಿರಿಯ ಇಂಜಿನಿಯರ್ಸ್‍ಗಳ ಸಹಕಾರದೊಂದಿಗೆ ಕಳೆದ 10 ವರ್ಷಗಳಿಂದ ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಇಂದು ದಶಮಾನೋತ್ಸವ ಸಮಾರಂಭ ಕಾರ್ಯಕ್ರಮ ನಡೆಸಲು ಸಹಕಾರಿ ಆಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಬಾಗ, ಪಿಡಿಬ್ಲ್ಯೂಡಿ ಇಲಾಖೆಯ ಕಾರವಾರ ಎಇಇ ರಾಮು ಅರ್ಗೇಕರ್, ನಿವೃತ್ತ ಎಇಇ ವಿನಾಯಕ ಶೇಟ ಶಿರಸಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮೀಣ ಕುಡಿ ಯುವ ನೀರು ಮತ್ತು ನೈರ್ಮಲ್ಯ ಉಪ ವಿಬಾಗದ ಎಇಇ ಸಂಜೀವ ಆರ್. ನಾಯಕ, ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಬೀರಣ್ಣ ನಾಯಕ (ಬಾಬು ಸುಂಕೇರಿ) ಹಿಲ್ಲೂರು, ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನಿ, ಬೊಬ್ರುವಾಡ ಗ್ರಾಪಂ.ಉಪಾಧ್ಯಕ್ಷೆ ಪರಮೇಶ್ವರಿ ಚಂದ್ರಕಾಂತ ಪಿರನಕರ್, ಗೌರವಾಧ್ಯಕ್ಷ ಪ್ರದೀಪ ನಾಯ್ಕ ತೆಂಕಣಕೇರಿ, ತುಕಾರಾಮ ಖಾರ್ವಿ, ಪ್ರಕಾಶ ನಾಯ್ಕ, ಲಕ್ಷ್ಮಣ ನಾಯ್ಕ, ಪ್ರಭಾಕರ ನಾಯ್ಕ, ಜಗದೀಶ ನಾಯ್ಕ, ನಾಗೇಂದ್ರ ನಾಯ್ಕ ಉಪಸ್ಥಿತರಿದ್ದರು.
ಪಿಎಂ ಪ್ರೌಢ ಶಾಲೆಯ ಎನ್.ಸಿ.ಸಿ.ಅಧಿಕಾರಿ ಜಿ.ಆರ್.ತಾಂಡೇಲ್ ನಿರೂಪಿಸಿದರು. ನಾಗರಿಕ ವೇದಿಕೆಯ ಕಾರ್ಯದರ್ಶಿ ಪ್ರವಿಣ ನಾಯಕ ಹಿಲ್ಲೂರು ವರದಿ ವಾಚಿಸಿದರು. ಅಸೋಷಿಯೇಶನ್ ಜಿಲ್ಲಾ ಉಪಾಧ್ಯಕ್ಷ ಸಂತೋಷ ಆರ್.ನಾಯ್ಕ ಕೇಣ , ತಾಲೂಕಾಧ್ಯಕ್ಷ ಸಂತೋಷ ಆರ್.ನಾಯ್ಕ ನಿರ್ವಹಿಸಿದರು.
ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ : ಎಸ್‍ಎಸ್‍ಎಲ್‍ಸಿ ಮತ್ತು ಪಿಯು ವಿಭಾಗದ ಕಲೆ, ವಾಣ ಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸ ಲಾಯಿತು. ವಿವಿಧ ಸಾಧಕರಾದ ನಾಟಿ ವೈದ್ಯ ಹನುಮಂತ ಗೌಡ ಬೆಳಂಬಾರ, ರಾಮು ಅರ್ಗೇಕರ್ ವಿನಾಯಕ ಶೇಟ್ ಶಿರಸಿ, ಕಾರವಾರ ಡಿಯುಡಿಸಿ ವಿಭಾಗದ ಇಂಜಿನಿಯರ ಭಾಸ್ಕರ ಗೌಡ, ಡಾ.ಬಿ. ಮಂಜ ನಾಯ್ಕ, ಎಸ್.ಕೆ.ಕೈರಾನ್ ಹೊನ್ನಾವರ, ಉರಗ ರಕ್ಷಕ ಪವನ್ ಎಂ. ನಾಯ್ಕ, ಮಂಜುನಾಥ ನಾಯ್ಕ ಭಟ್ಕಳ, ರಾಜು ಮಂಜಪ್ಪ ನಾಯ್ಕ, ಮುರ್ಕುಂಡಿ ನಾಯ್ಕ, ಗಂಗನಾಥ ನಾರಾಯಣ ಸ್ವಾಮಿ, ಗಣಪತಿ ಗೌಡ, ರಮೇಶ ಬಂಟ ನಾಯ್ಕ, ಮುರಲೀಧರ ಜಿ. ಬಂಟ ಇವರಿಗೆ ಅಸೋಷಿಯೇಶನ್ ಆಫ್ ಇಂಜಿನಿಯರ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.