ಡೈಲಿ ವಾರ್ತೆ: 18/09/2023

ಎಗ್ ರೈಸ್ ತಿಂದು ಹಣ ಕೇಳಿದ್ದಕ್ಕೆ ಶುರುವಾದ ಜಗಳ – ಅಂಗಡಿ ಮಾಲೀಕನ ಕೊಲೆಯಲ್ಲಿ ಅಂತ್ಯ

ಬಾಗಲಕೋಟೆ: ಕುಡಿದ ನಶೆಯಲ್ಲಿ ಎಗ್ ರೈಸ್ ತಿಂದು ಹಣ ಕೇಳಿದ್ದಕ್ಕೆ ಜಗಳ ಶುರುವಾಗಿ ಎಗ್‌ರೈಸ್ ಅಂಗಡಿ ಮಾಲೀಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಢ ಪಟ್ಟಣದಲ್ಲಿನ ಬಸ್ ನಿಲ್ದಾಣದ ಬಳಿ ರಾತ್ರಿ ಘಟನೆ ನಡೆದಿದೆ. ಗೈಬುಸಾಬ್ ಮುಲ್ಲಾ (29) ಕೊಲೆಯಾದ ವ್ಯಕ್ತಿಯಾದರೆ ಮಸ್ತಫಾ ಜಂಗಿ (22) ಕೊಲೆ ಮಾಡಿದ ಆರೋಪಿ.

ಮುಸ್ತಫಾ ಕುಡಿದ ನಶೆಯಲ್ಲಿ ಗೈಬುಸಾಬ್ ಮುಲ್ಲಾ ಅಂಗಡಿಗೆ ಬಂದು ಎಗ್ ರೈಸ್ ತಿಂದಿದ್ದ. ಬಳಿಕ ಗೈಬುಸಾಬ್ ಹಣ ಕೇಳಿದ್ದಕ್ಕೆ ಆತ ಕೊಡಲ್ಲ ಎಂದು ವಾದಿಸಿದ್ದ. ಇದಕ್ಕೆ ಇಬ್ಬರ ಮಧ್ಯೆ ಜಗಳ ಶುರುವಾಗಿ ಮುಸ್ತಫಾ ಚಾಕುವಿನಿಂದ ಇರಿದು ಗೈಬುಸಾಬ್‌ನ ಕೊಲೆ ಮಾಡಿದ್ದಾನೆ.
ಈ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.