ಡೈಲಿ ವಾರ್ತೆ:18 ಸೆಪ್ಟೆಂಬರ್ 2023

ವರದಿ : ವಿದ್ಯಾಧರ ಮೊರಬಾ

ಅಂಕೋಲಾ ಪೊಲೀಸರಿಂದ 76 ಸಾವಿರ ರೂ. ಮೌಲ್ಯದ ಗೋವಾ ಸರಾಯಿ ವಶಕ್ಕೆ

ಅಂಕೋಲಾ: ತಾಲೂಕಿನ ಹಟ್ಟಿಕೇರಿಯ ಅರಣ್ಯ ಇಲಾಖೆಯ ಕಟ್ಟಿಗೆ ಡಿಪೋ ಎದುರಿನ ರಾಷ್ಟ್ರೀಯ ಹೆದ್ದಾರಿಯ ಪೂರ್ವ ಬದಿಯ ಚರಂಡಿಯಲ್ಲಿ ಬಚ್ಚಿಟ್ಟ 76150 ರೂ. ಮೌಲ್ಯದ ಗೋವಾ ಸಾರಾಯಿಯನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಸ್ತೆಯಂಚಿನ ಚರಂಡಿಯಲ್ಲಿ ಸರಾಯಿ ಬಚ್ಚಿಟ್ಟ ಖಚಿತ ಮಾಹಿತಿಯ ಮೇರೆಗೆ ಸೋಮವಾರನ ನಸುಕಿನ 4 ಗಂಟೆಗೆ ಅಂಕೋಲಾ ಪೊಲೀಸರು ಪಿಎಸ್ಐ ಸುಹಾಸ್ ಆರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಗೋವಾ ರಾಜ್ಯದ ಮುದ್ರಿಕೆ ಹೊಂದಿರುವ ವಿವಿಧ ಬ್ರಾಂಡ್ ನ 635 ಮಧ್ಯದ ಬಾಟಲಿಗಳು ಪತ್ತೆಯಾಗಿವೆ. ಇವುಗಳ ಮೌಲ್ಯ ರೂಪಾಯಿ 76150 ಎಂದು ಅಂದಾಜಿಸಿ ಪ್ರಕರಣ ದಾಖಲಿಸಲಾಗಿದೆ.
ಪಿಐ ಸಂತೋಷ ಶೆಟ್ಟಿ ಅವರು ಮಾಗ೯ದಶ೯ನದಲ್ಲಿ
ಪಿಎಸ್ಐ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.