ಡೈಲಿ ವಾರ್ತೆ:24 ಸೆಪ್ಟೆಂಬರ್ 2023
ಕೋಟ: ಚರಂಡಿ ದುರಸ್ಥಿ ವೇಳೆ ಕಾಮಗಾರಿ ನಡೆಸಲು ತೊಡಕು – ಮಣೂರು ಬಾಳೆಬೆಟ್ಟು ಗ್ರಾಮಸ್ಥರಿಂದ ಪ್ರತಿಭಟನೆ!
ಕೋಟ: ಚರಂಡಿ ದುರಸ್ಥಿ ವೇಳೆ ಕಾಮಗಾರಿ ನಡೆಸಲು ತೊಡಕು ಉಂಟು ಮಾಡಿ ,ಸರಕಾರದ ಜಾಗವನ್ನು ಕಬಳಿಸಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿ,ಹಳೆ ಚರಂಡಿಯ 4000 ಶಿಲೆಕಲ್ಲುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿರುವ ಬಾಳೆಬೆಟ್ಟು ನಿವಾಸಿ ಕಾಳಿಂಗ ಪೂಜಾರಿಯವರ ವಿರುದ್ಧ ಗ್ರಾಮಸ್ಥರು ರಸ್ತೆ ಬಂದ್ ಮಾಡಿ ಪ್ರತಿಭಟಿಸಿದರು ಮತ್ತು ಇದಕ್ಕೆ ಕುಮ್ಮಕ್ಕು ನೀಡುತ್ತಿರುವ ಕೋಟ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶೇಖರ ಪೂಜಾರಿಯವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಮತ್ತು ಸರಕಾರದ ಜಾಗ ಪಂಚಾಯತ್ ತಮ್ಮ ವಶಕ್ಕೆ ಕೂಡಲೇ ಪಡೆದುಕೊಳ್ಳುವಂತೆ ಘೋಘಣೆ ಕೂಗಿದರು.
ಪ್ರತಿಭಟನೆಯಲ್ಲಿ ಊರಿನ ಹಿರಿಯರಾದ ಹೆರಿಯ ಪೂಜಾರಿ, ಕೋಟಿ ಪೂಜಾರಿ ,ಶಂಕರ ಪೂಜಾರಿ,ಅರುಣಾಚಲ ಮಯ್ಯ ,ರಾಜೇಂದ್ರ ಉರಾಳ,ಕೊರ್ಗು ಪೂಜಾರ್ತಿ,ಶೈಲಜಾ ಶೆಟ್ಟಿ,ಗಿರಿಜಾ ಪೂಜಾರ್ತಿ,ಸಾಕು ಪೂಜಾರ್ತಿ, ಚಂದ್ರ ಪೂಜಾರಿ, ಹರೀಶ ಪೂಜಾರಿ, ಪ್ರಸಾದ್ ಬಿಲ್ಲವ,ರತ್ನಾಕರ ಪೂಜಾರಿ,ಪ್ರವೀಣ್ ಶೆಟ್ಟಿ, ಹಾಗೂ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯರಾದ ಶಿವರಾಮ ಶೆಟ್ಟಿ ಮತ್ತು ಶಾಂತಾ ರವರು ಉಪಸ್ಥಿತರಿದ್ದರು.