ಡೈಲಿ ವಾರ್ತೆ: 24/Sep/2023

-ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ

ವಂಡ್ಸೆ :ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಕುಂದಾಪುರ: ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರು ದಿನಾಂಕ 23-09-2023 ನೇ ಶನಿವಾರದಂದು ವಂಡ್ಸೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ತೂರಿನಲ್ಲಿ ನಡೆಯಿತು.
ಎಂ ಸುಬ್ರಹ್ಮಣ್ಯ ಮಂಜ ವೇದಿಕೆಯಲ್ಲಿ ಎಮ್.ಎಸ್ ಮಂಜ ಚಾರಿಟೇಬಲ್ ಟ್ರಸ್ಟ್‌ ನ ಅಧ್ಯಕ್ಷರಾದ ಶ್ರೀ ಯುತ ಕೃಷ್ಣ ಮೂರ್ತಿ ಮಂಜರು ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನಂತರ ಪ್ರತಿಭಾ ಕಾರಂಜಿಯ ನಾಮಫಲಕವನ್ನು ಮಿಂಚು ಪುಡಿಯನ್ನು ಚಿಮುಕಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ತೂರು ಗ್ರಾ.ಪಂ ಅಧ್ಯಕ್ಷರಾದ ಶ್ರೀ ಯುತ ರವೀಂದ್ರ ಶೆಟ್ಟಿ ಯವರು ವಹಿಸಿದರು. ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಯುತ ಬಾಲಕೃಷ್ಣ ಶೆಟ್ಟಿ ಎಚ್ ಇವರು ಸರ್ವರನ್ನು ಸ್ವಾಗತಿಸಿದರು. ಪ್ರತಿಭಾ ಕಾರಂಜಿಯ ತಾಲೂಕ್ ನೋಡಲ್ ಅಧಿಕಾರಿಯಾದ ಶ್ರೀ ಯುತ ರಾಮಕೃಷ್ಣ ದೇವಾಡಿಗ ಪ್ರಸ್ತಾವಿಕ ಮಾತುಗಳನ್ನಾಡಿದರು. ಉಡುಪಿ ಜಿಲ್ಲಾ ಸಮನ್ವಯ ವೇದಿಕೆ ಗುರುತಿಸಲ್ಪಟ್ಟ ಅತ್ಯುತ್ತಮ ಸಿ.ಆರ್.ಪಿ ಪ್ರಶಸ್ತಿ ಪುರಸ್ಕೃತರಾದ ಸಿ.ಆರ್.ಪಿ ನಾಗರಾಜ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು.
ನಂತರ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀಯುತ ಬಾಲಕೃಷ್ಣ ಶೆಟ್ಟಿಯವರು ತಮ್ಮ ವೃತ್ತಿ ಜೀವನದ 25 ವರ್ಷ ಪೂರೈಸಿದ ಸವಿ ನೆನಪಿಗಾಗಿ ಶಾಲಾ ಎಸ್.ಡಿ.ಎಮ್.ಸಿ ಯವರು ಅವರನ್ನು ಸನ್ಮಾನಿಸಿದರು.

ಇಲಾಖೆಯ ವತಿಯಿಂದ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಡಾ|| ರಾಜೇಶ ಬಾಯರಿ ಹಾಗೂ ಶಾಲಾ ಮುಖ್ಯ ಗುರುಗಳನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಟೀಚರ್ಸ್ ಕೋ – ಅಪರೇಟಿವ್ ಬ್ಯಾಂಕ್ ಉಡುಪಿ ಇದರ ಅಧ್ಯಕ್ಷರಾದವಿ ಸಂತೋಷ ಶೆಟ್ಟಿ, ಶಿಕ್ಷಣ ಸಂಯೋಜಕರಾದ ಶ್ರೀ ಯುತ ಸತ್ಯಾ ನಾ ಕೊಡೇರಿ ,ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀ ಯುತ ಮಂಜುನಾಥ ನಾಯಕ್ ,ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಗೌರವ ಅಧ್ಯಕ್ಷ ರಾದ ಶ್ರೀ ಯುತ ವಿಜಯ ಕುಮಾರ್ ಶೆಟ್ಟಿ, ಸ್ಥಳೀಯ ವೈದ್ಯರಾದ ಡಾ|| ಅತುಲ್ ಕುಮಾರ್ ಶೆಟ್ಟಿ, ‌ಚಿತ್ತೂರು ಗ್ರಾ.ಪಂ ಉಪಾಧ್ಯಕ್ಷೆಯಾದ ಶ್ರೀಮತಿ ಸುಬ್ಬು , ಶಾಲಾ ಎಸ್ .ಡಿ.ಎಮ್.ಸಿ ಉಪಾಧ್ಯಕ್ಷೆ, ಶ್ರೀಮತಿ ಗೌರಿ ಯು ಅಡಿಗ, ಇಡೂರು ಗ್ರಾ .ಪಂ ಅಧ್ಯಕ್ಷೆಯಾದ ಶ್ರೀಮತಿ ಆಶಾ ಆಚಾರ್ಯ,ಚಿತ್ತೂರು ಗ್ರಾ.ಪಂ ಸದಸ್ಯರಾದ ಶ್ರೀ ಯುತ ದಿವಾಕರ ಆಚಾರ್ಯ, ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಶ್ರೀ ಯುತ ರಾಘವೇಂದ್ರ ಶೆಟ್ಟಿಯವರು ಉಪಸ್ಥಿತರಿದ್ದರು.

ಶಾಲಾ ಸಹಶಿಕ್ಷಕಿಯರಾದ ಶ್ರೀಮತಿ ನಿರ್ಮಲ ಮತ್ತು ಶ್ರೀಮತಿ ದೀಪಾ ಕಾರ್ಯಕ್ರಮದ ನಿರೂಪಣೆ ಮಾಡಿದರು..ವಂಡ್ಸೆ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಯುತ ನಾಗರಾಜ್ ಶೆಟ್ಟಿ ಸರ್ವರಿಗೂ ಧನ್ಯವಾದ ಸಮರ್ಪಣೆ ಮಾಡಿದರು. ಶಾಲಾ ಎಸ್.ಡಿ.ಎಮ್.ಸಿ ಸರ್ವ ಸದಸ್ಯರು , ಶಿಕ್ಷಕವೃಂದವರು, ಸಹಕರಿಸಿದರು. ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.