ಡೈಲಿ ವಾರ್ತೆ: 28/Sep/2023

ವರದಿ : ವಿದ್ಯಾಧರ ಮೊರಬಾ

ಅಂಕೋಲಾದಲ್ಲಿ ಹಿರಿಯ ನಾಗರಿಕರಿಗೆ ಡಿಸಿ ಅವರಿಂದ ಅಭಿನಂದನಾ ಪತ್ರ ವಿತರಣೆ

ಅಂಕೋಲಾ : ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನದ ಅಂಗವಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯ ಹಾಗೂ ಜಿಲ್ಲಾ ಸ್ವೀಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಶನಿವಾರ ಪದ್ಮಶ್ರೀ ಪುರಸ್ಕøತರಾದ ಡಾ.ತುಳಸಿ ಗೌಡ ಹೊನ್ನಳ್ಳಿ, ಸುಕ್ರಿ ಗೌಡ ಬಡಗೇರಿ, ಬೆಳಂಬಾರ ತಾಳೇಬೈಲ್ ಗ್ರಾಮದ ಮಂಕಾಳಿ ಮಾಣು ಗೌಡ ಮತ್ತು ಪಾವರ್ತಿ ನಾಯಕ ಇವರಿಗೆ ಅಭಿ ನಂದನಾ ಪತ್ರ ವಿತರಿಸಿ ಗೌರವಿಸಿದರು.

ಬಳಿಕ ಜಿಲ್ಲಾಧಿಕಾರಿ ಮಾನಕರ ಅವರು ಮಾತನಾಡಿ, ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ನಿಮ್ಮ ನಿರಂತ ರ ಕೊಡುಗೆ ಮತ್ತು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿ ನೀವು ದೇಶದ ಯುವಕರಿಗೆ ಮಾದರಿ ಯಾಗಿದ್ದೀರಿ. ದೇಶದ ಬದಲಾಗುತ್ತಿರುವ ಕಾಲ, ಸಾಮಾಜಿಕ-ರಾಜಕೀಯ-ಆರ್ಥಿಕ ಅಭಿವೃದ್ಧಿ ಮತ್ತು ತಂತ್ರಜ್ಞಾನ ವಿಕಾಸದ ಸಾಕ್ಷೀಯಾಗಿದ್ದೀರಿ. ವಿವಿಧ ಚುನಾವಣೆಗಳಲ್ಲಿ ನಿಮ್ಮ ಮತವನ್ನು ಚಲಾಯಿಸುವ ಮೂಲಕ ನಿಮ್ಮ ಸರ್ಕಾರದ ಆಯ್ಕೆಯನ್ನು ನಿರ್ಧರಿಸುವಲ್ಲಿ ನಿಮ್ಮ ಒಂದು ಮತದ ಮೌಲ್ಯದ ನಿಜವಾದ ಅರ್ಥವನ್ನು ಸಾಬೀತಪಡಿಸಿದ್ದೇರಿ.

ರಾಷ್ಟ್ರ ನಿರ್ಮಾಣದ ಕಡೆಗೆ ಪ್ರಜಾಸತ್ಮಾಕ ಕರ್ತವ್ಯವನ್ನು ಪೂರೈಸಿದ್ದ ಕ್ಕಾಗಿ ನಿಮ್ಮನ್ನು ಗೌರವಿಸುತ್ತದೆ.
ಹಿರಿಯ ನಾಗರಿಕರು ಗರಿಷ್ಠ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಭಾರತ ಚುನಾವಣಾ ಆಯೋಗವು ಗಾಲಿ ಕುರ್ಚಿಗಳು, ಇಳಿಜಾರು ವ್ಯವಸ್ಥೆ (ರ್ಯಾಂಪ್)ಗಳು, ಸ್ವಯಂಸೇವಕರು, ಉಚಿತ ಸಾರಿಗೆ ಹಾಗೂ ಸರತಿ ಸಾಲಿನಲ್ಲಿ ಕಾಯದೆ ನೇರ ಮತದಾನದಂತಹ ಹಲವಾರು ಸೌಲಭ್ಯಗಳನ್ನು ಹೊರತಂದಿದೆ ಎಂದರು. ಅಭಿನಂದನಾ ಪತ್ರ ವಿತರಣೆ ಕಾರ್ಯಯದಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಕೆ.ಸೈಲ್, ತಹಸೀಲ್ದಾರ್ ಅಶೋಕ ಎನ್.ಭಟ್, ಶಿರಸ್ತೆದಾರ ಗಿರೀಶ ಜಾಂಬಳೇಕರ್, ಗ್ರಾಮ ಲೆಕ್ಕಿಗ ಭಾರ್ಗವ ನಾಯಕ, ಅಗಸೂರು ಗ್ರಾಪಂ.ಅಧ್ಯಕ್ಷೆ ನಿರ್ಮಲಾ ನಾಯಕ, ಉಪಾಧ್ಯಕ್ಷ ಯಶ್ವಂತ ಟಿ. ಗೌಡ, ಸದಸ್ಯ ಆನಂದು ಗೌಡ, ಮಾಜಿ ಅಧ್ಯಕ್ಷ ರಾಮಚಂದ್ರ ಡಿ.ನಾಯ್ಕ, ತಾಲೂಕ ಯುವ ಒಕ್ಕೂಟದ ಅಧ್ಯಕ್ಷ ಗೋಪು ನಾಯಕ ಅಡ್ಲೂರು, ತಾಪಂ.ಮಾಜಿ ಅಧ್ಯಕ್ಷೆ ಮಂಜುಳಾ ವೆರ್ಣೇಕರ್, ಸುಬ್ರಾಯ ಎಸ್.ಗೌಡ, ವೆಂಕಮ್ಮಾ ಗೌಡ, ಶೇಖರ ಗೌಡ, ಬಾಬು ಗೌಡ, ಭಾವಿಕೇರಿ ಗ್ರಾಪಂ.ಮಾಜಿ ಅಧ್ಯಕ್ಷ ಪಾಂಡು ಗೌಡ, ಜಿಪಂ.ಮಾಜಿ ಸದಸ್ಯ ವಿನೋದ ಬಿ.ನಾಯಕ ಬಾಸಗೋಡ, ನಾರಾಯಣ ನಾಯಕ, ಪ್ರಮುಖರಾದ ರಾಮಕೃಷ್ಣ ನಾಯಕ ಭಾವಿಕೇರಿ, ಮಹೇಶ ಗೌಡ ಬಡಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.