ಡೈಲಿ ವಾರ್ತೆ: 08/OCT/2023

ಸಿಲಿಂಡರ್ ಸ್ಫೋಟ: ನಿರ್ಗತಿಕರಿಗೆ ಆಸರೆಯಾಗಿದ್ದ ಸಮಾಜ ಸೇವಕ ರಮೇಶ್ ಮೃತ್ಯು

ಮಡಿಕೇರಿ: ನಿರ್ಗತಿಕರಿಗೆ ಆಸರೆಯಾಗಿದ್ದ ಸಮಾಜ ಸೇವಕ, ರಮೇಶ್ ಮನೆಯಲ್ಲಿ ಸಿಲಿಂಡರ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ರಮೇಶ್ ತೀವ್ರವಾಗಿ ಗಾಯಗೊಂಡಿದ್ದು ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ನಸುಕಿನ ಜಾವ 3:30ರ ವೇಳೆಗೆ ರಮೇಶ್ ನಿಧನರಾಗಿದ್ದಾರೆ.

ರಮೇಶ್ ಕೊಡಗು ಜಿಲ್ಲೆಯಲ್ಲಿ ವಿಕಾಸ್ ಜನಸೇವಾ ಟ್ರಸ್ಟ್‌ನ ಆಶ್ರಮ ಸ್ಥಾಪಿಸಿದ್ದರು. ಕಳೆದ 8 ವರ್ಷಗಳಿಂದ ನೂರಾರು ಅನಾಥರಿಗೆ, ವೃದ್ಧರಿಗೆ, ನಿರ್ಗತಿಕರಿಗೆ ಆಸರೆಯಾಗಿದ್ದರು. ಇದೀಗ ರಮೇಶ್ ತಮ್ಮ ಪತ್ನಿ, ಮೂವರು ಹೆಣ್ಣು ಮಕ್ಕಳು, ತಂದೆ ಹಾಗೂ ಆಶ್ರಮದಲ್ಲಿ ತಾವು ಆಸರೆಯಾಗಿದ್ದ 36 ಅನಾಥರನ್ನು ಅಗಲಿದ್ದಾರೆ.