ಡೈಲಿ ವಾರ್ತೆ: 15/OCT/2023

ದಕ್ಷಿಣ ಕನ್ನಡ: ಉಡಾ ವನ್ನು ಕೊಂದು ಬಳಿಕ ಅದರೊಂದಿಗೆ ಪೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ವ್ಯಕ್ತಿಯ ಮೇಲೆ ಪ್ರಕರಣ ದಾಖಲು!

ಬಂಟ್ವಾಳ : ಭಾರತದ ಅಪರೂಪದ ವನ್ಯ ಜೀವಿಗಳಲ್ಲಿ ಒಂದಾದ ಉಡಾ (indian monitor lizard) ವನ್ನು ವ್ಯಕ್ತಿಯೋರ್ವ ಬೇಟೆಯಾಡಿ ಬಳಿಕ ಅದರೊಂದಿಗೆ ಪೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಬಗ್ಗೆ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ವಗ್ಗದಲ್ಲಿ ಬೆಳಕಿಗೆ ಬಂದಿದೆ.

ಉಡಾವನ್ನು ಸಾಯಿಸಿದ ವ್ಯಕ್ತಿಯನ್ನು ವಗ್ಗ ನಿವಾಸಿ ಸುಧಾಕರ ಎಂದು ಗುರುತ್ತಿಸಲಾಗಿದ್ದು ಆತನ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯಿದೆ1972 ಅನ್ವಯ ಕೇಸ್ ದಾಖಲಾಗಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ 11 ರಂದು ಘಟನೆ ಬೆಳಕಿಗೆ ಬಂದಿದ್ದು ಬೃಹತ್ ಗಾತ್ರದ ಉಡವನ್ನು ಹಿಂಸಾತ್ಮಕ ರೀತಿಯನ್ನು ಸಾಯಿಸಿ ಬಳಿಕ ಅದನ್ನು ತೆಗೆದುಕೊಂಡು ವಿಜ್ರಂಭಿಸುತ್ತಿದ್ದ ಎಂದು ಸ್ಥಳಿಯರು ಮಾಹಿತಿ ನೀಡಿದ್ದು ಜೊತೆಗೆ ಸಾಮಾಜಿಕ ಜಾಲಾ ತಾಣಗಳಲ್ಲಿ ಅದನ್ನು ಹರಿಯ ಬಿಟ್ಟಿದ್ದ. ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಬಂಟ್ವಾಳ ವಲಯ ಅರಣ್ಯಾಧಿಕಾರಿ ಯವರು ಪ್ರಕರಣದ ತನಿಖೆ ನಡಸುತ್ತಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಅಂಥೋಣಿ ಎಸ್‌. ಮರಿಯಪ್ಪ ಮಾಹಿತಿ ನೀಡಿದ್ದಾರೆ.

ಉಡಾ ಸಾಯಿಸಿ ಶೇರ್ ಮಾಡಿದ ಸಾಮಾಜಿಕ ಜಾಲಾತಾಣ ವಾಟ್ಸ್‌ಅಪ್ ಎಡ್ಮಿನ್ ನನ್ನು ವಿಚಾರಣೆ ಕರೆಸಿ ತನಿಖೆ ನಡಸಿದ್ದು ಆತನ ಸಿಡಿಆರ್‌ ಪರಿಶೀಲನೆ ನಢೆಸಿ ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದಿದ್ದಾರೆ.