ಡೈಲಿ ವಾರ್ತೆ: 23/OCT/2023

ನಾಪತ್ತೆಯಾಗಿದ್ದ ಹೆಡ್‌ಕಾನ್‌ ಸ್ಟೇಬಲ್ ಮೃತದೇಹ ಕಾರ್ಕಳದ ಪುಟ್ಟೇರಿಯ ಸಾರ್ವಜನಿಕ ಬಾವಿಯಲ್ಲಿ ಪತ್ತೆ.!

ಕಾರ್ಕಳ: ನಗರ ಪೊಲೀಸ್ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಶೃತಿನ್ ಶೆಟ್ಟಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದು ಇಂದು ಅವರ ಶವವು ಕಾರ್ಕಳದ ಪುಟ್ಟೇರಿಯ ಸಾರ್ವಜನಿಕ ಬಾವಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಶೃತಿನ್ ಶೆಟ್ಟಿ ಕಾಣೆಯಾಗಿರುವ ಕುರಿತು ಅವರ ಪತ್ನಿ ದೂರು ದಾಖಲಿಸಿದ್ದರು.
ಕಾಪು ಜನಾರ್ದನ ದೇವಸ್ಥಾನ ಬಳಿಯಿರುವ ಅಂಗಡಿಮನೆ ನಿವಾಸಿಯಾಗಿರುವ ಶೃತಿನ್ ಶೆಟ್ಟಿ ಗುರುವಾರ ರಾತ್ರಿ 7.30ಕ್ಕೆ ಹೆಂಡತಿಗೆ ಫೋನ್ ಮಾಡಿ ನಾನು ನಂದಿಕೂರಿನಲ್ಲಿದ್ದು, ಮನೆಗೆ‌ ಬರುತ್ತಿರುವುದಾಗಿ ಹೇಳಿದ್ದರು. ನಂತರ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎನ್ನಲಾಗಿದೆ.
ಇದೀಗ ಅವರ ಶವ ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.