ಡೈಲಿ ವಾರ್ತೆ: 12/NOV/2023

ಬಾಳೆಬೆಟ್ಟು ಫ್ರೆಂಡ್ಸ್ ವತಿಯಿಂದ 30 ಗಜಗಳ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಟ: ಬಿ ಪಿ ಎಲ್ ಟ್ರೋಫಿ – 2023

ಕೋಟ: ಬಾಳೆಬೆಟ್ಟು ಫ್ರೆಂಡ್ಸ್ (ರಿ.)ಬಾಳೆಬೆಟ್ಟು ಸಾರಥ್ಯದಲ್ಲಿ
ಸ್ಪರ್ಶ ಇಲೆವೆನ್ ಅರ್ಪಿಸುವ ದೀಪಾವಳಿ ಪ್ರಯುಕ್ತ 30 ಗಜಗಳ ಪ್ರೀಮಿಯರ್ ಲೀಗ್ ಕ್ರಿಕೇಟ್ ಪಂದ್ಯಾಟ ಬಿ ಪಿ ಎಲ್ ಟ್ರೋಫಿ – 2023 ದಿನಾಂಕ 12 ರಂದು ಭಾನುವಾರ ಬಾಳೆಬೆಟ್ಟುವಿನಲ್ಲಿ ನಡೆಯಿತು.

ಪ್ರಿಯಾ ಅಸೋಸಿಯೇಟ್ಸ್ ಮಾಲಕರಾದ ಅಕ್ಷತ್ ರಾಜ್ ರವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಅವರು ಮಾತನಾಡಿ ಬಾಳೆಬೆಟ್ಟು ಫ್ರೆಂಡ್ಸ್ ನ ಸಮಾಜಮುಖಿ ಚಿಂತನೆಯ ಜೊತೆ ಇಂತಹ ಕ್ರೀಡಾ ಸ್ಪೂರ್ತಿ ಗಮನಾರ್ಹ ಎಂದರು.

ಈ ಸಂದರ್ಭದಲ್ಲಿ ಕೋಟ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ ಹಾಡಿಕೆರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ಹೆಚ್ ಕುಂದರ್, ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ್‌ ಜಿ, ತೆಕ್ಕಟ್ಟೆ ಫ್ರೆಂಡ್ಸ್ ಅಧ್ಯಕ್ಷ ಹಾಗೂ ನಿವೃತ್ತ ಯೋಧ ರವಿಚಂದ್ರ ಶೆಟ್ಟಿ, ಪುಣೆ ಸಾಫ್ಟ್ವೇರ್ ಇಂಜಿನೀಯರ್ ಸುಮಂತ್ ಶೆಟ್ಟಿ ದೆವಸ, ಉದ್ಯಮಿಗಳಾದ ಹರ್ಷ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಳೆಬೆಟ್ಟು ಫ್ರೆಂಡ್ಸ್ (ರಿ.) ಬಾಳೆಬೆಟ್ಟು ಇದರ ಅಧ್ಯಕ್ಷರಾದ ರತ್ನಾಕರ ಪೂಜಾರಿ ವಹಿಸಿದ್ದರು.

ಪ್ರಸಾದ್ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.
ನಂತರ 5 ತಂಡಗಳ ಲೀಗ್ ಮಾದರಿಯ ಪಂದ್ಯಾಕೂಟ ನಡೆಯಿತು.