ಡೈಲಿ ವಾರ್ತೆ: 27/NOV/2023

ವರದಿ : ವಿದ್ಯಾಧರ ಮೊರಬಾ

ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ

ಅಂಕೋಲಾ : ಸ್ವತಂತ್ರ ಭಾರತಕ್ಕಾಗಿ ಸಂವಿಧಾನವನ್ನು ರಚಿಸುವ ಮಹತ್ವದ ಕಾರ್ಯವನ್ನು ಪೂರ್ಣಗೊಳಿಸಲು ಸಂವಿಧಾನ ಸಭೆಯು 2ವರ್ಷ 11 ತಿಂಗಳು ತೆಗೆದುಕೊಂಡಿತು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣಕ್ಕಾಗಿ ಭಾರತೀಯ ನಾಗರಿಕರಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಉತ್ತೇಜಿಸಲು ಪ್ರತಿ ವರ್ಷ ನ.26 ರಂದು ಸಂವಿಧಾನದ ದಿನ ಆಚರಿಸುವ ಆರಂಭಕ್ಕೆ ಮುನ್ನಡಿ ಬರೆಯಿತು ಎಂದು ಜೆ.ಎಂ.ಎಫ್.ಸಿ. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ. ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ ಅಂಕೋಲಾ, ವಕೀಲರ ಸಂಘ, ತಾಪಂ.ಅಂಕೋಲಾ, ಹಾಗೂ ವಿವಿಧ ಸರ್ಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬೆಳಂಬರ ಗ್ರಾಪಂ.ನಲ್ಲಿ ಸೋಮವಾರ ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನವು ಭಾರತದ ಸರ್ವೋಚ್ಛ ಕಾನೂನು ಡಾಕ್ಯುಮೆಂಟ್ ಮೂಲಭೂತ ರಾಜಕೀಯ ಸಂಹಿತ, ರಚನೆ, ಕಾರ್ಯವಿಧಾನಗಳು, ಅಧಿಕಾರಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಕರ್ತವ್ಯಗಳನ್ನು ಗುರು ತಿಸುವ ಚೌಕಟ್ಟನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ನಾವು ನಿವೆಲ್ಲರೂ ಸಂವಿಧಾನದ ನಿಯಮಗಳನ್ನು ಪಾಲಿ ಸುವ ಜತೆ ಕಾನೂನಿಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದರು.
ಜೆ.ಎಂ.ಎಫ್.ಸಿ ಸಿವಿಲ್ ನ್ಯಾಯಧೀಶ ಪ್ರಶಾಂತ ಬಾದವಾಡಗಿ ಮಾತನಾಡಿ, ದಿನದ ಕೆಸಲದ ಒತ್ತಡದಲ್ಲಿ ಸಂವಿಧಾನದ ಹಕ್ಕುಗಳಿಗೆ ಚ್ಯುತಿಯಾಗದಂತೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಸರ್ವೊ ತ್ತೋಮುಖ ಬೆಳವಣ ಗಾಗಿ ಕಾನೂನು ಅರಿವು ಅವಶ್ಯ. ಸಾರ್ವಜನಿಕ ಆಸ್ತಿ-ಪಾಸ್ತಿಗಳನ್ನು ಕಾಪಾಡುಕೊಳ್ಳು ವುದಕ್ಕೆ ಸಂವಿಧಾನ ನಿರ್ದೇಶನ ನೀಡಿದೆ. ಕಾನೂನು ಸಮಿತಿ ವತಿಯಿಂದ ಬಡವರಿಗಾಗಿ ಉಚಿತ ಕಾನೂ ನು ನೆರವು ಮತ್ತು ಮಾಹಿತಿ ನೀಡುವ ಸೌಲಭ್ಯವಿದೆ ಎಂದರು.
ತಾಪಂ.ಇಓ ಸುನೀಲ್ ಎಂ.ಮಾತನಾಡಿ, ಮಕ್ಕಳು ಮತ್ತು ಹದಿಹರೆಯದವರು ತಮ್ಮ ಹಕ್ಕುಗಳನ್ನು ತಿಳಿದು ಕೊಳ್ಳಲು ಕಾನೂನು ನೆರವು ಉಪಯುಕ್ತವಾಗುತ್ತದೆ. ಮಕ್ಕಳಿಗೆ ಸಂವಿಧಾನದ ಪುಸ್ತಕ ನೀಡಬೇಕು ಅಥವಾ ಕಾನೂನು ತಿಳುವಳಿಕೆ ಅಂಶಗಳನ್ನು ಮೊಬೈಲ್‍ನಲ್ಲಿ ಸಂಗ್ರಹಿಸುವಂತೆ ಮಾರ್ಗದರ್ಶನ ನೀಡಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ, ಬೆಳಂಬಾರ ಗ್ರಾಪಂ.ಅಧ್ಯಕ್ಷ ಜ್ಯೋತಿ ಡಿ. ಖಾರ್ವಿ ಮಾತನಾಡಿದರು. ಮೂಲಭೂತ ಹಕ್ಕುಗಳ ಮತ್ತು ಕರ್ತವ್ಯಗಳ ಕುರಿತು ವಕೀಲ ಭೈರವ ಡಿ.ನಾಯ್ಕ ಉಪ ನ್ಯಾಸ ನೀಡಿದರು.
ಎಪಿಪಿ ಶಿಲ್ಪಾ ನಾಯ್ಕ, ವಕೀಲರಾದ ಆರ್.ಟಿ.ಗೌಡ, ಉಮೇಶ ನಾಯ್ಕ, ನಿತ್ಯಾನಂದ ಕವರಿ, ನಾಗಾನಂದ ಬಂಟ ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗ್ರಾಪಂ.ಸದಸ್ಯರಾದ ವೆಂಕಟೇಶ ಬಿ. ಗೌಡ, ಬೇಬಿ ವಿ.ಗೌಡ, ಮಂಜುನಾಥ ಕೆ.ನಾಯ್ಕ, ಬುದ್ದು ಗೌಡ, ಕುಸುಮ ವಿ.ಗೌಡ, ಅಜೀತ ಜಿ.ಗೌಡ, ವಿಜಯಕಲಾ ಎಸ್.ತಳಕೇರಿ, ನಾರಾಯಣ ಕೆ.ಮಡಿವಾಳ, ಗ್ರಾಪಂ.ಸಿಬ್ಬಂದಿಗಳಾದ ಈಶ್ವರ ಬಿ. ಹಳ್ಳೇರ, ಮಂಜುನಾಥ ಎಸ್.ಗೌಡ, ಮಂಜುನಾಥ ಯು.ಮಡಿವಾಳ, ವಿಶ್ವನಾಥ ಡಿ.ನಾಯ್ಕ, ನಾಗರತ್ನಾ ಖಾರ್ವಿ, ವಾಡಿಬೊಗ್ರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉಷಾ ನಾಯ್ಕ ಸೇರಿದಂತೆ ಇತರರಿದ್ದರು. ಪಿಡಿಓ ವಿದ್ಯಾ ಗೌಡ ಸ್ವಾಗತಿಸಿ, ನಿರ್ವಹಿಸಿದರು.