ಡೈಲಿ ವಾರ್ತೆ: 09/DEC/2023
ವರದಿ:ವಿದ್ಯಾಧರ ಮೊರಬಾ
ಎನ್.ಇ.ಪಿ ಬೇಕು-ಸಹಿ ಸಂಗ್ರಹ ಅಭಿಯಾನಕ್ಕೆ ಪೂರ್ಣ ಬೆಂಬಲ : ವಿಶ್ವೇಶ್ವರ ಹೆಗಡೆ ಕಾಗೇರಿ
ಅಂಕೋಲಾ : ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ತಿರುವು ಸಿಗಲಿದೆ. ವಿದ್ಯಾರ್ಥಿಗಳ ಆಸಕ್ತಿಗೆ ಶಿಸ್ತಿನ ಅಧ್ಯಯನಕ್ಕೆ ಒತ್ತುಕೊಟ್ಟು, ಕೌಶಲಾ ಧಾರಿತ ಶಿಕ್ಷಣದ ಕನಸನ್ನು ಎನ್‍ಇಪಿ ಮೂಲಕ ನನಸು ಮಾಡಿಕೊಳ್ಳಬಹುದು. ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಯ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಹಲವಾರು ರೀತಿಯ ಅವಕಾಶಗಳನ್ನು ಒದಗಿಸಲಾಗಿದೆ ಎಂದು ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ತಾಲೂಕಿನ ಪೂಜಗೇರಿಯ ಹಿಮಾಲಯ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎನ್. ಇ.ಪಿ ಬೇಕು-ಒಂದು ಕೋಟಿ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿ, ನನ್ನ ರಾಜಕೀಯಕ್ಕೆ ಅಂಕೋಲಾ ಭದ್ರಬುನಾದಿಯಾಗಿದೆ. ದಿ.ಆರ್.ಎನ್.ನಾಯಕ ಅವರ ಸಂಕಲ್ಪದಿಂದ ನಿರ್ಮಿಸಿದ ಈ ಹಿಮಾಲಯ ಶಿಕ್ಷಣ ಸಂಸ್ಥೆಯನ್ನು ಅವರ ಪುತ್ರ ಮಯೂರ ನಾಯಕ ಮುಂದುವರೆ ಸಿಕೊಂಡು ಹಿಮಾಲಯದಷ್ಟು ಎತ್ತರಕ್ಕೆ ಬೆಳಸಿದ್ದು, ಈಗ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದು ಶ್ಲಾಘನೀಯ.
ರಾಜ್ಯ ಸರ್ಕಾರದ ದ್ವಂದ್ವ ನೀತಿಗಳ ಕಾರಣದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಿ, ಯಾವುದೇ ಸಿದ್ಧತೆ ಇಲ್ಲದೆ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವುದು ಅವೈಜ್ಞಾನಿಕ ಕ್ರಮ. ಹಲ ವಾರು ಶಿಕ್ಷಣ ತಜ್ಞರು, ಸಂಘ-ಸಂಸ್ಥೆಗಳ ಪರಿಣತರು, ಶಿಕ್ಷಣ ವಲಯದ ಪ್ರಮುಖರು, ಸಾವಿರಾರು ತಜ್ಞರ ಅಭಿಪ್ರಾಯ ಸಂಗ್ರಹಿಸಿ, ನಿರಂತರ ಅಧ್ಯಯನದಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಚಿಸಲಾ ಗಿದೆ. ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಪಡಿಸಬಾರದೆಂದು ಈ ಅಭಿಯಾನವನ್ನು ರಾಜ್ಯಾ ದಾದ್ಯಂತ ಆಯೋಜಸಿದ್ದೇವೆ. ಆದರೆ ರಾಜ್ಯ ಸರ್ಕಾರ ಈ ನೀತಿ ಹಿಂಪಡೆಯಲು ತಿರ್ಮಾನಿಸಿರುವುದು ರಾಜಕೀಯ ದುರುದ್ದೇಶ ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಣ ಸದಸ್ಯ ರಾಜೇಂದ್ರ ನಾಯ್ಕ, ಜಿಪಂ.ಮಾಜಿ ಸದಸ್ಯ ಜಗದೀಶ ಜಿ. ನಾಯಕ ಮೊಗಟಾ, ಹಿಮಾಲಯ ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯೆ ಸವಿತಾ ಕಾನೂಜಿ, ನಿವೃತ್ತ ಪ್ರಾಚಾರ್ಯ ಜಿ.ಆರ್.ನಾಯಕ ಉಪಸ್ಥಿತರಿದ್ದರು. ಹಿಮಾಲಯ ಕಾಲೇಜಿನ ಪ್ರಾಚಾರ್ಯ ಮಾರುತಿ ಐ.ಮಹಾಲೆ, ವಿದ್ಯಾರ್ಥಿ ಗಣೇಶ ಭಟ್ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಹಿಮಾಲಯ ಕಾಲೇಜಿನ ಅಧ್ಯಕ್ಷರಾದ ಮಯೂರ ಆರ್. ನಾಯಕ, ಬಿಜೆಪಿ ಪಕ್ಷದ ಪ್ರಮುಖರಾದ ವಿನಾಯಕ ಗಾಂವಕರ (ಪಡ್ತಿ), ಜಯಾ ನಾಯ್ಕ, ತಾರಾ ನಾಯ್ಕ, ವಿನಾಯಕ ನಾಯಕ ಮೊಟಗಾ, ಚಂದ್ರಕಾಂತ ನಾಯ್ಕ ಬೊಬ್ರುವಾಡ, ಸಣ್ಣಪ್ಪ ಗೌಡ, ದಾಮೋಧರ ರಾಯ್ಕರ, ಗಣಪತಿ ನಾಯಕ ಶಿಳ್ಯೆ, ಸಾಯಿಕಿರಣ ಶೇಟಿಯಾ, ಗಣಪತಿ ನಾಯ್ಕ ವಂದಿಗೆ ಇತರರು ಪಾಲ್ಗೊಂಡರು.