



ಡೈಲಿ ವಾರ್ತೆ: 19/DEC/2023


ಪವಿತ್ರ ಉಮ್ರಾ ಯಾತ್ರೆ ತೆರಳುತ್ತಿರುವ ಶಫೀಕ್ ಗೂಡಿನಬಳಿಗೆ ಅಭಿನಂದನೆ
ಬಂಟ್ವಾಳ : ಪವಿತ್ರ ಉಮ್ರಾ ಯಾತ್ರೆಗೆ ತೆರಳುತ್ತಿರುವ ಮುಹಮ್ಮದ್ ಶಫೀಕ್ ಗೂಡಿನಬಳಿ ಅವರನ್ನು ಮಂಗಳವಾರ ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಡಲಾಯಿತು.
ನ್ಯಾಯವಾದಿ ಹೇಮಚಂದ್ರ ಹಾಗೂ ಬಂಟ್ವಾಳ ಒನ್ ಡಿಜಿಟಲ್ ಸೇವಾ ಕೇಂದ್ರದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶಫೀಕ್ ಗೂಡಿನಬಳಿ ಅವರ ಯಾತ್ರೆಗೆ ಶುಭಕೋರಿ ನ್ಯಾಯವಾದಿ ಹೇಮಚಂದ್ರ ಅವರ ಕಛೇರಿಯಲ್ಲಿ ಅಭಿನಂಧಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ನ್ಯಾಯವಾದಿ ಹೇಮಚಂದ್ರ, ಬಂಟ್ವಾಳ ಒನ್ ಮುಖ್ಯಸ್ಥ ಸಿರಾಜ್ ಮದಕ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ನಂದಾವರ, ಆಶಿಕ್, ಮುಬೀನ್ ಕುಕ್ಕಾಜೆ, ಮುಸ್ತಫಾ ಸಜಿಪ ಮುನ್ನೂರು, ಸೌದತ್ ಬಾನು, ಫಾತಿಮ ಫರ್ವೀನಾ ಉಪಸ್ಥಿತರಿದ್ದರು.