ಡೈಲಿ ವಾರ್ತೆ: ಫೆ./03/2026

ಮಣಿಪಾಲ| ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಆರೋಪ – ಮಾಲೀಕೆಯ ವಿರುದ್ಧ ಪ್ರಕರಣ ದಾಖಲು

ಮಣಿಪಾಲ: ಅಪ್ರಾಪ್ತ ವಯಸ್ಕನಿಗೆ ಚಾಲನಾ ಅನುಮತಿ ಇಲ್ಲದೆ ಸ್ಕೂಟರ್ ಸವಾರಿ ಮಾಡಲು ಅವಕಾಶ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸ್ಕೂಟರ್ ಮಾಲೀಕೆಯ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಿನಾಂಕ 02-02-2026 ರಂದು ಸಂಜೆ 4.45 ಗಂಟೆ ಸುಮಾರಿಗೆ ಮಣಿಪಾಲ ಪೊಲೀಸ್ ಠಾಣೆಯ PSI ತಿಮ್ಮೇಶ್‌. ಬಿ.ಎನ್‌. ಅವರು ಸಿಬ್ಬಂದಿಗಳೊಂದಿಗೆ ಹೆರ್ಗಾ ಗ್ರಾಮದ ಪರ್ಕಳ ಜಂಕ್ಷನ್ ಬಳಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಸ್ಕೂಟರ್ ಅಡ್ಡಾದಿಡ್ಡಿಯಾಗಿ ಸಾಗುತ್ತಿದ್ದುದನ್ನು ಗಮನಿಸಿ ತಡೆದಿದ್ದಾರೆ.

ಸ್ಕೂಟರ್ ಸವಾರ ಶ್ರೇಯಸ್ (16) ಅಪ್ರಾಪ್ತನಾಗಿದ್ದು, ಚಾಲನಾ ಅನುಜ್ಞಾ ಪತ್ರವಿಲ್ಲದೆ ವಾಹನ ಚಲಾಯಿಸುತ್ತಿದ್ದದ್ದು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಸ್ಕೂಟರ್ ಮಾಲೀಕೆ ಉಷಾ (45) ಅವರ ವಿರುದ್ಧ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 14/2026 ಅಡಿಯಲ್ಲಿ IMV ಕಾಯ್ದೆಯ ಕಲಂ 4, 180, 184 ಹಾಗೂ 199(A) ರಂತೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.