ಡೈಲಿ ವಾರ್ತೆ: 21/DEC/2023
ಕಾವಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ: ಪೂರ್ವಭಾವಿ ಸಭೆ
ಕೋಟ: ಬ್ರಹ್ಮಾವರ ವಲಯದ ಕಾವಡಿ ಸ.ಹಿ.ಪ್ರಾ. ಶಾಲೆಯಲ್ಲಿ ಡಿ.23 ಹಾಗೂ 24ರಂದು ಶತಮಾನೋತ್ಸವ ಸಂಭ್ರಮ ಜರಗಲಿದ್ದು ಈ ಪ್ರಯುಕ್ತ ಪೂರ್ವಭಾವಿ ಸಭೆ ಡಿ. 20ರಂದು ಬುಧವಾರ ಶಾಲೆಯಲ್ಲಿ ಜರಗಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ ಶೆಟ್ಟಿ ಮಾತನಾಡಿ, ಕುಗ್ರಾಮದಂತಿದ್ದ ಕಾವಡಿಯಲ್ಲಿ ವಿದ್ಯಾಭ್ಯಾಸಕ್ಕಾಗಿ ಗರಡಿ ಪರಿಸರದ ಐಗಳ ಮಠದಲ್ಲಿ ಮರಳು ಮೇಲೆ ಅಕ್ಷರಭ್ಯಾಸ ಪ್ರಾರಂಭಗೊಂಡು ಈ ಶಾಲೆ 1923ರಲ್ಲಿ ಸರಕಾರದ ಮಾನ್ಯತೆ ಹೊಂದಿ ಅಧಿಕೃತವಾಗಿ ಕಾರಾರಂಭಿಸಿದ್ದು ಪ್ರಸ್ತುತ ನೂರರ ಸಂಭ್ರಮದಲ್ಲಿದೆ. ಶತಮಾನೋತ್ಸವ ಪ್ರಯುಕ್ತ ಡಿ.23ರಂದು ಬೆಳಗ್ಗೆ 8ಕ್ಕೆ ಶಾಲೆ ಪ್ರಥಮವಾಗಿ ಆರಂಭಗೊಂಡ ಕಾವಡಿ ಗರಡಿಯಿಂದ ಶಾಲೆ ತನಕ ಪುರ ಮೆರವಣಿಗೆ ಅದ್ದೂರಿಯಾಗಿ ನಡೆಯಲಿದೆ. ಅನಂತರ 9ಕ್ಕೆ ಧ್ವಜಸ್ತಂಭ ಉದ್ಘಾಟನೆ, ಧ್ವಜಾರೋಹಣ, ಬಹುಮಾನ ವಿತರಣೆ ನಡೆಯಲಿದ್ದು ಮೋಹನ್ ಕಾಂಚನ್ ಧ್ವಜಸ್ತಂಭ ಉದ್ಘಾಟಿಸಲಿದ್ದಾರೆ. ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷ ಲೋಕೇಶ್ ಕಾಂಚನ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಅನಂತರ ಸಂಜೆ 6ಕ್ಕೆ ಶತಮಾನೋತ್ಸವ ಉದ್ಘಾಟನೆ ನೆರವೇರಲಿದ್ದು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 8.30ಕ್ಕೆ ಶಾಲಾ ವಿದ್ಯಾರ್ಥಿಗಳ ಮನೋರಂಜನೆ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.
ಡಿ.24ರಂದು ಬೆಳಗ್ಗೆ 9ಕ್ಕೆ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ, ಸಂಜೆ 6ಕ್ಕೆ ಗುರುವಂದನೆ ನಡೆಯಲಿದ್ದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮೊದಲಾದವರು ಉಪಸ್ಥಿತರಿರಲಿದ್ದಾರೆ. ಅಪರಾಹ್ನ 2ಕ್ಕೆ ಕುಂದಾಪುರ ರೂಪಕಲಾ ತಂಡದಿಂದ ನಾಟಕ, ಶಾಲಾ
ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ, ಹಳೆ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನ ನಡೆಯಲಿದೆ ಎಂದವರು ತಿಳಿಸಿದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೆ. ಚಂದ್ರಶೇಖರ ಶೆಟ್ಟಿ ಗೌರವಾಧ್ಯಕ್ಷ ಉದಯಚಂದ್ರ ಶೆಟ್ಟಿ ಶಿವರಾಮ ಶೆಟ್ಟಿ ಉಲ್ಲಾಸ್ ಶೆಟ್ಟಿ ಉಪಾಧ್ಯಕ್ಷರಾದ ಮಂಜುನಾಥ ಹೆಬ್ಬಾರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮನಾಭ ಕಾಂಚನ್, ಕಾರ್ಯದರ್ಶಿ ವರದರಾಜ ಶೆಟ್ಟಿ, ಗುರುರಾಜ್ ಕಾಂಚನ್, ನೀಲಕಂಠ ರಾವ್, ಸುನಿಲ್ ಕುಮಾರ್, ನಾರಾಯಣ ಪೂಜಾರಿ, ಲೀಲಾವತಿ ಶೆಟ್ಟಿ ಸುರೇಶ್ ಶೆಟ್ಟಿ ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷ ಲೋಕೇಶ್ ಕಾಂಚನ್, ಸುಧಾಕರ ಕಾಂಚನ್, ಸುಕುಮಾರ್ ಶೆಟ್ಟಿ ಮುಖ್ಯ ಶಿಕ್ಷಕಿ ಉಷಾ ಶೆಟ್ಟಿ ಜತೆ ಕಾರ್ಯದರ್ಶಿ ಯೋಗೀಶ್ ಎಂ.ಶೆಟ್ಟಿ ಖಜಾಂಚಿ ಅಶೋಕ್ ಕುಮಾರ್ ಶೆಟ್ಟಿ ಜತೆ ಖಜಾಂಚಿ ನಾಗರಾಜ್ ಮೊದಲಾದವರಿದ್ದರು.