ಡೈಲಿ ವಾರ್ತೆ: 24/DEC/2023

ವರದಿ: ವಿದ್ಯಾಧರ ಮೊರಬಾ

ಕಾರವಾರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ

ಕಾರವಾರ : ಯಾವುದೇ ಸಮಾಜವು ಪ್ರಗತಿ ಹೊಂದಲು ಸಾಂಘಿಕ ಪ್ರಯತ್ನ ಅಗತ್ಯವಾಗಿದೆ.
ಈ ದಿಶೆ ಯಲ್ಲಿ ಹಲವು ದಶಕಗಳಿಂದ ಹರಿಕಂತ್ರ ಸಮಾಜದ ಸಂಘಟನೆಗಾಗಿ ಸಾಮರಸ್ಯದಿಂದ ದುಡಿದಿದ್ದೇನೆ. ಮುಂದಿನ ದಿನಗಳಲ್ಲಿ ಯುವ ಜನತೆ ಇದರ ಹೊಣೆ ಹೊರಬೇಕಾಗಿದೆ ಎಂದು ಹರಿಕಂತ್ರ ಸಮಾಜದ ಹಿರಿಯ ಧುರೀಣ ಪಿ.ಎಂ.ತಾಂಡೇಲ್ ಹೇಳಿದರು.
ಕಾರವಾರ ನಗರದ ಸಾಗರ ದರ್ಶನ ಸಭಾಭವನದಲ್ಲಿ ಶನಿವಾರ ಜರುಗಿದ ಜಿಲ್ಲಾ ಹರಿಕಂತ್ರ ಕ್ಷೇಮಾಭಿ ವೃದ್ಧಿ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಹರಿಕಂತ್ರ ಸಮಾಜದ ಸ್ವಂತ ಕಟ್ಟಡ ಮತ್ತು ಸಭಾಭವನ ನಿರ್ಮಾಣದ ಕನಸು ಇಂದಿಗೂ ನನಸಾಗಿಲ್ಲ. ಅದು ನನ್ನ ವೈಯಕ್ತಿಕ ಅಭಿಲಾಷೆಯು ಹೌದೂ. ಅದಕ್ಕಾಗಿ ಬೇಡಿಕೆ ಸಲ್ಲಿಸಲು ಈಗಲೂ ಸಿದ್ಧನಿದ್ದೇನೆ. ಪ್ರಗತಿ ಸಾಧಿಸಲು ಬಲಿಷ್ಠ ಸಂಘಟನೆ ರೂಪಗೊಂಡು ಯುವಕರು ಸಮಾನಮನಸ್ಕಾರಾಗಿ ದುಡಿಯಬೇಕು. ನೂತನವಾಗಿ ಅಸ್ತಿತ್ವಕ್ಕೆ ಬಂದ ಸಂಘ ಟನೆ ಹಿರಿಯರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಹಾಗೇಯೇ ಸಮಾಜದ ಪ್ರಗತಿಗಾಗಿಯೂ ನಿರಂತ ರ ಶ್ರಮಿಸಿ, ಉತ್ತಮ ಕಾರ್ಯಗಳ ಮೂಲಕ ಯಶಸ್ವಿಯಾಗಲಿ ಎಂದರು.
ಜಿಲ್ಲಾ ಹರಿಕಂತ್ರ ಕ್ಷೇಮಾಭಿ ವೃದ್ಧಿ ಸಂಘದ ಗೌರವಾಧ್ಯಕ್ಷ ದಿಲೀಪ್ ಅರ್ಗೇಕರ್ ಅಧ್ಯಕ್ಷತೆ ವಹಿಸಿ ಮಾತ ನಾಡಿ, ಸಮುದಾಯದ ಬೆನ್ನೆಲುಬಾಗಿ ಸಂಘ ಕಾರ್ಯ ನಿರ್ವಹಿಸಲಿದೆ. ಸಮಾನಮನಸ್ಕ ಯುವಕರು ಸಂಘಟನೆಯಲ್ಲಿ ತೊಡಗಲಿದ್ದಾರೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮಾಜಿ ಸೈನಿಕ ಶ್ರೀಧರ ಚೌಗಲೆ, ಸಮುದಾಯದ ಕಾರ್ಯಾ ಚಟು ವಟಿಕೆಗಳು ವಿಸ್ತಾರವಾದಷ್ಟು ನಮ್ಮೊಳಗಿನ ಹುಮ್ಮಸ್ಸು ಹೆಚ್ಚುತ್ತದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾ ಡಿದ ಶಂಕರ ಹರಿಕಂತ್ರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರತಿಭಾ ಪ್ರೋತ್ಸಾಹ ಹಮ್ಮಿಕೊಂಡಿದ್ದು, ಸಮಯೋಜಿತ ಮತ್ತು ಅವಶ್ಯಕ ನಿರ್ಧಾರವಾಗಿದೆ. ಹಸಿವು ನೀಗಿಸುವ ಕಾರ್ಯವು ಉಪಚಾರಕ್ಕಿಂತ ಲೇಸು ಎಂದರು.

ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ವಿದ್ಯಾಧರ ಮೊರಬಾ, ಮಹಿಳಾ ಮುಖಂಡರಾದ ರಾಜೇಶ್ವರಿ ಕೇಣ ಕರ, ಮೀನುಗಾರ ಮುಖಂಡ ಹರಿಹರ ಹರಿಕಂತ್ರ, ತದಡಿ ಮೀನುಗಾರ ಸಹಕಾರಿ ಸಂಘದ ಅಧ್ಯಕ್ಷ ಉಮಾಕಾಂತ ಹೊಸ್ಕಾಟಾ ಮಾತನಾಡಿ ಶುಭ ಕೋರಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮಾರುತಿ ಹರಿಕಂತ್ರ ನೂತನ ಸಂಘದ ಪರಿಕಲ್ಪನೆ, ರಚನೆ ಮತ್ತು ಉದ್ದೇಶಗಳ ಕುರಿತು ವಿವರಿಸಿದರು.
ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರೋತ್ಸಾಹ ನಡೆಯಿತು. ಹಿರಿಯ ಧುರೀಣ ಪಿ.ಎಂ.ತಾಂಡೇಲ್, ಹೋರಾಟದ ಉಮಾಕಾಂತ ಹೊಸ್ಕಾಟಾ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಹರಿಹರ ಹರಿಕಂತ್ರ ಹಿಲ್ಲೂರು, ಉದ್ಯಮಿ ನಾಗಪ್ಪ ಹರಿಕಂತ್ರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಂಕರ ಮಾಣ ಹರಿಕಂತ್ರ, ಮೀನುಗಾರ ಮಹಿಳಾ ಒಕ್ಕೂಟದ ಅಧ್ಯಕ್ಷೆ ಸುಶೀಲಾ ಹರಿಕಂತ್ರ, ಅವರನ್ನು ಸನ್ಮಾನಿಸಲಾಯಿತು.
ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಸಂಘಟನೆ ಯಶಸ್ವಿಯಾಗಿ ಮುಂದು ವರೆಯಲ್ಲಿ ಎಂದು ದೂರವಾಣ ಯ ಮೂಲಕ ಶುಭ ಕೋರಿದರು. ಉದ್ಯಮಿ ಆನಂದ ಹರಿಕಂತ್ರ, ಪತ್ರ ಕರ್ತ ಕೆ.ರಮೇಶ, ಸಂಘದ ಮಿಥುನ್ ತಾಂಡೇಲ್, ಸಂಜು ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಜಿಲ್ಲಾಧ್ಯಕ್ಷ ರೋಷನ್ ಹರಿಕಂತ್ರ ಸ್ವಾಗತಿಸಿದರು. ಸಂಘದ ಪ್ರಮುಖರಾದ ರೋಷನ್ ತಾಂಡೇಲ್, ನವೀನ್ ಅರ್ಗೆಕರ್, ಸುನೀಲ್ ತಾಂಡೇಲ್, ರಾಜೇಶ ತಾಂಡೇಲ್, ಭರತ ಖಾರ್ವಿ, ರಾಹುಲ್ ತಾಂಡೇಲ್ ಇತರರಿದ್ದರು. ಬಿ.ಎಲ್.ಸೃಜನ್ ನಿರ್ವಹಿಸಿದರು.