ಡೈಲಿ ವಾರ್ತೆ: 03/JAN/2024
ಬೆಟ್ಟಂಪಾಡಿ : ನೂರಾನಿ ಫ್ಯಾಮಿಲಿ ಟ್ರಸ್ಟ್ ಕುಟುಂಬ ಸಂಗಮ
ಪುತ್ತೂರು : ಬೆಟ್ಟಂಪಾಡಿಯ ನೂರಾನಿ ಫ್ಯಾಮಿಲಿ ಟ್ರಸ್ಟ್ ಇದರ 7 ನೇ ವರ್ಷದ ಕುಟುಂಬ ಸಂಗಮ ಕಾರ್ಯಕ್ರಮವು ಬೆಟ್ಟಂಪಾಡಿಯ ಆರ ಹೌಸ್ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅಬ್ದುಲ್ ಅಝೀಝ್ ಮುಸ್ಲಿಯಾರ್ ಕಾವು ಉದ್ಘಾಟಿಸಿ, ಟ್ರಸ್ಟ್ ಅಧ್ಯಕ್ಷ ಮೂಸಲ್ ಮದನಿ ಕಣ್ಣೂರು ಅದ್ಯಕ್ಷತೆ ವಹಿಸಿದ್ದರು.
ಕುಟುಂಬ ಸದಸ್ಯರಾದ ಅಬ್ದುಲ್ ಖಾದರ್ ರಝ್ವಿ ದೇರಳಕಟ್ಟೆ, ಅಬೂಬಕ್ಕರ್ ಸಅದಿ ಕುಕ್ಕಾಜೆ ಕುಟುಂಬ ಸಂಬಂಧ ಬೆಳೆಸುವುದರ ಬಗ್ಗೆ ಮಾಹಿತಿ ನೀಡಿದರು.
ಕುಟುಂಬ ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಅಂಕತ್ತಳ, ಮೂಸ ಕುಂಞ ಹಾಜಿ ಮಾಡಾವು, ಮುಹಮ್ಮದ್ ಪಳ್ಳತ್ತಾರು, ದಾವೂದ್ ಲತೀಫ್ ಕುಕ್ಕಾಜೆ, ಇಸ್ಮಾಯಿಲ್ ಸಅದಿ ಅಂಕತ್ತಳ, ಖಲಂದರ್ ಹಿಮಮಿ, ಮುಹಮ್ಮದ್ ಹನೀಫ್, ಮುಹಮ್ಮದ್ ಕುಂಞಿ ಅಂಕತ್ತಳ, ಶರೀಫ್ ನಿಡ್ಪಳ್ಳಿ, ಖಲಂದರ್ ಗಡಪಿಲ, ಫಾರೂಕ್ ಗೋಳಿಕಟ್ಟೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಕುಟುಂಬದಲ್ಲಿ ಮೃತರಾದ ಯೂಸುಫ್ ಕಾವು ಹಾಗೂ ಅಸುರು ಬೆಟ್ಟಂಪಾಡಿ ಅವರನ್ನು ಸ್ಮರಿಸಲಾಯಿತು.
ಕುಟುಂಬದ ನಾಲ್ಕು ತಲೆಮಾರಿನ ಮಾವಂದಿರನ್ನು ಗುರುತಿಸಿ ಅವರನ್ನು ಅಭಿನಂದಿಸಲಾಯಿತು.
ಕುಟುಂಬದ ಐದು ಮಂದಿ ಹಿರಿಯರನ್ನು ಸನ್ಮಾನಿಸಲಾಯಿತು,
ಕಳೆದ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ ಹಾಗೂ ಮಹಿಳಾ ಶರೀಅತ್ ಕಾಲೇಜಿನಲ್ಲಿ ಪದವಿ ಪಡೆದ ಕುಟುಂಬದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕುಟುಂಬ ಸದಸ್ಯರಿಂದ ಕಿರಾಅತ್, ಹಾಡು, ಭಾಷಣ, ಕ್ವಿಝ್, ಕ್ರಾಫ್ಟ್, ಮೊದಲಾದ ವೈವಿಧ್ಯಮಯ ಸ್ಪರ್ಧೆಗಳು ನಡೆದವು ಹಾಗೂ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಸ್ವಾಗತಿಸಿ, ವಂದಿಸಿದರು.