



ಡೈಲಿ ವಾರ್ತೆ: 05/JAN/2024


ನಿವೃತ್ತ ಪ್ರಾಂಶುಪಾಲ ಆನಂದರಾಮ ತುಂಗ ನಿಧನ
ಉಡುಪಿ: ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಆನಂದರಾಮ ತುಂಗ (78) ಜ. 4 ರಂದು ಗುರುವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಉಡುಪಿಯ ಐರೋಡಿಯಲ್ಲಿ ವಾಸ್ತವ್ಯವಿರುವ ತುಂಗರು, ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಉಡುಪಿ ಜಿಲ್ಲೆಯ ಪ್ರಮುಖ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ದುಡಿದವರು. ನಿವೃತ್ತಿಯ ಬಳಿಕ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿರುವ ಇವರು, ಅಂತರಾಷ್ಟ್ರೀಯ ರೋಟರಿ ಕ್ಲಬ್ ಹಂಗಾರಕಟ್ಟೆಯಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಮಂಗಳೂರಿನ ಖ್ಯಾತ ಮನೋರೋಗ ತಜ್ಞ ರವೀಶ್ ತುಂಗರವರ ಸಹೋದರಾಗಿದ್ದು,
ಪತ್ನಿ ಸಂಗೀತಗಾರ್ತಿ ಲಲಿತಾ ತುಂಗ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.