



ಡೈಲಿ ವಾರ್ತೆ: 06/JAN/2024


ಇನ್‌ಸ್ಪೈರ್ ಕೋಚಿಂಗ್ ಇನ್‌ಸ್ಟಿಟ್ಯೂಟ್ ವಾರ್ಷಿಕೋತ್ಸವ

ಮಂಗಳೂರು : ಇನ್‌ಸ್ಪೈರ್ ಕೋಚಿಂಗ್ ಇನ್‌ಸ್ಟಿಟ್ಯೂಟ್ ಇದರ 3ನೇ ವಾರ್ಷಿಕೋತ್ಸವವು ಮಂಗಳೂರಿನ ಹಂಪನಕಟ್ಟೆಯ ಡೋನ್ ಬಾಸ್ಕೋ ಹಾಲ್‌ನಲ್ಲಿ ನಡೆಯಿತು.
ಮಂಗಳೂರು ಅನಿ ಎಂಟರ್ ಪ್ರೈಸಸ್ ಇದರ ಮಾಲಕ ಲತೀಫ್ ಗುರುಪುರ , ಆದರ್ಶ್ ವಿದ್ಯಾಸಂಸ್ಥೆಯ ಅಧ್ಯಕ್ಷ ಆಸಿಫ್ ಸೂರಲ್ಪಾಡಿ, ಮಂಗಳೂರು ತಮಾಮ್ ಫರ್ನಿಚರ್ ನ ಮಹಮ್ಮದ್ ರಫೀಖ್,
ಡಾ.ಮುಸ್ತಫಾ ಬಸ್ತಿಕೋಡಿ , ಶೇಖ್ ದಾವೂದ್ , ಡಾ. ಶಾಂತಿ ವಿಜಯ್, ಸಿಂಧು ಸೇಧು, ಅಬ್ದುಲ್ ಲತೀಫ್ ಗೋಲ್ಡನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕೆ.ಜಿ.ಎನ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಫಾರೂಖ್ ಡಿ, ಅಲ್ ಬುಶ್ರಾ ಟ್ರಾವೆಲ್ಸ್‌ನ ಮುಹಮ್ಮದ್ ಸಿದ್ದೀಖ್ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಸ್ಥಾಪಕ ಮುಹಮ್ಮದ್ ಇಸ್ತಿಖಾರ್ ಎಮ್ ಸಂಸ್ಥೆಯ ಅಭಿವೃದ್ಧಿ ಬಗ್ಗೆ ವಿವರಿಸಿದರು. ಪ್ರಾಂಶುಪಾಲೆ ಸುಜಯ ವಾರ್ಷಿಕ ವರದಿ ವಾಚಿಸಿದರು.
ಅಧ್ಯಾಪಕಿ ಲಾವಣ್ಯ ಸ್ವಾಗತಿಸಿ, ಸುಮನ ವಂದಿಸಿದರು.