ಡೈಲಿ ವಾರ್ತೆ: 07/JAN/2024

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ “ಯಕ್ಷ-ರಾಗ-ತಾಳ -ಗಾನ ವೈಭವ” ಕಾರ್ಯಕ್ರಮ

ಕೋಟ:ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಧನುರ್ಮಾಸಾಚಾರಣೆಯ ಸಂದರ್ಭದಲ್ಲಿ “ಯಕ್ಷ-ರಾಗ-ತಾಳ – ಗಾನ ವೈಭವ” ಕಾರ್ಯಕ್ರಮವು ಜ. 6 ರಂದು ಶನಿವಾರ ನಡೆಯಿತು.

ಈ ಕಾರ್ಯಕ್ರಮದಲ್ಲಿ ಭಾಗವತರಾಗಿ ರಾಘವೇಂದ್ರ ಮೈಯ್ಯ, ಪ್ರಸನ್ನ ಭಟ್ ಮತ್ತು ರಕ್ಷಾ ಹೆಗಡೆ , ಹಿಮ್ಮೇಳ ದಲ್ಲಿ ರಾಘವೇಂದ್ರ ಬಾಳಕಲ್(ಮದ್ದಳೆ), ಶಿವಾನಂದ ಕೋಟ(ಚಂಡೆ) ಭಾಗವಹಿಸಿದ್ದರು.
ಕೂಟ ಮಹಾಜಗತ್ತಿನ ಸಾಲಿಗ್ರಾಮ ಅಂಗಸಂಸ್ಥೆಯವರ ಪ್ರಾಯೋಜಕತ್ವದ ಕಾರ್ಯಕ್ರಮದ ಕೊನೆಯಲ್ಲಿ ದೇವಳದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಕಲಾವಿದರಿಗೆ ಶ್ರೀ ದೇವರ ಪ್ರಸಾದದೊಂದಿಗೆ ಶುಭವನ್ನು ಹಾರೈಸಿದರು. ದೇವಳದ ಪ್ರಬಂಧಕ ನಾಗರಾಜ ಹಂದೆಯವರು ಸ್ವಾಗತಿಸಿದರು. ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕಾರ್ಯದರ್ಶಿ ಮಹಾಬಲ ಹೇರ್ಳೆ, ಪೂರ್ವಾಧ್ಯಕ್ಷ ಗೆಳೆಯರ ಬಳಗದ ಶ್ರೀ ಕೆ. ತಾರಾನಾಥ ಹೊಳ್ಳ, ಗ್ರಾಮ ಮೊಕ್ತೇಸರ ಚಿದಾನಂದ ತುಂಗ ಮುಂತಾದವರು ಉಪಸ್ಥಿತರಿದ್ದು ಸಹಕರಿಸಿದರು.