ಡೈಲಿ ವಾರ್ತೆ: 13/Jan/2024
ಬೆಳಗಾವಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ “ಉಪನ್ಯಾಸ ಸರಣಿ” ಕಾರ್ಯಕ್ರಮ
ಬೆಳಗಾವಿ: ಬೆಳಗಾವಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಜ. 11 ರಂದು ನಡೆದ “ಉಪನ್ಯಾಸ ಸರಣಿ” ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ “ಕೀರ್ತನ ಸಾಹಿತ್ಯದಲ್ಲಿ ಸಾಮಾಜಿಕ ವಿಡಂಬನೆ” ವಿಷಯ ಕುರಿತು ಶ್ರೀ ಎಸ್.ಬಿ.ತಾರದಾಳೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಉಪನ್ಯಾಸ ನೀಡಿದರು.
ಸ್ವಾಗತ ಹಾಗೂ ಅತಿಥಿಗಳ ಪರಿಚಯವನ್ನು ಮತ್ತು ಪ್ರಾಸ್ತಾವಿಕ ನುಡಿಯನ್ನು ವಿಭಾಗದ ಮುಖ್ಯಸ್ಥರಾದ ಡಾ.ಬಿ.ಎಸ್. ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷೀಯ ನುಡಿಯನ್ನು ಪ್ರಾಂಶುಪಾಲರಾದ ಡಾ.ಆರ್.ಎಸ್. ಮಾಂಗಳೇಕರ ಅವರು ಹೇಳಿದರು. ಕುಮಾರಿ ಅಕ್ಷತಾ ನನ್ನೋಜಿ ಪ್ರಾರ್ಥನೆ ಹಾಡಿದರು, ಕುಮಾರಿ ತಬಸುಮ್ ನೇಗಿನಾಳ ನಿರೂಪಣೆ ಮಾಡಿದರು. ಡಾ.ಪ್ರವೀಣ ಅ. ಕೋರ್ಬು( ಐಕ್ಯೂಎಸಿ ಸಂಯೋಜಕರು) ಅರ್ಥಶಾಸ್ತ್ರ ವಿಭಾಗದ ಶ್ರೀಮತಿ ಸವಿತಾ ಚೌಗಲೆ ಡಾ. ಪಿ.ಎ.ಘಂಟಿ,ಡಾ.ಜ್ಯೋತಿ ಯಮಕನಮರಡಿ ಹಾಗೂ ಇನ್ನುಳಿದ ಬೋಧಕ ಮತ್ತು ಬೋಧಕೇತರ ವರ್ಗದವರು
ಭಾಗಿಯಾಗಿದ್ದರು. ವಂದನಾರ್ಪಣೆಯನ್ನು
ಡಾ. ಸಿ.ಆರ್ ಪಾಯನ್ನವರ ಮಾಡಿದರು ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು.