ಡೈಲಿ ವಾರ್ತೆ: 16/Jan/2024

ವಿಟ್ಲ : ಡಿ’ ಗ್ರೂಪ್ ವಿಟ್ಲ ಹಾಗೂ ಜನಪ್ರಿಯ ಆಸ್ಪತ್ರೆ ಹಾಸನ ವತಿಯಿಂದ ಉಚಿತ ಆರೋಗ್ಯ ಹಾಗೂ ರಕ್ತದಾನ ಶಿಬಿರ

ಬಂಟ್ವಾಳ : ಡಿ.ಗ್ರೂಪ್ ವಿಟ್ಲ ಇದರ 15 ನೇ ವಾರ್ಷಿಕದ ಪ್ರಯುಕ್ತ ಜನಪ್ರಿಯ ಆಸ್ಪತ್ರೆ ಹಾಸನ ಹಾಗೂ ಮಂಗಳೂರು, ಮತ್ತು ಮಂಗಳೂರಿನ ಬ್ಲಡ್ ಡೋನರ್ಸ್ ಹಾಗೂ ವೆನ್ಲಾಕ್ ಆಸ್ಪತ್ರೆ ಇವುಗಳ ಸಹಯೋಗ ದೊಂದಿಗೆ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರವು ವಿಟ್ಲದ ಬ್ರೈಟ್ ಆಡಿಟೋರಿಯಂ ನಲ್ಲಿ ನಡೆಯಿತು.

ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬ್ ಮಹಮ್ಮದ್ ನಸೀಹ್ ದಾರಿಮಿ ಶಿಬಿರವನ್ನು ಉದ್ಘಾಟಿಸಿದರು. ಡಿ ಗ್ರೂಪ್ ಅಧ್ಯಕ್ಷ ಖಲಂದರ್ ಪರ್ತಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಹಾಸನದ ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ. ಅಬ್ದುಲ್ ಬಶೀರ್ ವಿ.ಕೆ ಅವರು ಆರೋಗ್ಯ ಶಿಬಿರದ ನೇತ್ರತ್ವ ವಹಿಸಿದ್ದರು.

ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ, ವಿಟ್ಲ ಚರ್ಚ್ ನ ಧರ್ಮಗುರು ರೆ| ಫಾ| ಐವನ್ ಮೈಕಲ್ ರೋಡ್ರಿಗಸ್, ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ.ಎಸ್. ಮಹಮ್ಮದ್, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್ ಕೆ.ಬಿ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ನೋಟರಿ ಅಬೂಬಕರ್ ವಿಟ್ಲ,
ಜಮೀಯ್ಯತುಲ್ ಫಲಾಹ್ ಬಂಟ್ವಾಳ ತಾಲೂಕು ಅದ್ಯಕ್ಷ ರಶೀದ್ ವಿಟ್ಲ, ನ್ಯಾಯವಾದಿ ಜಯರಾಮ ರೈ, ಅಬ್ದುಲ್ ಖಾದರ್ ಬದ್ರಿಯಾ, ಪ್ರಭಾಕರ ಶೆಟ್ಟಿ ದಂಬೆಕಾನ,
ಡಿ ಗ್ರೂಪ್ ಗೌರವಾಧ್ಯಕ್ಷ ಅಬ್ದುಲ್ ಅಝೀಝ್ ಸನಾ, ಅಬ್ದುಲ್ ಖಾದರ್ ಬದ್ರಿಯಾ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಿ.ಕೆ.ಎಂ. ಅಶ್ರಫ್, ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮನಾಥ ವಿಟ್ಲ, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷೆ ಜಲಜಾಕ್ಷಿ, ಜೆಸಿಐ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಪೆಲ್ತಡ್ಕ, ರೋಟರಿ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಬ್ರಹ್ಮಾವರ, ಬಾಬು ಕೆ.ವಿ, ರವಿಪ್ರಕಾಶ್ ವಿಟ್ಲ, ಎಸ್ಡಿಪಿಐ ಮುಖಂಡ ರಿಯಾಝ್ ಕಡಂಬು, ಕೆ.ಎ. ಹಮೀದ್ ಕೊಡಂಗಾಯಿ, ಕನ್ಯಾನ ಗ್ರಾ.ಪಂ ಸದಸ್ಯ ಅಬ್ದುಲ್ ಮಜೀದ್, ಪರ್ತಿಪ್ಪಾಡಿ ಜುಮಾ ಮಸೀದಿ ಅಧ್ಯಕ್ಷ ಹಕೀಂ ಪರ್ತಿಪ್ಪಾಡಿ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಮುಹಮ್ಮದ್ ಅಲಿ ವಿಟ್ಲ, ಸಮದ್ ಮೇಗಿನಪೇಟೆ, ನವಾಝ್ ಮೇಗಿನಪೇಟೆ, ಇರ್ಷಾದ್ ಸೆಲೆಕ್ಟ್, ರಾಝಿಕ್ ಕಿಸ್ವ, ವಿ.ಕೆ.ಎಂ.ಹಂಝ, ಉಬೈದ್ ವಿಟ್ಲ ಬಝಾರ್, ನೌಶೀನ್ ಬದ್ರಿಯಾ, ಹಂಝ ಡಿ, ರಿಯಾಝ್ ವಿ.ಎಚ್, ಮನ್ಸೂರ್ ಕೆಲಿಂಜ, ರಾಝೀಕ್ ಮೇಗಿನಪೇಟೆ, ಬಶೀರ್ ಬೊಬ್ಬೆಕೇರಿ, ಅಬೂಬಕ್ಕರ್ ಅನಿಲಕಟ್ಟೆ, ಶಾಕಿರ್ ಅಳಕೆಮಜಲು ತೌಸಿಪ್ ಎಂ.ಜಿ, ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಅಬ್ದುಲ್ ಬಶೀರ್ ವಿ.ಕೆ.ಅವರನ್ನು ಸನ್ಮಾನಿಸಲಾಯಿತು.

ವಿವಿಧ ರೋಗಗಳ ನುರಿತ ತಜ್ಞ ವೈದ್ಯರುಗಳಾದ ಡಾ. ಅನೂಪ್, ಡಾ. ಅರವಿಂದ್, ಡಾ.ಸಹೀರ್ ವಿ.ಕೆ, ಡಾ.ಅವಿನಾಶ್, ಡಾ.ಆಲಂ ನವಾಝ್, ಡಾ.ಕಿರಾಸ್ ಪರ್ತಿಪ್ಪಾಡಿ, ಡಾ.ಮುಹಮ್ಮದ್ ನುಹ್ಮಾನ್, ಡಾ.ಶಾರೂಕ್ ಅಬ್ದುಲ್ಲಾ, ಡಾ.ಶಫೀಕ್ ಅಹಮದ್. ಡಾ.ಮುಹಮ್ಮದ್ ಅಫರ್, ಡಾ.ಮುಹಾದ್, ಡಾ.ಫಾತಿಮಾ ಇಸ್ಮತ್, ಡಾ.ಹವ್ವಾ ಇಲ್ಫತ್, ಡಾ.ಜೆಸ್ನಿ ಬಶೀರ್, ಡಾ.ಕೌಲತ್ ಶಾಝ್ ಶಾಫಿ, ಡಾ.ಸಅಲ ಅಹ್ಮದ್ ಶಾಫಿ ಸೇರಿದಂತೆ 22 ಮಂದಿ ವೈದ್ಯರುಗಳು ಆರೋಗ್ಯ ತಪಾಸಣೆ ನಡೆಸಿದರು. ಶಿಬಿರದಲ್ಲಿ 103 ಮಂದಿ ರಕ್ತದಾನ ಮಾಡುವ ಮೂಲಕ ಜೀವ ದಾನಿಗಳಾದರು.